Thursday, 19th September 2024

ಸಿದ್ಧವಾಗಿದೆ ರಾಮಮಂದಿರ; ಮರೆಯದಿರಿ ಸಿಂಘಾಲ್ ಕೊಡುಗೆ

೨೦೨೪ರ ಜನವರಿ ೨೨ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟನೆ ಮಾಡಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಕೆಲವೇ ದಿನಗಳಲ್ಲಿ ಕೋಟ್ಯಂತರ ಹಿಂದೂಗಳ ಕನಸು ನನಸಾಗಲಿದೆ. ದೇಶದ ಹಲವಾರು ಕರಸೇವಕರ, ಹಿರಿಯರ ಮತ್ತು ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಪ್ರತಿ -ಲವಾಗಿ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣದ ಚಳವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಅಶೋಕ್ ಸಿಂಘಾಲ್ ಹೆಸರು ಮತ್ತೆ ಮತ್ತೆ ನೆನಪಾಗುವಂ
ತಹದ್ದು. ‘ಮಂದಿರವ ಕಟ್ಟುವೆವು’ ಎನ್ನುವ ಘೋಷವಾಕ್ಯವನ್ನು ಮನೆಮನೆಗೆ ಮುಟ್ಟಿಸುವ ಹಿಂದಿನ ಶಕ್ತಿ ಅಶೋಕ್ ಸಿಂಘಾಲ್ ಅವರದ್ದು. ಅಶೋಕ್ ಸಿಂಘಾಲ್ ಅವರ ನಾಯಕತ್ವದಲ್ಲಿ ಮೊದಲನೇ ಬಾರಿಗೆ ಸಂತರ ಸಮ್ಮೇಳನ(ಧರ್ಮ ಸಂಸತ್ತು)ವನ್ನು ಆಯೋಜಿಸಿತ್ತು. ೧೯೮೪ರಲ್ಲಿ ದೆಹಲಿಯ ಬೃಹತ್ ಆದ ವಿಜ್ಞಾನ ಭವನದಲ್ಲಿ ನಡೆದ ಈ ಮೊದಲ ಧರ್ಮ ಸಂಸತ್ತು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರವನ್ನು ಸ್ಥಾಪಿಸುವ ಐತಿಹಾಸಿಕವಾದ ನಿರ್ಣಯವನ್ನು ಸ್ವೀಕಾರ ಮಾಡಿತು.

ರಾಮ ಮಂದಿರ ನಿರ್ಮಾಣಕ್ಕೆ ಹಿಂದೆ ನೂರಾರು ಹೋರಾಟಗಳು ನಡೆದಿದ್ದರೂ ಅಂದು ತೆಗೆದುಕೊಂಡ ನಿರ್ಣಯವು ಮಂದಿರದ ಸ್ಥಾಪನೆಗೆ ಹೊಸತಾದ
ದಿಕ್ಕನ್ನು ತೋರಿಸಿತು. ಅಲ್ಲಿಂದ ಅಶೋಕ್ ಸಿಂಘಾಲ್ ಅವರು ಒಂದು ದಿನವೂ ವಿಶ್ರಾಂತಿ ಪಡೆಯದೆ ರಾಮ ಮಂದಿರದ ಕನಸನ್ನು ಇಡೀ ಭಾರತಕ್ಕೆ ಹಂಚಲು ಹೊರಟು ನಿಂತರು. ನಂತರ ದೇಶದ ಹಳ್ಳಿ ಹಳ್ಳಿಗಳಲ್ಲಿ ಶ್ರೀರಾಮರಥವು ಚಲಿಸಿತು. ಪ್ರತೀ ಗ್ರಾಮಗಳಲ್ಲಿ ಶ್ರೀ ರಾಮ ಶಿಲಾ ಪೂಜನ ಕಾರ್ಯಕ್ರಮವು ಚಂದವಾಗಿ ನಡೆಯಿತು. ಇಡೀ ಭಾರತದಲ್ಲಿ ರಾಮ ಮಂದಿರದ ಬಗ್ಗೆ ಜಾಗೃತಿ ಮೂಡಿತು. ೧೯೯೦ರಲ್ಲಿ ಪ್ರಮುಖ ಮಂದಿರಗಳ ವಿನ್ಯಾಸಗಾರ ಆದ ಚಂದ್ರಕಾಂತ ಸೋಮಾಪುರ ಅವರನ್ನು ಮಂದಿರದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಂದಿರದ ನೀಲ ನಕಾಶೆ ಸಿದ್ಧ ಮಾಡಿಸಿ, ಅದಕ್ಕೆ ಸಂತರ ಮಂಡಳಿಯಿಂದ ಅಂಗೀಕಾರ ಸಿಂಘಾಲ್ ಪಡೆದರು. ರಾಮಮಂದಿರ ಸಿದ್ಧವಾಗಿ ನಿಂತಿರುವ ಈ ಹೊತ್ತಿನಲ್ಲಿ ಸಿಂಘಾಲ್ ಅವರ ಹೋರಾಟದ ಪುಟಗಳು ನೆನಪಿಗೆ ಬಾರದೇ ಇರದು.

Leave a Reply

Your email address will not be published. Required fields are marked *