ಕರೋನಾ ನಿಯಂತ್ರಿಸುವ ಕಾರ್ಯದಲ್ಲಿ ರಾಜ್ಯ ಸರಕಾರ ಮೊದಲನೇ ಹಂತದಲ್ಲಿ ಬಹುತೇಕ ಯಶಸ್ವಿಗೊಂಡಿದ್ದು ಶ್ಲಾಘನೀಯ ಸಂಗತಿ.
ಇದೀಗ ೨ನೇ ಹಂತದಲ್ಲಿ ಕರೋನಾ ಸೋಂಕು ಪತ್ತೆಯಾಗುತ್ತಿರುವುದರಿಂದ ಜನರು ಮತ್ತೊಮ್ಮೆ ಸುರಕ್ಷತೆಗೆ ಆದ್ಯತೆ ನೀಡಬೇಕಿ ರುವ ಅವಶ್ಯಕತೆ ಕಂಡುಬರುತ್ತಿದೆ. ಕೇರಳ – ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗಗಳಲ್ಲಿ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಅಭಿಯಾನದ ಮುಖಾಂತರವಾಗಿ ಸರಕಾರ ಹಂತ ಹಂತವಾಗಿ ಲಸಿಕೆ ವಿತರಿಸುತ್ತಿದ್ದರೆ, ಮತ್ತೊಂದೆಡೆ ೨ನೇ ಹಂತದಲ್ಲಿ ಸೋಂಕು ಕಂಡುಬರುತ್ತಿದೆ. ಈ ವೇಳೆ ಜನರು ಮತ್ತೊಮ್ಮೆ ಸ್ವಯಂ ಪ್ರೇರಿತವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಅವಶ್ಯಕತೆ ಕಂಡುಬರುತ್ತಿದೆ. ಜನವರಿ ಮಾಸದಲ್ಲಿ ಮೊದಲ ಹಂತದಲ್ಲಿ ೧೩,೪೦೮ ಮಂದಿಗೆ ಲಸಿಕೆ ನೀಡಲಾಗಿದೆ. ೮೦ಸಾವಿರ ಆರೋಗ್ಯ
ಕಾರ್ಯಕರ್ತರೂ ಲಸಿಕೆ ಪಡೆದಿದ್ದಾರೆ.
ಇದೀಗ ಎರಡನೆ ಹಂತದ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದಲ್ಲಿ ಕೋವಿಡ್ ತಡೆ – ನಿವಾರಣೆ – ನಿರ್ಮೂಲನೆ ನಿಟ್ಟಿನಲ್ಲಿ ಸರಕಾರದಿಂದ ಪ್ರಯತ್ನಗಳು ಮುಂದುವರಿದಿವೆ. ಜತೆಗೆ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿವೆ. ಈ ವೇಳೆ ಮತ್ತೊಮ್ಮೆ ಲಾಕ್ ಡೌನ್ ಘೋಷಿಸುವ ಪ್ರಸ್ತಾಪವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಜನರು ಮೊದಲ ಹಂತದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿದಂತೆ ಸ್ವಯಂ ಪ್ರೇರಿತವಾಗಿ ಜಾಗ್ರತೆಗೆ ಆದ್ಯತೆ ನೀಡುವುದು ಅಗತ್ಯ.