Friday, 13th December 2024

ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಿ

ಭಾರತದಲ್ಲಿ ಮಕ್ಕಳ ಮೇಲೆ ನಡೆದಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳನ್ನು ವರದಿ ಮಾಡುವ ಪ್ರಮುಖ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶ (170) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (144), ಮಹಾರಾಷ್ಟ್ರ (137), ಕೇರಳ (107) ಮತ್ತು ಒಡಿಶಾ (71) ರಾಜ್ಯಗಳು ನಂತರದ ಸ್ಥಾನದಲ್ಲಿವೆ.

2019ಕ್ಕೆ ಹೋಲಿಸಿದರೆ 2020ರಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿ 400 ಪ್ರತಿಶತದಷ್ಟು ಹೆಚ್ಚಳವಾಗಿರುವ ಬಗ್ಗೆ ರಾಷ್ಟ್ರೀಯ ಅಪರಾಧಗಳ ದಾಖಲೆಯ ಬ್ಯೂರೋ ವರದಿ ಮಾಡಿದೆ. ಇನ್ನೂ ಆತಂಕ ಕಾರಿ ವಿಷಯವೆಂದರೆ, ಮಕ್ಕಳ ಮೇಲಿನ ಆನ್‌ಲೈನ್ ಅಪರಾಧಗಳ 842 ಪ್ರಕರಣ ಗಳಲ್ಲಿ, 738 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ ಅಶ್ಲೀಲವಾಗಿ ಚಿತ್ರಿಸುವ ವಸ್ತುಗಳನ್ನು ಪ್ರಕಟಿಸುವ ಅಥವಾ ರವಾನಿಸುವ ಪ್ರಕರಣ ಗಳಾಗಿವೆ. 2019ರಲ್ಲಿ ಮಕ್ಕಳ ವಿರುದ್ಧ 164 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, 2018 ರಲ್ಲಿ 117 ಸೈಬರ್ ಅಪರಾಧ ಪ್ರಕರಣಗಳು ಮಕ್ಕಳ ವಿರುದ್ಧ ನಡೆದಿವೆ. 2017ರಲ್ಲಿ ಅಂತಹ 79 ಪ್ರಕರಣಗಳು ದಾಖಲಾಗಿವೆ.

2020 ರಲ್ಲಿ ಮಕ್ಕಳ ವಿರುದ್ಧ ನಡೆದ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯು ಚಿಕ್ಕದಾಗಿದ್ದರೂ, 2019ನೇ ವರ್ಷದಿಂದ ಅಪರಾಧ ಪ್ರಕರಣಗಳ ಸರಾಸರಿ ಏರಿಕೆಯಾಗಿರುವುದು ಆತಂಕಕಾರಿಯಾಗಿದೆ. ಇತ್ತೀಚಿಗೆ ಮಕ್ಕಳು ಸ್ಮಾರ್ಟ್ ಫೋನ್ ಮತ್ತು ಇಂಟರ್‌ನೆಟ್‌ಗೆ ದಾಸರಾಗುತ್ತಿರುವುದರಿಂದ ಮಕ್ಕಳ ಮೇಲೆ ಆಗುತ್ತಿರುವಂತಹ ಅಪರಾಧ ಪ್ರಕರಣಗಳು ಏರುತ್ತಿರುವ ಬಗ್ಗೆ ಹಲವು ವರದಿಗಳು ಹೇಳಿದ್ದವು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಬೈಲ್ ಕೊಡಿಸುವ ಪೋಷಕರು ತಮ್ಮ ಮಕ್ಕಳ ಚಲನ ವಲನದತ್ತ ಗಮನ ಹರಿಸಬೇಕಿದೆ. ಅವರ ಶೈಕ್ಷಣಿಕ ಉzಶಗಳಿಗಲ್ಲದೆ ಬಹುತೇಕ ಎಲ್ಲ ದೈನಂದಿನ ಚಟುವಟಿಕೆಗಳಿಗೆ ಮೊಬೈಲ್ ಮತ್ತು ಇಂಟರ್ನೆಟ್ ಬಳಸುವುದರಿಂದಾಗಿ ಮಕ್ಕಳು ತಪ್ಪು ದಾರಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚುತ್ತಿದೆ.

ಮಕ್ಕಳಿಗೆ ಮೊಬೈಲ್‌ನಲ್ಲಿ ಯಾವುದು ಸರಿ, ತಪ್ಪು ಎಂಬುದನ್ನು ವಿವೇಚಿಸುವ ಪರಿeನ ಇರುವುದಿಲ್ಲ. ಹಾಗಾಗಿ, ಆನ್‌ಲೈನ್ ವಂಚನೆಗಳು, ಸೈಬರ್ ಕ್ರೆಂನಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಮಧ್ಯೆ ಫೇಸ್‌ಬುಕ್, ಇನ್ಸ್ಟಾಗ್ರಾಂ ಬಳಕೆ ಹೆಚ್ಚಿಸಿದ್ದು, ಅನಾಮಧೇಯರನ್ನು ಸ್ನೇಹಿತರಾಗಿ ಮಾಡಿಕೊಂಡು ಹಣಕಾಸಿನ ವಂಚನೆಗೆ
ಒಳಗಾಗುತ್ತಿzರೆ. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕಿದೆ. ಅಲ್ಲದೆ, ಸರಕಾರ ಕೂಡ ಆನ್‌ಲೈನ್ ವಂಚಕರಿಗೆ ಕಡಿವಾಣ ಹಾಕಬೇಕಿದೆ.