ದೇಶದ ರೈತಾಪಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರವು 2022- 2023 ನೇ ಸಾಲಿಗಾಗಿ, ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದ್ದು ಸ್ವಾಗತಾರ್ಹ. ಇದು ಭತ್ತ, ಜೋಳ, ರಾಗಿ, ಹಾಗೂ ಪ್ರಮುಖ ದ್ವಿದಳ ಧಾನ್ಯಗಳು ಸೇರಿದಂತೆ 14 ಕೃಷಿ ಬೆಳೆಗಳಿಗೆ ಅನ್ವಯಿಸಲಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಭೆಯ ಸಮಿತಿಯಲ್ಲಿ ಈ ನಿರ್ಧಾರ ಘೋಷಿಸ ಲಾಗಿದ್ದು, ದೇಶದ ಕೃಷಿ ಪ್ರದೇಶವನ್ನು ಉತ್ತೇಜಿಸಲು, ವಿಸ್ತರಿಸಲು ಹಾಗೂ ವಿವಿಧ ಬೆಳೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಇಂಥ ಉಪ್ರಕ್ರಮಗಳು ಸಹಾಯಕವಾಗುತ್ತವೆ. ದೇಶದ ರೈತಾಪಿ ವರ್ಗಕ್ಕೆ ಬಿತ್ತನೆ ಆರಂಭಕ್ಕೂ ಮುನ್ನವೇ ಇಂಥದ್ದೊಂದು ಬೆಂಬಲ ಘೋಷಿಸಿ ರುವುದರಿಂದ ಬೆಳೆ ಯೋಜನೆಗೆ ಅನುಕೂಲವಾಗುತ್ತದಲ್ಲದೇ, ರೈತರಲ್ಲಿ ವಿಶ್ವಾಸ ಮೂಡುತ್ತದೆ.
ಸಾಮಾನ್ಯವಾಗಿ ಕೃಷಿ ಉತ್ಪನ್ನದ ಬೆಲೆಯಲ್ಲಿ ಯಾವುದೇ ತೀವ್ರತರಹದ ಕುಸಿತ ಉಂಟಾದಾಗ ಕೃಷಿ ಉತ್ಪಾದಕರ ಸಹಾಯಕ್ಕೆ ಧಾವಿ ಸುವ ಭಾಗ ಈ ಬೆಂಬಲ ಬೆಲೆ. ಕಳೆದೆರಡು ವರ್ಷಗಳಲ್ಲಿ ದೇಶವನ್ನು ಕಾಡಿದ ಸಾಂಕ್ರಾಮಿಕದಿಂದ ಸಹಜವಾಗಿ ಕೃಷಿ ಕ್ಷೇತ್ರವೂ ನಲುಗಿತ್ತು. ಹೀಗಾಗಿ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಕೆಲವು ಬೆಳೆಗಳಿಗೆ ಬಿತ್ತನೆ ಕಾಲದ ಆರಂಭದಲ್ಲಿ ಭಾರತ ಸರಕಾರವು ರೈತರಿಗೆ ಈ ಬೆಂಬಲ ಘೋಷಿಸಿದ್ದು ಸಕಾಲಿಕ. ಉತ್ಪಾದನೆ ಭಾರಿ ಹೆಚ್ಚಳವಾದ ವರ್ಷಗಳಲ್ಲಿ ಅತಿ ಯಾದ ಬೆಲೆ ಕುಸಿತದ ವಿರುದ್ಧ ಉತ್ಪಾ ದಕ ರೈತರನ್ನು ರಕ್ಷಿಸಲು ಸಹ ಇದು ಸಹಕಾರಿ.
ಇಂಥ ಘೋಷಣೆಯ ಮೂಲಕ ಸರಕಾರ ಕೃಷಿ ಉತ್ಪನ್ನಗಳಿಗೆ ಬೆಲೆಯ ಖಾತರಿಯನ್ನು ನೀಡಿದಂತಾಗಿದ್ದು, ಮಾರಾಟದಲ್ಲಿನ ಚಿಂತೆಯನ್ನು ದೂರಮಾಡಿದಂತಾಗಿದೆ. ಇದರೊಂದಿಗೆ ಖರೀದಿಸಿ ಸಂಗ್ರಹಿಸುವ ಆಹಾರ ಧಾನ್ಯಗಳನ್ನು ಸೂಕ್ತ, ಪ್ರಾಮಾಣಿಕ ವ್ಯವಸ್ಥೆಯಡಿಯಲ್ಲಿ ಸಾರ್ವಜನಿಕ ವಿತರಣೆಯಾಗುವಂತಾಗಬೇಕಿದೆ. ಅಲ್ಲಲ್ಲಿ ಪಡಿತರ ಅಕ್ರಮಗಳು ಹೆಚ್ಚುತ್ತಿರುವ ದೂರುಗಳು ಕೇಳಿಬಂದಿದು, ಇದರ ನಿವಾ ರಣೆಗೂ ಕೇಂದ್ರ ಯೋಚಿಸಬೇಕಿದೆ.