ನಕಲಿ ಕ್ಯಾನ್ಸರ್ ಔಷಧವನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ದೆಹಲಿ ಅಪರಾಧ ವಿಭಾಗದ ಪೊಲೀಸರು ೮ ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಇಬ್ಬರು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕ್ಯಾನ್ಸರ್ ಔಷಽಯನ್ನು ಬಳಸಿದ ನಂತರ ಖಾಲಿ ಬಾಟಲಿಗಳನ್ನು
ವಿಲೇವಾರಿ ಮಾಡುವ ಬದಲು ೪೦೦೦ದಿಂದ ೫೦೦೦ ರುಪಾಯಿವರೆಗೆ ಮಾರಿಕೊಳ್ಳುತ್ತಿದ್ದರಂತೆ. ಅವನ್ನು ಖರೀದಿಸುತ್ತಿದ್ದವರು ಸದರಿ ಬಾಟಲಿಗಳಲ್ಲಿ
ಇಂಜೆಕ್ಷನ್ ದ್ರವಗಳನ್ನು ತುಂಬಿಸಿ ‘ಕ್ಯಾನ್ಸರ್ ಔಷಧ’ದ ಹಣೆಪಟ್ಟಿಯಲ್ಲಿ ಮಾರುತ್ತಿದ್ದರು ಎಂಬುದು ಲಭ್ಯ ಮಾಹಿತಿ.
ಇದು ನಿಜಕ್ಕೂ ಆಘಾತಕಾರಿ ವಿದ್ಯಮಾನವೇ ಸರಿ. ಕಾರಣ, ‘ಕ್ಯಾನ್ಸರ್’ ತಗುಲಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಅದರ ಬಲಿಪಶುಗಳು ಮಾತ್ರವಲ್ಲದೆ ಅವರ ಕುಟುಂಬಿಕರೂ ಸಾಕಷ್ಟು ಆಘಾತಕ್ಕೆ ಮತ್ತು ತಲ್ಲಣಕ್ಕೆ ಒಳಗಾಗುವುದು ಸಹಜ. ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ, ಅಸ್ವಸ್ಥರು ಗುಣಮುಖರಾದರೆ ಸಾಕು ಎಂಬ ಕಾಳಜಿ ಇಂಥ ವೇಳೆ ಸಂಬಂಧಪಟ್ಟವರಲ್ಲಿ ಮನೆಮಾಡಿರುತ್ತದೆ. ವೈದ್ಯರು ಶಿಫಾರಸು ಮಾಡುವ ವೈವಿಧ್ಯಮಯ ಪರೀಕ್ಷೆಗಳಿಂದ ಮೊದಲ್ಗೊಂಡು ಔಷಧಿ-ಮಾತ್ರೆಗಳವರೆಗಿನ ಸಮಸ್ತ ಬಾಬತ್ತುಗಳಿಗೂ ದುಡ್ಡು ಸುರಿಯಲು ಇಂಥವರು ಶತಾಯಗತಾಯ ಸಿದ್ಧರಾಗಿರುತ್ತಾರೆ. ಹೀಗೆ ಮಾಡಿಸಿದ ಪರೀಕ್ಷೆಗಳು ಹಾಗೂ ಖರೀದಿಸಿದ ಔಷಧಿ-ಮಾತ್ರೆಗಳ ಮೇಲೆ ವಿಶ್ವಾಸವಿಟ್ಟುಕೊಂಡೇ ಅವರು ಇಂಥ ಹರಸಾಹಸಕ್ಕೆ ಒಡ್ಡಿಕೊಂಡಿರುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಆದರೆ ಅಂಥ ಔಷಽಯೇ ನಕಲಿಯಾದರೆ ಅವರು ಯಾರಲ್ಲಿ ಮೊರೆಹೋಗ ಬೇಕು? ಯಾವುದೇ ತೆರನಾದ ವೈದ್ಯಕೀಯ ಚಿಕಿತ್ಸೆಯಲ್ಲಿ, ವೈದ್ಯರ ನಿಗಾವಣೆ, ಚಿಕಿತ್ಸಾಕ್ರಮ, ಔಷಽ-ಮಾತ್ರೆಗಳ ಗುಣಮಟ್ಟ/ವಿಶ್ವಾಸಾರ್ಹತೆ ಹಾಗೂ ನಂಬಿಕೆಗಳು ಮಹತ್ತರ ಪಾತ್ರವಹಿಸುತ್ತವೆ. ಈ ಪೈಕಿ ಯಾವೊಂದು ಕೊಂಡಿ ಶಿಥಿಲವಾದರೂ ಸಂಕಷ್ಟಕ್ಕೆ ಸಿಲುಕುವುದು ರೋಗಿಯೇ. ಗೃಹೊ ಪಯೋಗಿ ವಸ್ತುಗಳು ನಕಲಿಯಾದರೆ ಒಂದು ಮಟ್ಟಕ್ಕೆ ಸಹಿಸಿಕೊಳ್ಳಬಹುದು; ಆದರೆ ದೇಹವನ್ನು ಪೋಷಿಸುವ ಆಹಾರ ಮತ್ತು ಸ್ವಾಸ್ಥ್ಯವನ್ನು ಕಾಪಾಡುವ ಔಷಧಿ ಇವುಗಳೇ ಕಲಬೆರಕೆ ಅಥವಾ ನಕಲಿಯಾದರೆ ಅದು ಸ್ವೀಕಾರಾರ್ಹವೇ?
ದುಡ್ಡಿನ ದುರಾಸೆಗೆ ಒಡ್ಡಿಕೊಂಡು, ಜೀವರಕ್ಷಕ ಎನಿಸಿಕೊಂಡಿರುವ ಔಷಧಿ- ಮಾತ್ರೆಗಳ ಕಲಬೆರಕೆಗೂ ಮುಂದಾಗುವವರು ಇಂಥ ಆತ್ಮಾವಲೋಕನಕ್ಕೆ
ಮುಂದಾಗಬೇಕು.
ಸೆ