Friday, 13th December 2024

ಚುನಾವಣಾ ಸಮಯದಲ್ಲಿ ಎಚ್ಚರಿಕೆ ಅಗತ್ಯ

ರಾಜ್ಯದಲ್ಲಿ ಇದೀಗ ಪುನಃ ಉಪಚುನಾವಣಾ ಕಾವು ಹೆಚ್ಚಾಗಿದೆ. ಸಿಂದಗಿ ಹಾಗೂ ಹಾನಗಲ್ ಚುನಾವಣಾ ಪ್ರಚಾರಕ್ಕೆ ಶನಿವಾರದಿಂದ ಮೂರು ಪಕ್ಷದವರ ಹಿರಿ-ಕಿರಿ ನಾಯಕರು ಪ್ರಚಾರದ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಅದರಲ್ಲಿಯೂ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜೆಡಿಎಸ್ ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿ ಅವರು ಚುನಾ ವಣಾ ಪ್ರಚಾರಕ್ಕೆ ಹೋದರೆ ಸಹಜವಾಗಿಯೇ ಲಕ್ಷಾಂತರ ಜನ ಸೇರುತ್ತಾರೆ. ಆದರೆ ಈ ಸಮಯದಲ್ಲಿ
ಚುನಾವಣಾ ಪ್ರಚಾರ ಮಾಡುವ ಜತೆಗೆ ಕರೋನಾ ಅಥವಾ ಆರೋಗ್ಯದ ಬಗ್ಗೆಯೂ ಎಚ್ಚರವಹಿಸಬೇಕಿದೆ. ರಾಜ್ಯದಲ್ಲಿ ಈಗ ಕರೋನಾ ಸೋಂಕು ಕಡಿಮೆ ಯಾಗಿದ್ದರೂ, ವೈರಲ್ ಜ್ವರ, ಡೆಂಗ್ಯೂದಂತಹ ಸಮಸ್ಯೆಗಳು ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕರೋನಾ ಕಡಿಮೆಯಾಗಿದ್ದರೂ, ಸೋಂಕು ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚರಿಕೆ ವಹಿಸಲೇಬೇಕಾಗಿದೆ. ಕಳೆದ ಬಾರಿಯೂ ಕರೋನಾ ಸೋಂಕು ನಿಯಂತ್ರಣದಲ್ಲಿದ್ದಾಗಲೇ ಎದುರಾದ ಉಪಚುನಾವಣೆಯ ಪ್ರಚಾರದ ನೆಪದಲ್ಲಿ ಸೋಂಕು ಹಬ್ಬಲು ವೇದಿಕೆ ಯನ್ನು ರಾಜಕೀಯ ಪಕ್ಷಗಳೇ ಮಾಡಿಕೊಟ್ಟವು. ಇದೀಗ ಕರೋನಾ ನಿಯಂತ್ರಣಕ್ಕೆ ಬಂದಿದ್ದು, ಶಾಲಾ ಕಾಲೇಜು ಸೇರಿದಂತೆ ಎಲ್ಲ ಚಟುವಟಿಕೆಗಳು ಆರಂಭವಾಗುತ್ತಿವೆ. ಹೀಗಿರುವಾಗ, ಕರೋನಾ ಮಾರ್ಗಸೂಚಿಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ ಉಪಚುನಾವಣೆಗೆ ಕೆಲವು ಕರೋನಾ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಆದರೆ ಲಸಿಕೆ ಹಾಕಿಸಿಕೊಂಡಿರುವ ಕಾರಣಕ್ಕೆ ಬಹುತೇಕರು, ಈ ಮಾರ್ಗಸೂಚಿಯನ್ನು ಪಾಲಿಸುವುದಿಲ್ಲ ಎನ್ನುವುದು ಹಲವು ಸಮಯದಲ್ಲಿ ಸಾಬೀತಾಗಿದೆ.

ಚುನಾವಣಾ ಪ್ರಚಾರ ಸಮಯದಲ್ಲಿ ಜನರಿಗೆ ಮಾದರಿಯಾಗಬೇಕಾಗಿರುವ ಜನಪ್ರತಿನಿಽಗಳು ಈ ವಿಷಯದಲ್ಲಿ ಮಾದರಿಯಾಗಿ ನಿಲ್ಲಬೇಕಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ಸಮಯದಲ್ಲಿಯೇ ಪ್ರಚಾರವನ್ನು ಮುಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕಿದೆ.