Friday, 13th December 2024

ಸರಕಾರದ ಮೇಲಿದೆ ಮತ್ತೊಂದು ಜವಾಬ್ದಾರಿ

Cyber-crime-header

ರಾಜ್ಯ ರಾಜಧಾನಿ ಬೆಂಗಳೂರು ಹಲವು ಸಮಸ್ಯೆಗಳ ಜತೆಗೆ ರಕ್ಷಣಾ ವಿಚಾರದಲ್ಲಿ ಎರಡು ರೀತಿಯ ಪ್ರಮುಖ ಸಮಸ್ಯೆಗಳನ್ನು
ಎದುರಿಸುತ್ತಿದೆ. ಉಗ್ರವಾದಿಗಳಿಂದ ಸುರಕ್ಷತೆ ಕಾಯ್ದುಕೊಳ್ಳುವುದು ಒಂದೆಡೆಯಾದರೆ, ಮತ್ತೊಂದು ಪ್ರಮುಖ ಸಮಸ್ಯೆ ಸೈಬರ್ ಕ್ರೈಂ.

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಜತೆ ಸಂಪರ್ಕವಿರಿಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಇದ್ದರಿಂದ ಬೆಂಗಳೂರಿನ ಸುರಕ್ಷತೆ ಹಿಂದಿಗಿಂತಲೂ  ಮಹತ್ವ ಪಡೆದು ಕೊಂಡಿದೆ. ಇಂಥ ಸಂದರ್ಭದಲ್ಲಿಯೇ ರಾಜಧಾನಿ ಬೆಂಗಳೂರು ಬಹಳಷ್ಟು ಸೈಬರ್ ಕ್ರೈಂ ಪ್ರಕರಣಗಳನ್ನು ಎದುರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಬೆಂಗಳೂರು ದಿನೇ ದಿನೇ ಅಭಿವೃದ್ಧಿಯತ್ತ ಸಾಗುತ್ತಿರುವ ದಿನಗಳಲ್ಲಿಯೇ ಅಪರಾಧ ಪ್ರಕರಣಗಳಲ್ಲೂ ಏರಿಕೆ ಕಂಡುಬರುತ್ತಿದೆ. ದೇಶದ ಮಹಾನಗರಗಳಲ್ಲಿ ಅತ್ಯಧಿಕ ಸೈಬರ್ ಅಪರಾಧಗಳು ನಡೆಯುವ ಸ್ಥಳ ಎಂಬ ಕುಖ್ಯಾತಿಗೂ ಪಾತ್ರವಾಗುತ್ತಿದೆ.

ದೇಶದಲ್ಲಿ ಹೆಚ್ಚು ತಂತ್ರಜ್ಞಾನ ಬಳಕೆ ಆಗುತ್ತಿರುವ ನಗರಗಳಲ್ಲಿ ಬೆಂಗಳೂರು ಪ್ರಮುಖ ಸ್ಥಾನ ಹೊಂದಿದೆ. ಹೀಗಾಗಿಯೇ ಬೆಂಗ ಳೂರಿನಲ್ಲಿ ಸೈಬರ್ ವಂಚನೆ ಹೆಚ್ಚಾಗಲು ಇರುವ ಕಾರಣ. ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ ಎಂಟು ಭಾಗಗಳಲ್ಲಿ ಸಿಇಎನ್ ಠಾಣೆಗಳನ್ನು ತೆರೆಯಲಾಗಿದೆ. ಆದರೆ ಅಗತ್ಯ ತಂತ್ರಜ್ಞರ ಕೊರತೆಯಿಂದಾಗಿ ಸೈಬರ್ ಕ್ರೈಂಗಳ ತನಿಖೆಯ ವೇಗ ಕಡಿಮೆಯಾಗಿದೆ. ಈ ಸೈಬರ್ ವಂಚನೆ ಪ್ರಕರಣಗಳ ಜಾಲಕ್ಕೆ ಸಿಲುಕಿರುವವರಲ್ಲಿ ವಿದ್ಯಾವಂತರೇ ಹೆಚ್ಚಿದ್ದಾರೆ ಎಂಬುದು ಮತ್ತೊಂದು ಆತಂಕಕಾರಿ ಸಂಗತಿ.

ಪೊಲೀಸರ ಮೇಲೆ ಜವಾಬ್ದಾರಿ ಹೆಚ್ಚಾಗಿದ್ದು, ರಕ್ಷಣಾ ಇಲಾಖೆಯ ಪಾತ್ರವೂ ಮಹತ್ವದ್ದಾಗಿದೆ. ಆದ್ದರಿಂದ ಇದೀಗ ರಾಜ್ಯಧಾನಿ ಯನ್ನು ಕ್ರೈಂ ಪ್ರಕರಣಗಳ ಹಿನ್ನೆಲೆಯಿಂದ ರಕ್ಷಿಸುವ ಹೊಣೆಯಗಾರಿಯೂ ಸಹ ಸರಕಾರದ ಮತ್ತೊಂದು ಮಹತ್ವದ ಜವಾಬ್ದಾರಿ ಯಾಗಿ ಪರಿಣಮಿಸಿದೆ.