ಕೇಂದ್ರದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಇದುವರೆಗೆ ಅನೇಕ ಮಹತ್ವದ ಯೋಜನೆಯಗಳನ್ನು ಘೋಷಿಸಿದೆ. ಆದರೆ
ಕೃಷಿ ಮಸೂದೆ ಜಾರಿಯಲ್ಲಿ ವಿ-ಲವಾಯಿತೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕೃಷಿಗೆ ಪೂರಕವಾಗಲೆಂದು ಕೇಂದ್ರ ಸರಕಾರ ಜಾರಿಗೊಳಿಸಿದ ಮೂರು ಮಸೂದೆಗಳು ಇಂದಿಗೂ ಕಗ್ಗಂಟಾಗಿಯೇ ಉಳಿದಿರುವುದು ದೇಶದ ದುರಂತ ಸಂಗತಿ. ಕೇಂದ್ರ ಸರಕಾರದ ಹೊಸ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ
ಕೇಂದ್ರ ಸರಕಾರದ ನಡುವಿನ ೭ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಆರಂಭದಿಂದಲೂ ವಿರೋಧದ ನಡೆಯಿಂದಲೇ ವಿವಾದಕ್ಕೊಳಗಾಗಿರುವ ಈ ಮಸೂದೆ ಇಂದಿಗೂ, ಪ್ರತಿಭಟನೆ – ಮಾತುಕತೆಗಳ ಮೂಲಕ ವಿವಾದವಾಗಿಯೇ ಉಳಿದಿದೆ.
ಕೃಷಿ ಕಾನೂನನ್ನು ಹಿಂಪಡೆಯಬೇಕೆಂಬ ಪಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಜ.04ರಂದು ಕೇಂದ್ರದ ಮೂವರು ಸಚಿವರು ಸಭೆ ನಡೆಸಿದ್ದಾರೆ. ರೈತರ ಮನವೊಲಿಸುವಲ್ಲಿನ ಪ್ರಯತ್ನಿಸಿದರೂ ಯಾವುದೇ ನಿರ್ಣಯ ತೆಗೆದುಕೊಳ್ಳದೇ ಸಭೆ ಅಂತ್ಯ ಗೊಂಡಿದೆ. ಇದರಿಂದ ವಿವಾದ ಮತ್ತೆ ಮುಂದುವರಿದಂತಾಗಿದೆ. ದೇಶದ ಬಹುದೇಶ ಜನರ ಮೇಲೆ ಈ ಕಾಯಿದೆ ಪ್ರಭಾವ ಬೀರಿ ದ್ದರೂ, ರೈತ ವಲಯದಿಂದ ವ್ಯಕ್ತವಾಗುತ್ತಿರುವ ವಿರೋಧ ವಿವಾದದ ಸ್ವರೂಪ ಪಡೆದಿದ್ದು, ದಿನೇ ದಿನೇ ಕಗ್ಗಂಟಾಗುತ್ತಲೇ ಸಾಗಿದೆ.
ಅನೇಕ ಜನಪ್ರಿಯ ಯೋಜನೆಗಳನ್ನು ಘೋಷಿಸಿದ ಕೇಂದ್ರ ಸರಕಾರಕ್ಕೆ ಕೃಷಿ ಮಸೂದೆ ಸವಾಲಾಗಿ ಪರಿಣಮಿಸಿರುವುದು ದುರಂತದ ಸಂಗತಿ.