Friday, 13th December 2024

ಸಂಚಾರ ಜಾಗೃತಿ ಅಗತ್ಯ

2022ರ ಮೊದಲ ಐದು ತಿಂಗಳಲ್ಲೇ ದೇಶಾದ್ಯಂತ ಅಪಘಾತದಿಂದ 2357 ಜನರು ಮೃತಪಟ್ಟಿದ್ದಾರೆ ಎಂದು ಅಂಕಿ
ಅಂಶಗಳು ತಿಳಿಸಿವೆ. ರಸ್ತೆ ಅಪಘಾತಗಳು ಹಾಗೂ ಸಾವಿನ ಪ್ರಮಾಣವು ಭಾರತದಲ್ಲಿಯೇ ಅತಿಹೆಚ್ಚು ಎನ್ನಲಾಗಿದ್ದು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿ ಪ್ರಕಾರ, 2021ರಲ್ಲಿ ರಸ್ತೆ ಅಪಘಾತಗಳಲ್ಲಿ 155622 ಜನ ಮೃತಪಟ್ಟಿzರೆ.

೨೦೧೪ರ ನಂತರದಲ್ಲಿ ರಸ್ತೆ ಅಪಘಾತಗಳಲ್ಲಿ ಇಷ್ಟೊಂದು ಜನ ಮೃತಪಟ್ಟಿರು ವುದು ೨೦೨೧ರಲ್ಲಿಯೇ ಎನ್ನಲಾಗಿದೆ. ಸಂಚಾರ ನಿಯಮಗಳ ಪಾಲನೆ ಕಡಿಮೆ ಪ್ರಮಾಣದಲ್ಲಿರುವುದು, ನಿಯಮಗಳ ಅನುಷ್ಠಾನ ತೃಪ್ತಿಕರ ಆಗಿಲ್ಲದಿರುವುದು ಮಾತ್ರವಲ್ಲದೆ ರಸ್ತೆ ಅಪಘಾತಗಳಿಗೆ ಇನ್ನೂ ಹಲವು ಕಾರಣಗಳಿವೆ. ರಸ್ತೆಗಳ ವಿನ್ಯಾಸ ವೈeನಿಕವಾಗಿ ಇಲ್ಲದಿರುವುದು, ನಿರ್ವಹಣೆ ಸರಿಯಾಗಿಲ್ಲದಿರುವುದು, ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವುದು ಮತ್ತು ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಆಗದಿರುವುದು ಅಪಘಾ ತಗಳಿಗೆ ಕಾರಣ ಎನ್ನಲಾಗಿದೆ.

ಅಪಘಾತಗಳಲ್ಲಿ ಮೃತಪಟ್ಟ ಬಹುತೇಕರು ಸೀಟ್ ಬೆಲ್ಟ್ ಹಾಕಿರುವುದಿಲ್ಲ ಎನ್ನಲಾಗಿದೆ. ಸೀಟ್ ಬೆಲ್ಟ ಧರಿಸುವುದು ಕಡ್ಡಾಯವಾಗಿದ್ದರೂ ಈ ನಿಯಮ ವನ್ನು ಉಲ್ಲಂಸುವುದು ಬಹಳ ಸಹಜ ಎಂಬಂತಾಗಿದೆ. ಸೀಟ್ ಬೆಲ್ಟ ಹಾಗೂ ಏರ್ ಬ್ಯಾಗ್‌ಗಳು ಪ್ರಯಾಣಿಕ ವಾಹನಗಳಲ್ಲಿ ತೀರಾ ಅಗತ್ಯವಾದವು. ಇವೆರಡೂ ಒಟ್ಟಾಗಿ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡುತ್ತವೆ. ವಾಹನವು ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಪ್ರಯಾಣಿಕರು ಆಸನದಿಂದ ಎಗರಿ ಬೀಳುವುದನ್ನು ಸೀಟ್ ಬೆಲ್ಟ ತಡೆಯುತ್ತದೆ, ಪ್ರಯಾಣಿಕರ ದೇಹವು ಕಾರಿನೊಳಗಿನ ಗಟ್ಟಿ ವಸ್ತುಗಳಿಗೆ ಬಡಿಯುವುದರಿಂದ ಏರ್ ಬ್ಯಾಗ್ ರಕ್ಷಣೆ ನೀಡುತ್ತದೆ.

ಮುಂದಿನ ಸಾಲಿನ ಆಸನಗಳಲ್ಲಿ ಕುಳಿತಿರುವವರು ಸೀಟ್ ಬೆಲ್ಟ ಧರಿಸದಿದ್ದರೆ, ಎಚ್ಚರಿಕೆಯ ಸಂದೇಶ ನೀಡುವ ವ್ಯವಸ್ಥೆಯು ಹಲವು ವಾಹನಗಳಲ್ಲಿ ಇದೆ. ಇದರಿಂದಾಗಿ ಆ ಆಸನಗಳಲ್ಲಿ ಕುಳಿತವರು ಸೀಟ್ ಬೆಲ್ಟ ಧರಿಸುವ ಮನಸ್ಸು ಮಾಡಬಹುದು. ಆದರೆ ಹಿಂಬದಿಯ ಸವಾರರಿಗೆ ಆ ತರಹ ಯಾವುದೇ ಸೂಚನೆಗಳು ಇಲ್ಲ. ಆದ್ದರಿಂದ ವಾಹನಗಳಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆ ಹೆಚ್ಚಿನ ಆದ್ಯತೆ ಪಡೆದುಕೊಳ್ಳಬೇಕಿದೆ. ಅಲ್ಲದೆ, ಸಂಚಾರ ನಿಯಮಗಳ ಪಾಲನೆಯ ಕುರಿತು ಹೆಚ್ಚಿನ ಜಾಗೃತಿ ಆಗಬೇಕಿದೆ.