Friday, 13th December 2024

ದೊಡ್ಡವರ ಮಕ್ಕಳಿಗೆ ಕಲಿಸಬೇಕಿದೆ ಶಿಷ್ಟಾಚಾರ

ಶಾರುಖ್ ಖಾನ್‌ನ ಪುತ್ರ ಡ್ರಗ್ಸ್ ಕೇಸ್‌ನಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೆ ದೊಡ್ಡವರ ಮಕ್ಕಳ ನಡತೆಯ ಬಗ್ಗೆ ಸಾರ್ವಜನಿಕ ಆಕ್ರೋಶಗಳು ಹೆಚ್ಚಾಗುತ್ತಿವೆ. ದೊಡ್ಡದೊಡ್ಡವರ ಮಕ್ಕಳು ತಮ್ಮ ತಂದೆ ತಾಯಿಯ ಸ್ಥಾನಮಾನವನ್ನು ದುರ್ಬಳಕೆ ಮಾಡಿಕೊಂಡು, ಇಂತಹ ಕಾನೂನು ಬಾಹಿರ ಕೆಲಸಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಇಂತಹ ಬೆಳವಣಿಗೆಯಿಂದ ನೈತಿಕತೆ ಹಾಳಾಗುವ ಜತೆಗೆ ತಂದೆ ತಾಯಿಯರು ಸಂಪಾದಿಸಿದ ಹೆಸರು ಕೂಡ ಮಣ್ಣುಪಾಲಾಗುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್.

ಇತ್ತೀಚೆಗೆ ದೊಡ್ಡವರ ಮಕ್ಕಳ ಇಂತಹ ರಂಪಾಟಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಹಾಗೆಯೇ ರಾಜ್ಯದಲ್ಲಿ ಕೇಳಿಬಂದ ಡ್ರಗ್ಸ್ ಪ್ರಕರಣಗಳೂ ಹೀಗೆ ಶ್ರೀಮಂತರ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಕೈತುಂಬ ಹಣಕೊಟ್ಟು ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ ಎಂಬ ಮಾತು ನಿಜವಾಗುತ್ತಿದೆ. ಹಣದ ಅಮಲು ಹೆಚ್ಚಾ
ದಾಗ ಸಹಜವಾಗಿ ಮಾದಕ ವಸ್ತುಗಳ ದಾಸರಾಗುವುದು ಸಾಮಾನ್ಯವಾಗಿದೆ. ಮಕ್ಕಳನ್ನು ವಿನಯವಂತಿಕೆ, ಸಾಮಾಜಿಕ ಕಾಳಜಿಯೊಂದಿಗೆ ಬೆಳೆಸುವುದು ಸೆಲೆಬ್ರಿಟಿಗಳಿಗೂ ಸೇರಿದ ಜವಾಬ್ದಾರಿ. ಇಂತಹ ಜವಾಬ್ದಾರಿ ಗಳನ್ನು ತಮ್ಮ ಬಿಡುವಿಲ್ಲದ ಕೆಲಸದ ನಡುವೆ ಮರೆಯುವ ಅವರು, ಮಕ್ಕಳು ಹೀಗೆ ದಾರಿ ತಪ್ಪಿದಾಗ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ.

ಬಹುತೇಕ ಶ್ರೀಮಂತರ ಮಕ್ಕಳ ನಡವಳಿಕೆ, ನಡೆ ಶಾರುಖ್ ಖಾನ್ ಮಗನ ನಡೆಯಂತೆಯೇ ಇರುತ್ತದೆ. ತಮ್ಮ ಮಕ್ಕಳು ಮಾಡಿದ ತಪ್ಪಿನಿಂದ ತಾವು ಹತ್ತಾರು ವರ್ಷದಿಂದ ಸಂಪಾದಿಸಿಕೊಂಡು ಬಂದ ಹೆಸರು, ಘನತೆ ಮಣ್ಣುಪಾಲಾಗುವುದು, ನಂತರ ಜೀವನ ಪರ್ಯಂತ ಕಣ್ಣೀರಿನಲ್ಲಿ ಬದುಕುವಂತೆ ಮಾಡುತ್ತದೆ. ಈ ಕಾರಣದಿಂದ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸುವ ನಿಟ್ಟಿನಲ್ಲಿ ಸೆಲೆಬ್ರಿಟಿಗಳು ಮುಂದಾಗಬೇಕಿದೆ. ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಆಗಾಗ ಗಮನಿಸುವ ಮೂಲಕ ಅವರ ನಡವಳಿಕೆಯ ಮೇಲೆ ನಿಗಾ ಇಡುವುದು ಅನಿವಾರ್ಯ.

ಇಂತಹ ಗಂಭೀರ ಪ್ರಕರಣ ಗಳು ನಡೆದಾಗಲಾದರೂ, ಸೆಲೆಬ್ರಿಟಿ -ಷಕರು ಎಚ್ಚೆತ್ತುಕೊಂಡು ಮಕ್ಕಳ ಮೇಲೆ ನಿಗಾ ಇಡುವ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲದಿದ್ದರೆ ಅದರಿಂದ ಮುಂದೆ ಬರುವ ಅಪಾಯಗಳಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.