Saturday, 14th December 2024

HMD Phones : ಹೆಚ್‌ಎಂಡಿ 105 4ಜಿ, ಹೆಚ್‌ಎಂಡಿ 110 4ಜಿ ಫೋನ್ ಗಳನ್ನುಬಿಡುಗಡೆ ಮಾಡಿದ ಹೆಚ್‌ಎಂಡಿ

HMD Phones

ಬೆಂಗಳೂರು : ಹೆಚ್‌ಎಂಡಿ ಕಂಪನಿಯು ಯೂಟ್ಯೂಬ್ ಫೋನ್‌ಗಳೆಂದೇ ಕರೆಯಲ್ಪಡುವ ಹೆಚ್‌ಎಂಡಿ 105 4ಜಿ ಮತ್ತು ಹೆಚ್‌ಎಂಡಿ 110 4ಜಿ ಫೋನ್‌ಗಳನ್ನು (HMD Phones) ಬಿಡುಗಡೆ ಮಾಡಿದೆ. ಈ ಫೋನ್ ಗಳಲ್ಲಿ ಕ್ಲೌಡ್ ಫೋನ್ ಆಪ್ ಮೂಲಕ ಹೆಚ್‌ಎಂಡಿ ಕಂಪನಿಯು ಯೂಟ್ಯೂಬ್, ಯೂಟ್ಯೂಬ್ ಮ್ಯೂಸಿಕ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ಗಳು ಸಿಗುವಂತೆ ಮಾಡುತ್ತದೆ. ಹೊಸ ಕಾಲದ ಮನರಂಜನೆ ಮತ್ತು ಆಧುನಿಕ ಅನುಕೂಲತೆಯನ್ನು ಎಲ್ಲರಿಗೂ ಒದಗಿಸಲು ಈ ಫೋನ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಈ ಫೋನ್‌ಗಳು ಮನರಂಜನೆ ಮತ್ತು ಮಾಹಿತಿಯನ್ನು ಏಕಕಾಲಕ್ಕೆ ನೀಡುತ್ತವೆ.

ಮೊದಲೇ ಲೋಡ್ ಮಾಡಿರುವ ಆಪ್ ಮೂಲಕ ಇಂಟರ್‌ನೆಟ್ ಲಭ್ಯತೆ ಇಲ್ಲದಿದ್ದರೂ ಸುರಕ್ಷಿತ ಯುಪಿಐ ವಹಿವಾಟುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ಫೋನ್‌ಗಳನ್ನು ಹೊಂದಿರುವುದು ವಿಶೇಷವಾಗಿದೆ. ಈ ಫೀಚರ್ ಈ ಫೋನ್‌ಗಳನ್ನು ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ಹಣವನ್ನು ಕಳುಹಿಸುವಾಗ ಆಗಲಿ ಅಥವಾ ದಿನಸಿ ವಸ್ತುಗಳಿಗೆ ಪಾವತಿ ಮಾಡುವಾಗಲೇ ಇರಲಿ ಈ ಫೋನ್‌ಗಳು ನೀವು ಎಲ್ಲಿದ್ದರೂ ಹೇಗಿದ್ದರೂ ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿ ಮಾಡುವ ಸೌಲಭ್ಯ ಒದಗಿಸುತ್ತವೆ.

ವಿಶೇಷವಾಗಿ ಈ ಫೋನ್‌ಗೆ ಒಂದು ವರ್ಷದ ರಿಪ್ಲೇಸ್ ಮೆಂಟ್ ಗ್ಯಾರಂಟಿ ಇದೆ. ಆ ಸೌಲಭ್ಯದ ಮೂಲಕ ಬಳಕೆದಾರರು ನೆಮ್ಮದಿಯಿಂದ ಕೊಡಬಹುದು. ನೀವು ಎಂದಿಗೂ ಅವರ ಸಂಪರ್ಕದಿಂದ ದೂರ ಇರದಂತೆ ಮಾಡುತ್ತದೆ.

ಈ ಸುದ್ದಿಯನ್ನೂ ಓದಿ:

ಈ ಫೋನ್ ಗಳ ಬಿಡುಗಡೆಯ ಕುರಿತು ಮಾತನಾಡಿದ ಹೆಚ್‌ಎಂಡಿ ಇಂಡಿಯಾ & ಎಪಿಎಸಿಯ ಸಿಇಒ ಮತ್ತು ವಿಪಿ ಶ್ರೀ ರವಿ ಕುನ್ವಾರ್ ಅವರು, “ಸೊಗಸಾದ ಹೊಸ ಸ್ಟೈಲಿಷ್ ವಿನ್ಯಾಸವುಳ್ಳ, ಮತ್ತು ಯೂಟ್ಯೂಬ್ ಮೂಲಕ ಮನರಂಜನೆ ಒದಗಿಸುವ, ಜೊತೆಗೆ ಯುಪಿಐ ಸೌಲಭ್ಯಗಳನ್ನು ಒದಗಿಸುವ ಹೆಚ್‌ಎಂಡಿ 105 4ಜಿ ಮತ್ತು ಹೆಚ್‌ಎಂಡಿ 110 4ಜಿ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೆಚ್‌ಎಂಡಿ ಕಂಪನಿಯು ಭಾರತದ ಜನರಿಗೆ ಟೇಬಲ್ ಮೇಲೆ ಹೊಸ ಆವಿಷ್ಕಾರಗಳನ್ನು ತಂದು ಕೊಡುವ ಪರಂಪರೆ ಮುಂದುವರಿಸಿದೆ. ಯೂಟ್ಯೂಬ್ ಬಳಕೆ ಮತ್ತು ಯುಪಿಐ ಸೌಲಭ್ಯಗಳನ್ನು ಒದಗಿಸುವ ಈ ಸಾಧನಗಳು ನಾವೀನ್ಯತೆಯ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಪುರಾವೆಯಾಗಿದೆ. ಈ ಆಧುನಿಕ ಅನುಕೂಲತೆಗಳನ್ನು ವಿಸ್ತಾರವಾದ ಗ್ರಾಹಕ ವಲಯಕ್ಕೆ ಒದಗಿಸಲು ನಾವು ಉತ್ಸುಕರಾಗಿದ್ದೇವೆ. ಈ ಫೋನ್ ಗಳ ಬಿಡುಗಡೆ ಮೂಲಕ ಡಿಜಿಟಲ್ ಅಂತರವನ್ನು ನಿವಾರಿಸುವ ಮತ್ತು ನಮ್ಮ ಫೀಚರ್ ಫೋನ್ ವಿಭಾಗದಲ್ಲಿ ಆರ್ಥಿಕ ಪಾವತಿ ಸೌಲಭ್ಯವನ್ನು ಒದಗಿಸುವ ನಮ್ಮ ಉದ್ದೇಶವನ್ನು ಈಡೇರಿಸಿಕೊಂಡಿದ್ದೇವೆ” ಎಂದು ಹೇಳಿದರು.

ಈ ಫೋನ್‌ಗಳ ವಿಶೇಷತೆ ಏನು?

ಹೊಸ ಮಾದರಿಯ ವಿನ್ಯಾಸ: ಅನುಕೂಲತೆ ಮತ್ತು ಬಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ಗಳನ್ನು ರಚಿಸಲಾಗಿದೆ. ಈ ಫೋನ್‌ಗಳು ಹಿಡಿಯಲು ಮತ್ತು ಬಳಸಲು ಸುಲಭವಾಗುವಂತೆ ವಿನ್ಯಾಸಗೊಂಡಿದೆ. ನಿಮ್ಮ ದೈನಂದಿನ ಜೀವನದಲ್ಲಿ ಬಳಕೆಗೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ.

ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ: ಈ ಫೋನ್‌ಗಳು ಶಕ್ತಿಯುತ 1450 ಎಂಎಎಚ್ ಬ್ಯಾಟರಿ ಹೊಂದಿದ್ದು, ನೀವು ಸದಾ ಕಾಲ ಸಂಪರ್ಕದಲ್ಲಿರಲು ಅನುವು ಮಾಡಿ ಕೊಡುತ್ತದೆ.

ಮಲ್ಟಿಮೀಡಿಯಾ ಫೀಚರ್‌ಗಳು : ಎಂಪಿ3 ಪ್ಲೇಯರ್, ವೈರ್‌ಲೆಸ್ ಎಫ್ಎಂ ರೇಡಿಯೋ, 32 ಜಿಬಿ ಎಸ್ ಡಿ ಕಾರ್ಡ್ ಬಳಸಬಹುದಾದ ವ್ಯವಸ್ಥೆ, ಫೋನ್ ಟಾಕರ್ ಇತ್ಯಾದಿ ಫೀಚರ್ ಗಳಿವೆ.

ಬಹು ಭಾಷಾ ಬೆಂಬಲ: 13 ಭಾಷೆಗಳು ಈ ಫೋನ್ ನಲ್ಲಿ ಬಳಕೆಗೆ ಲಭ್ಯವಿದೆ ಮತ್ತು 23 ಭಾಷೆಗಳ ರೆಂಡರಿಂಗ್ ಬೆಂಬಲದೊಂದಿಗೆ ದೊರೆಯುತ್ತದೆ.

ಲಭ್ಯತೆ ಮತ್ತು ಬೆಲೆ: ಹೆಚ್‌ಎಂಡಿ 105 4ಜಿ ಫೋನ್ ಕಪ್ಪು, ಸಯಾನ್ ಮತ್ತು ಪಿಂಕ್ ಬಣ್ಣಗಳಲ್ಲಿ ದೊರೆಯುತ್ತದೆ.
ಹೆಚ್‌ಎಂಡಿ 110 4ಜಿ ಫೋನ್ ಟೈಟಾನಿಯಂ ಮತ್ತು ನೀಲಿ ಬಣ್ಣಗಳಂತಹ ಸೊಗಸಾದ ಬಣ್ಣಗಳಲ್ಲಿ ದೊರೆಯುತ್ತದೆ. ಹೆಚ್‌ಎಂಡಿ 105 4ಜಿ ಬೆಲೆ ರೂ. 2199 & ಹೆಚ್‌ಎಂಡಿ 110 4ಜಿ ಫೋನಿನ ಬೆಲೆ ರೂ. 2399. ಈ ಫೋನ್ ಗಳು ರಿಟೇಲ್ ಅಂಗಡಿಗಳು, ಇ-ಕಾಮರ್ಸ್ ಸೈಟ್‌ಗಳು ಮತ್ತು hmd.com ನಲ್ಲಿ ಲಭ್ಯವಿದೆ.