Wednesday, 11th December 2024

Radhika Anant Ambani: ‘ಸಜ್ನಾ ವೇ ಸಜ್ನಾ’ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ ರಾಧಿಕಾ ಅನಂತ್ ಅಂಬಾನಿ!

Radhika Anant Ambani

ಮುಂಬೈ : ರಾಧಿಕಾ ಅನಂತ್‌ ಅಂಬಾನಿ (Radhika Anant Ambani) ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿರುವವರು. ಇವರ ಡ್ರೆಸ್ಸಿಂಗ್‌ನಿಂದ ಹಿಡಿದು ಸರಳತೆಯವರೆಗೂ ಎಲ್ಲರ ಕಣ್ಮನ ಸೆಳೆದವರು. ಬಾಲಿವುಡ್‍ನ ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಅವರು ಹಾಡಿರುವ ʼಚಮೇಲಿʼ ಸಿನಿಮಾದ  ‘ಸಜ್ನಾ ವೆ ಸಜ್ನಾ’ ಹಾಡಿಗೆ ರಾಧಿಕಾ ಅನಂತ್ ಅಂಬಾನಿ ಸ್ನೇಹಿತರೊಬ್ಬರ ಮದುವೆಯಲ್ಲಿ ಸೊಂಟ ಬಳುಕಿಸಿದ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಇದನ್ನು ಬಳಕೆದಾರರು ಇನ್‍ಸ್ಟಾಗ್ರಾಂ ಪೇಜ್‍ನಲ್ಲಿ  ಹಂಚಿಕೊಂಡ ನಂತರ, ಇದಕ್ಕೆ  ಮಿಲಿಯನ್ ವೀವ್ಸ್‌ ಬಂದಿತ್ತು. ಈ ವೈರಲ್ ವಿಡಿಯೊದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ರಾಧಿಕಾ ಅನಂತ್‌ ಅಂಬಾನಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅವರು ಅದ್ಭುತವಾದ ಕಪ್ಪು ಮತ್ತು ಕೆಂಪು ಮಿಶ್ರಿತ ಲೆಹೆಂಗಾವನ್ನು ಧರಿಸಿ ಸಖತ್‌ ಆಗಿ ಮಿಂಚಿದ್ದರು.

ಆದರೆ ರಾಧಿಕಾ ಅನಂತ್‌ ಅಂಬಾನಿ ಧರಿಸಿರುವ ಅದೇ ರೀತಿಯ ಡ್ರೆಸ್ ಅನ್ನು ಕಳೆದ ವಾರ, ನಟಿ ಅನನ್ಯಾ ಪಾಂಡೆ ದೆಹಲಿಯಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‍ನ ಮೆಮೋರೇಬಲ್  ಫಿನಾಲೆಯಲ್ಲಿ ಏಸ್ ಡಿಸೈನರ್ ರೋಹಿತ್ ಬಾಲ್ ಅವರ ಶೋಸ್ಟಾಪರ್ ಆಗಿ ಕಾಣಿಸಿಕೊಂಡಿದ್ದರು.

ರಾಧಿಕಾ ಹುಟ್ಟುಹಬ್ಬದ ಸಂಭ್ರಮ
ಇತ್ತೀಚೆಗೆ ರಾಧಿಕಾ ಅನಂತ್ ಅಂಬಾನಿ ಅಕ್ಟೋಬರ್ 16ರಂದು ತಮ್ಮ ಹುಟ್ಟುಹಬ್ಬವನ್ನು ಅಂಬಾನಿ ಕುಟುಂಬದ ಸೊಸೆಯಾಗಿ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಅಂಬಾನಿ ಕುಟುಂಬವು ಮುಂಬೈನ ಆಂಟಿಲಿಯಾದಲ್ಲಿ ಹುಟ್ಟುಹಬ್ಬದ ಸಂತೋಷಕೂಟವನ್ನು ಆಯೋಜಿಸಿತ್ತು. ಅಂಬಾನಿ ಕುಟುಂಬದ ಸಂಬಂಧಿಕರ ಜೊತೆಗೆ ಸ್ನೇಹಿತರಾದ ಜಾನ್ವಿ ಕಪೂರ್, ಎಂಎಸ್ ಧೋನಿ, ಅನನ್ಯಾ ಪಾಂಡೆ, ಸುಹಾನಾ ಮತ್ತು ಆರ್ಯನ್ ಖಾನ್, ಓರಿ, ರಣವೀರ್ ಸಿಂಗ್ ಮತ್ತು ಇತರರು ಈ ಸಂತೋಷಕೂಟದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಬಾಲಿವುಡ್ ಹಿರೋಯಿನ್‍ನಂತಹ ತ್ವಚೆ ನಿಮ್ಮದಾಗಬೇಕಾ? ಈ ವಿಡಿಯೊ ನೋಡಿ

ಓರಿ ಕೇಕ್ ಕತ್ತರಿಸುವ ಸಮಾರಂಭದ ವಿಡಿಯೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಧಿಕಾ ಪತಿ ಅನಂತ್ ಅಂಬಾನಿಗೆ ಕೇಕ್ ತಿನ್ನಿಸಿ ಖುಷಿಪಟ್ಟಿದ್ದಾರೆ. ಹಾಗೇ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ರಾಧಿಕಾ ಅವರ ಪೋಷಕರಾದ ಶೈಲಾ ಮತ್ತು ವೀರೇನ್ ಮರ್ಚೆಂಟ್ ಅವರಿಗೂ ಕೇಕ್‍ ಅನ್ನು ತಿನ್ನಿಸಿದ್ದಾ ಸಂಭ್ರಮ ಪಟ್ಟರು  ರಾಧಿಕಾ ಅಂಬಾನಿ ತನ್ನ ಹುಟ್ಟುಹಬ್ಬಕ್ಕೆ ಬಿಳಿ ಸಿಲ್ಕ್ ಹಾಲ್ಟರ್ ಟಾಪ್ ಮತ್ತು ಕೆಂಪು ಸ್ಕರ್ಟ್ ಅನ್ನು ಧರಿಸಿ ಸಖತ್‌ ಆಗಿ ಕಾಣಿಸಿಕೊಂಡಿದ್ದರು.