Monday, 9th December 2024

ಅಕಾಡೆಮಿ, ಪ್ರಾಧಿಕಾರ ಮತ್ತದೇ ಅಪಸವ್ಯ!

ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಮುಖ ಖಾತೆಗಳ ಹಂಚಿಕೆ ತರುವಾಯ, ಮೈತ್ರಿ ಸರಕಾರದಲ್ಲಿ ನೇಮಕಗೊಂಡಿದ್ದ ಹಲವಾರು ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರನ್ನು ರದ್ದುಗೊಳಿಸಿತ್ತು. ಈಗ ಸರಕಾರ ಒಟ್ಟು 16 ಅಕಾಡೆಮಿ, ಪ್ರಾಧಿಕಾರಗಳಿಗೆ ಹೊಸದಾಗಿ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಇಲಾಖೆಗಳಾದ ಕನ್ನಡ ಅಭಿವೃದ್ಧಿಿ ಪ್ರಾಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಯಕ್ಷಗಾನ, ಜಾನಪದ, ತುಳು, ಕೊಡವ ಸಾಹಿತ್ಯ ಇನ್ನು ಹಲವು ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡಲಾಗಿದೆ. ಮೈತ್ರಿ ಸರಕಾರ ನೇಮಿಸಿದ್ದ ಸದಸ್ಯರ ಅವಧಿ ಇನ್ನು ವರ್ಷವಿರುವಾಗಲೇ ರದ್ದುಗೊಳಿಸಿದ್ದು ಹಲವರ ವಿರೋಧಕ್ಕೂ ಕಾರಣವಾಗಿದೆ.

ಈ ಅಕಾಡೆಮಿ ಮತ್ತು ಪ್ರಾಾಧಿಕಾರದ ಹುದ್ದೆೆಗಳನ್ನು ಹಿಂದಿನಿಂದಲೂ ಗಂಜಿಕೇಂದ್ರಗಳೆಂದು ಕರೆಯಲಾಗುತ್ತದೆ. ಇಂಥ ಹುದ್ದೆೆಗಳಿಗೆ ಮುಖ್ಯವಾಗಿ ರಾಜಕೀಯ ಪಕ್ಷಗಳ ಹಿಂಬಾಲಕರು, ಪಕ್ಷಗಳನ್ನು ಅಧಿಕಾರಕ್ಕೆೆ ತರುವಲ್ಲಿ ಸಹಕರಿಸಿದವರು ಮುಖ್ಯಮಂತ್ರಿಗಳ ಆಪ್ತರು, ಮುಖ್ಯವಾಗಿ ಆಯಾ ಪಕ್ಷಕ್ಕೆ ದುಡಿದವರನ್ನು, ನಿಷ್ಠಾವಂತರನ್ನು ತಂದು ಕೂಡಿಸುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇನ್ನು ಕೆಲವರು ಲಾಬಿ ಮಾಡಿ ಇಂಥ ಹುದ್ದೆೆಗಳಗೆ ಬರುತ್ತಾರೆ. ಕೆಲವರಂತೂ ಬ್ಲ್ಯಾಾಕ್‌ಮೇಲ್ ಮಾಡುವ ಮೂಲಕವೂ ಈ ಅಕಾಡೆಮಿ ಪ್ರಾಾಧಿಕಾರ ಸೇರಿದವರಿದ್ದಾರೆ. ಈ ಪ್ರಾಧಿಕಾರಗಳೆಂದರೆ ಆಳುವ ಸರಕಾರಗಳಿಗೆ ತಮ್ಮ ಮನಸ್ಸಿಿಗೆ ತೋಚಿದವರನ್ನು ನೇಮಕ ಮಾಡುವ ಸ್ವಂತ ಸಂಸ್ಥೆೆಗಳಂತಾಗಿಬಿಟ್ಟಿವೆ. ಸರಕಾರಗಳು ಬದಲಾದಂತೆಲ್ಲ ಈ ಅಧ್ಯಕ್ಷರು, ಸದಸ್ಯರುಗಳು ಬದಲಾಗುತ್ತಲೇ ಇರುತ್ತಾಾರೆ. ಸರಕಾರಗಳ ಈ ವರ್ತನೆಗೆ ಹೈಕೋರ್ಟ್ ಛೀಮಾರಿ ಹಾಕಿದೆಯಾದರೂ, ಚಾಳಿ ಹಾಗೇ ಮುಂದುವರಿಸಿದ್ದಾಾರೆ. ಕಳೆದ ಮೈತ್ರಿ ಸರಕಾರದಲ್ಲಿ ಯಡಿಯೂರಪ್ಪನವರು ವಿಶ್ವಾಾಸಮತ ಸಾಬೀತುಪಡಿಸುವ ವೇಳೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅರವಿಂದ ಮಾಲಗತ್ತಿ ಅವರು, ‘ಯಡಿಯೂರಪ್ಪನವರು ವಿಶ್ವಾಾಸಮತ ಸಾಬೀತು ಪಡಿಸಿದ ಮರುಕ್ಷಣವೇ ರಾಜೀನಾಮೆ ನೀಡುತ್ತೇನೆ’ ಎಂದು ತಾನೊಬ್ಬ ರಾಜಕಾರಣಿಯೆಂಬಂತೆ ಹೇಳಿಕೆ ನೀಡಿದ್ದರು. ಅದು ವಿವಾದವೂ ಆಗಿತ್ತು. ಮಾಲಗತ್ತಿ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಯಡಿಯೂರಪ್ಪನವರು ಹಿಂದಿನ ಸರಕಾರಗಳು ಮಾಡಿದಂಥ ಅಧ್ವಾಾನಗಳನ್ನು ಮಾಡದೇ, ಅಕಾಡೆಮಿ, ಪ್ರಾಾಧಿಕಾರಗಳಿಗೆ ನಿಜವಾಗಲೂ ಯೋಗ್ಯರು, ಸಮರ್ಥರು, ಅರ್ಹರನ್ನೇ ನೇಮಿಸಬೇಕು. ಈಗ ರಾಜ್ಯ ಸರಕಾರ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಕಟಿಸಿದೆ. ಆದರೆ ಅದರಲ್ಲಿ ಪುಸ್ತಕ ಪ್ರಾಾಧಿಕಾರದ ಅಧ್ಯಕ್ಷರಾಗಿ ಆಯ್ಕೆೆಯಾಗಿರುವ ಡಾ.ಎಂ.ಎನ್.ನಂದೀಶ್ ಹಂಜೆ ಅವರನ್ನು ನೇಮಿಸಿದೆ. ಅದೇ ಪ್ರಾಧಿಕಾರಕ್ಕೆೆ ಆಯ್ಕೆಯಾದ ಇಬ್ಬರು ಸದಸ್ಯರನ್ನು ಕೇಳಿದರೆ ಡಾ.ಹಂಜೆ ಅವರು ಯಾರೆಂದು ಗೊತ್ತಿಲ್ಲ ಎನ್ನುತ್ತಾಾರೆ! ಅಧ್ಯಕ್ಷರು ಯಾರೆಂದು ಅಲ್ಲಿನ ಸದಸ್ಯರಿಗೇ ಗೊತ್ತಿಲ್ಲವೆಂದರೆ ಅವರನ್ನು ಹೇಗೆ ನೇಮಕ ಮಾಡಲಾಯಿತೋ ದೇವರೇ ಬಲ್ಲ. ಹಾಗೆ ಇನ್ನೊೊಂದು ಗಮನಿಸಬೇಕಾದ ಸಂಗತಿಯೆಂದರೆ, ಕೆಲವು ಅಕಾಡೆಮಿಗಳಲ್ಲಿ ಅಲ್ಲಿನ ಅಧ್ಯಕ್ಷರಗಿಂತ ಸದಸ್ಯರೇ ಹಿರಿಯರು ಮತ್ತು ಅನುಭವಸ್ಥರಾಗಿರುವುದು. ಒಟ್ಟಾರೆ ಈ ಬಾರಿಯ ನೇಮಕದಲ್ಲೂ ಸಾಕಷ್ಟು ಲೋಪದೋಷ, ಅಪಸವ್ಯಗಳು ನಡೆದಿವೆ. ಹೀಗೆ ಬೇಕಾಬಿಟ್ಟಿ, ಕಾಟಾಚಾರ ಹಾಗೂ ಇಷ್ಟಬಂದಂತೆ ನೇಮಕ ಮಾಡಿದರೆ, ಅಕಾಡೆಮಿಗಳು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಹಾಗೂ ಸಮರ್ಥವಾಗಿ ಕಾರ‌್ಯನಿರ್ವಹಿಸಬಲ್ಲವೋ, ಗೊತ್ತಿಲ್ಲ.