Saturday, 14th December 2024

ಬಿಟ್ಟಿ ಮನರಂಜನೆ ಆಗಿದಿರಲಿ

ಮೈತ್ರಿ ಸರಕಾರವನ್ನು ಕೆಡವಿದ್ದಲ್ಲದೆ ಆ ನಂತರ ತಮ್ಮನ್ನು ಅನರ್ಹಗೊಳ್ಳುವಂತೆ ಮಾಡಿದ ರಾಜಕೀಯ ‘ವೈರಿ’ಗಳು ಮತ್ತು ಈಗ ತಮ್ಮ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ರಾಜಕಾರಣದಲ್ಲಿ ಅಕ್ಷಮ್ಯವೆನ್ನದೆ ವಿಧಿಯಿಲ್ಲ.

ಕನ್ನಡದಲ್ಲಿ ಒಂದು ಗಾದೆ ಇದೆ, ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬುದು. ಇದು ಹೆಚ್ಚು ಅರ್ಥ ಪಡೆದುಕೊಳ್ಳುವುದು ಚುನಾವಣಾ ಸಮಯದಲ್ಲಿ. ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲಿ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ. ಕೆಲವು ರಾಜಕಾರಣಿಗಳ ರಾಜಕೀಯ ಚದುರಂಗದಾಟದಲ್ಲಿ ಬಂದ ‘ವಿರಸ’ದ ಪರಿಣಾಮ ಜತೆಗೆ ಸೇಡು, ಕಿಚ್ಚಿಿನ ಪರಿಣಾಮಗಳಿಂದ ತೆರವಾದ ಕ್ಷೇತ್ರಗಳೇ ಆಗಿದ್ದು, ಉಪಚುನಾವಣೆ ನಡೆಯಲು ಕಾರಣವಾಗಿದೆ ಎಂದು ಹೇಳಲು ರಾಜಕೀಯ ಪಂಡಿತರೇ ಆಗಬೇಕಿಲ್ಲ. ಈ ಹದಿನೈದು ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅಸೂಯೆ, ನಿರಾಸೆ, ದ್ವೇಷಗಳಿಂದಾಗಿ ತೊಡೆತಟ್ಟಿಿ ,ಕಚ್ಚೆೆಕಟ್ಟಿಿ ನಿಂತಿದ್ದಾಾರೆ. ಯಾವುದೇ ಚುನಾವಣೆಯಲ್ಲಿ ಮತಭಿಕ್ಷೆಗಳ ಜತೆಗೆ ಎದುರಾಳಿಗಳ ವಿರುದ್ಧ ಟೀಕಿಸುವುದು ಸಾಮಾನ್ಯ. ಆದರೆ, ಅವರ ವೈಯಕ್ತಿಿಕ ನಿಂದನೆ, ಬಾಯಿಚಪಲ ತೀರಿಸಿಕೊಳ್ಳಲು ಮಾತನಾಡುವುದು ಕಂಡುಬರುತ್ತದೆ. ನಿಜ, ರಾಜಕಾರಣದಲ್ಲಿ ಎಲ್ಲರೂ ಶ್ರೀರಾಮಚಂದ್ರರಾಗಿರಬೇಕೆಂದು ಬಯಸಬಾರದು. ಅದು ಸಾಧ್ಯವೂ ಇಲ್ಲ.
ಬಾಯಿಬಿಟ್ಟರೆ ಬಣ್ಣಗೇಡು ಎಂಬುದು ತಿಳಿಯಲಿದೆ. ಆದರೆ, ಕೆಲವು ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಮತ್ತೊೊಬ್ಬರ ಬಾಯಿಂದ ಹೇಳಿಸುತ್ತಾಾರೆ. ಇದಕ್ಕಿಿಂತ ನಾಚಿಕೆಗೇಡು ಮತ್ತೊೊಂದಿಲ್ಲ. ಈಗ ನೋಡಿ, ಅತೃಪ್ತರಾಗಲು ಕಾರಣರಾದವರ ವಿರುದ್ಧ ನಿಂತು ಮಾತನಾಡುವುದು ಸರಿಯೇ? ಮೈತ್ರಿಿ ಸರಕಾರವನ್ನು ಕೆಡವಿದ್ದಲ್ಲದೆ ಆ ನಂತರ ತಮ್ಮನ್ನು ಅನರ್ಹಗೊಳ್ಳುವಂತೆ ಮಾಡಿದ ರಾಜಕೀಯ ‘ವೈರಿ’ಗಳು ಮತ್ತು ಈಗ ತಮ್ಮ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ರಾಜಕಾರಣದಲ್ಲಿ ಅಕ್ಷಮ್ಯವೆನ್ನದೆ ವಿಧಿಯಿಲ್ಲ. ಇದಕ್ಕೆೆಲ್ಲಾಾ ತಮ್ಮ ಪ್ರಚಾರ ಭಾಷಣದಲ್ಲೇ ಅಥವಾ ಮತಯಾಚನೆಯ ವೇದಿಕೆಗಳಲ್ಲಿ ಉತ್ತರ ನೀಡುವುದು ಇವರಿಗೆಲ್ಲಾಾ ಅನಿವಾರ್ಯವಾಗಿದೆ. ಇಂತಹ ಚುನಾವಣೆ ಬಗ್ಗೆೆ ಸಾರ್ವಜನಿಕರಲ್ಲಿ ಅಸಹ್ಯ ಹುಟ್ಟಿಿಸುವುದು ಸಹಜವೇ ಆಗಿರುತ್ತದೆ. ಅಭ್ಯರ್ಥಿಗಳ ವೈಯಕ್ತಿಿಕ ನಿಂದನೆ, ದೂಷಣೆ, ಆರೋಪ ಕುರಿತು ಮಾತುಗಳೆಲ್ಲ ಪ್ರಚಾರ ಭರಾಟೆಯಾಗಿರುತ್ತದೆ. ಹೀಗೆ ಪಾಪ ಮಾಡಿದವನು ಒಮ್ಮೆೆ ತನಗೆ ತಾನೇ ಅಸಹ್ಯಪಟ್ಟುಕೊಂಡು ಅದರಿಂದ ಪಶ್ಚಾಾತ್ತಾಾಪ ಹೊಂದಿದ್ದರೂ ಅವನ ವಿರೋಧಗಳು ಮಾತ್ರ ಆ ಪಾಪವನ್ನು ತಮ್ಮ ಬಾಯಲ್ಲಿ ಪದೇಪದೆ ಹೇಳಿಕೊಂಡು ಅವರೂ ಪಾಪಾತ್ಮರಾಗುವುದೇ ಹೆಚ್ಚು. ಇದನ್ನೇ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬ ಗಾದೆಗೆ ನಿದರ್ಶನವಾಗಿ ಕಾಣಬೇಕಾಗುತ್ತದೆ. ಇನ್ನೂ ಸಾರ್ವಜನಿಕರಿಗಂತೂ ಇಂತಹ ರಾಜಕಾರಣಿಗಳಿಂದ ಬಿಟ್ಟಿಿ ಮನರಂಜನೆ ಸಿಗುವುದು ಸುಳ್ಳಲ್ಲ.