ತೀವ್ರ ವಿದೇಶಿ ವಿನಿಮಯ ಕೊರತೆಯ ಪರಿಣಾಮ ಶ್ರೀಲಂಕಾ ಸರಕಾರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಕಾಗದ
ಖರೀದಿಸಲು ಆಗದೆ, ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಔಷಧಿಯ ಕೊರತೆಯಿಂದಾಗಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ.
ಧನದ ಕೊರತೆಯಿಂದ ಜನರು ಪೆಟ್ರೋಲ್ ಪಂಪ್ ಮತ್ತು ಸೀಮೆಎಣ್ಣೆ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ಕೂತಿzರೆ. ಪೆಟ್ರೋಲ್ ಪಂಪ್‌ಗಳು ಮತ್ತು ಸೀಮೆಎಣ್ಣೆ ಕೇಂದ್ರಗಳಿಗೆ ಲಂಕಾ ಸರಕಾರ ಸೇನಾ ಭದ್ರತೆಯನ್ನು ಒದಗಿಸಿದೆ. ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಶ್ರೀಲಂಕಾ ಸರಕಾರವು ಮೂಲಭೂತ ಅವಶ್ಯಕತೆಗಳಾದ ಆಹಾರ, ಹಾಲು, ಇಂಧನ ಆಮದಿನ ಮೇಲೆ ಮಿತಿ ವಿಧಿಸಿಕೊಳ್ಳಬೇಕಾದ ಸ್ಥಿತಿ ತಲುಪಿದೆ. ದೇಶವು ಸಾಲ ಮರುಪಾವತಿ ಮಾಡಲಾಗದೆ ದಿವಾಳಿಯ ಅಂಚಿಗೆ ಬಂದು ನಿಂತಿದೆ.
ಇಷ್ಟಕ್ಕೆಲ್ಲ ಕಾರಣ ಚೀನಾ. ಪಕ್ಕದ ದೇಶ ಭಾರತಕ್ಕೆ ಋಣಿಯಾಗಬೇಕಿದ್ದ ಶ್ರೀಲಂಕಾ, ಕಳೆದ ಕೆಲವು ವರ್ಷಗಳಿಂದ ಚೀನಾದ ಜತೆ ಕೈ ಮಿಲಾಯಿಸಿತು. ಇದಕ್ಕೆ ಕಾರಣ ಚೀನಾದ ಮಹತ್ವಾಕಾಂಕ್ಷೆಯ ಒನ್ ಬೆಲ್ಟ ರೋಡ್. ಇದರ ಅಂಗವಾಗಿ ಶ್ರೀಲಂಕಾದ ಹಂಬನ್ಟೋಟ ಬಂದರನ್ನು ಅಭಿವೃದ್ಧಿ ಪಡಿಸಲು ಮೊದಲು ಸಾಲವನ್ನು ನೀಡುತ್ತಾ ಬಂತು. ಶ್ರೀಲಂಕಾದ ರಸ್ತೆಗಳು, ಬಂದರುಗಳನ್ನು ಸುಧಾರಿಸುವ ಹೊಣೆಯನ್ನು ಚೀನಾ ಹೊತ್ತುಕೊಂಡು, ಕೋಟಿಗಟ್ಟಲೇ ಡಾಲರ್‌ಗಳನ್ನು ಈ ದೇಶದ ಮೇಲೆ ಹೂಡಿ, ದ್ವಿಪ ರಾಷ್ಟ್ರಕ್ಕೆ ಅರಿವು ಮೂಡುವ ಮುನ್ನವೇ ಅದನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿ ಹಾಕಿದೆ.
ಚೀನಾದ ಹೂಡಿಕೆಗಳಿಗೆ ದೇಶದಲ್ಲಿ ಯಾವುದೇ ಉದ್ಯೊಗ ಸೃಷ್ಟಿ ಮಾಡಲು, ಸಂಪತ್ತು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಯಾವುದೇ ವಿದೇಶಿ ವಿನಿಮಯ ಸೃಷ್ಟಿಸಲಿಲ್ಲ. ಚೀನಾದ ಆಮದು ಸರಿದೂಗಿಸುವ ರಫ್ತು ಕೂಡ ಲಂಕಾದ ಬಳಿ ಇಲ್ಲ. ಈ ಸಾಲವನ್ನು ತೀರಿಸುವ ಯಾವ ಮಾರ್ಗಗಳೂ ಶ್ರೀಲಂಕಾದ ಬಳಿ ಇದ್ದಿರಲಿಲ್ಲವಾದರೂ, ಚೀನಾ ಕೈಬಿಚ್ಚಿ ಕೊಡುತ್ತಿದ್ದ ಸಾಲವನ್ನು ವಿವೇಚನೆಯಿಲ್ಲದೆ ಸ್ವೀಕರಿಸುತ್ತಲೇ ಸಾಗಿದ, ಅದನ್ನು ಖರ್ಚು ಮಾಡುತ್ತಲೇ ಸಾಗಿದ ಲಂಕಾ ಇಂದು ಈ ಸ್ಥಿತಿಗೆ ಮುಟ್ಟಿದೆ.
ಇದೀಗ ಇಂತಹ ಸಂದರ್ಭದಲ್ಲಿ ಚೀನಾದ ನೆರವಿಗೆ ಬಂದಿದ್ದು ಭಾರತ ಎಂಬುವುದು ಹೆಮ್ಮೆಯ ವಿಚಾರ. ಈಗಾಗಲೇ 3780 ಕೋಟಿ ಆ ದೇಶಕ್ಕೆ ಸಾಲ ನೀಡಿರುವ ಭಾರತವು ಮತ್ತೆ 7500 ಕೋಟಿ ರು. ನೀಡಲು ಮುಂದಾಗಿದ್ದು, ಹೃದಯ ವೈಶಾಲ್ಯ ಮೆರೆಯುವ ಮೂಲಕ ಭಾರತೀಯರ ಗುಣ, ಶಕ್ತಿ ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.