ವಿಶ್ವದಾದ್ಯಂತ ಪ್ರತಿ ದಿನ ೫.೮೭ ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ದಿನಗಳಿಂದ ಚೀನಾದಲ್ಲಿ ಸೋಂಕಿನ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ, -, ಗ್ರೀಸ್, ಇಟಲಿ ಸೇರಿ ಹಲವು ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಭಾರತ ದಲ್ಲಿ ದಿನಕ್ಕೆ ಸರಾಸರಿ ೧೫೩ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.
ಹೀಗಾಗಿ ಎರಡು ವರ್ಷಗಳ ಹಿಂದೆ ಕೋವಿಡ್ ಕಲಿಸಿದ ಪಾಠಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ ಸಂದರ್ಭ ಬಂದಿದೆ. ಎರಡು ವರ್ಷಗಳ ಹಿಂದೆ ಕೋವಿಡ್ ೨ನೇ ಅಲೆ ಬಂದಾಗ ಲಾಕ್‌ಡೌನ್ ಅನಿವಾರ್ಯವಾಗಿತ್ತು. ಆ ಸಮಯದಲ್ಲಿ ಜನಸಾ
ಮಾನ್ಯರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ. ರೋಗಭೀತಿಯ ಜತೆಗೆ, ದುಡಿಮೆಯ ಅವಕಾಶಗಳೂ ಇಲ್ಲದೆ ಜನಸಾಮಾನ್ಯರು ಪಡಿಪಾಟಲು ಅನುಭವಿಸುವಂತಾಯಿತು.
ಪರಿಣಾಮವಾಗಿ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಬಿತ್ತು. ಕರೋನಾ ತೀವ್ರತೆ ಇಳಿಮುಖ ವಾದ ನಂತರ ಜನಜೀವನ ಬಹುತೇಕ ಯಥಾಸ್ಥಿತಿಗೆ ಮರಳಿದ್ದರೂ ಆರ್ಥಿಕ ವ್ಯವಸ್ಥೆ ಸುಧಾರಿಸಲು ಬಹಳಷ್ಟು ಸಮಯ ಬೇಕಿತ್ತು. ಇಂಥ ಸಂದಿಗ್ಧ ಸಂದರ್ಭದಲ್ಲಿ ಕರೋ ನಾದ ಮತ್ತೊಂದು ಅಲೆ ದಾಳಿ ಇಟ್ಟಿದೆ. ಈ ಐದನೇ ಅಲೆ ಕೈಮೀರದಂತೆ ನೋಡಿ ಕೊಳ್ಳಬೇಕಾದ ಸವಾಲು ನಮ್ಮೆದುರಿಗಿದೆ. ಪ್ರತಿಯೊಬ್ಬರೂ ಉದಾಸೀನ ಮಾಡದೆ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾ ಗಿ ಅನುಸರಿಸುವುದು ಸೋಂಕನ್ನು ನಿಯಂತ್ರಿಸುವ ಹೋರಾಟ ದಲ್ಲಿ ಪರಿಣಾಕಾರಿಯಾದ ತಂತ್ರ.
ಮಾ ಧರಿಸುವುದು, ಅಂತರ ಕಾಪಾಡಿ ಕೊಳ್ಳುವುದು ಹಾಗೂ ಶುಚಿತ್ವದ ಪಾಠಗಳ ಅನುಸರಣೆಯು ಕರೋನಾ ವಿರುದ್ಧದ ಹೋರಾಟ ದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲವು ಎನ್ನುವುದು ಈಗಾಗಲೇ ಸಾಬೀತಾಗಿದೆ. ಈ ಸರಳ ಸಂಗತಿಗಳನ್ನು ನಿರ್ಲಕ್ಷ್ಯ ಮಾಡದೆ ಪಾಲಿಸುವುದು ವೈಯಕ್ತಿಕ, ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾದುದು.
ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷಾಚರಣೆ ವೇಳೆ ಜನರು ವೈಯಕ್ತಿಕ ಅಂತರ, ಸ್ವಚ್ಛತೆ ಕಾಯ್ದುಕೊಳ್ಳುವುದು, ಕಡ್ಡಾಯ ಮಾ ಧರಿಸುವಿಕೆ ಹಾಗೂ ಕೋವಿಡ್ ಮಾರ್ಗಸೂಚಿ ಪಾಲನೆಗೆ ಒತ್ತು ಕೊಡಬೇಕಿದೆ. ಇಲ್ಲವಾದರೆ ಸರಕಾರಕ್ಕೆ ಮತ್ತೊಂದು ಲಾಕ್‌ಡೌನ್ ಮಾಡು ವುದು ಅನಿವಾರ್ಯವಾ ಗುತ್ತದೆ. ಆಗ ಸಹಜವಾಗಿಯೇ ಜನಸಮೂಹ ಕಂಗಾಲಾಗಬೇಕಾ ಗುತ್ತದೆ. ಆ ಸ್ಥಿತಿಯನ್ನು ತಂದುಕೊಳ್ಳದಿರು ವುದು ನಮ್ಮ ಕೈಯ ಇದೆ.
Read E-Paper click here