Wednesday, 11th December 2024

ಸುಪ್ರೀಂ ಆದೇಶ ಪಾಲನೆ ಜವಾಬ್ದಾರಿ ಮರೆತರೆ ರೈತರು?

ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳಿಗೆ ತಡೆಯಾಜ್ಞೆ ನೀಡಿದೆ.

ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. ಆದರೂ ರೈತರು ಪ್ರತಿಭಟನೆ ಮುಂದುವರಿಸಿರುವುದು ಸಮಂಜಸವೇ ಎಂಬುದು ಪ್ರಶಾರ್ಹ ಸಂಗತಿ. ಮಸೂದೆ ಜಾರಿ ವಿಚಾರದಲ್ಲಿ ರೈತರು ಅನುಸರಿಸುತ್ತಿರುವ ನೀತಿ ದಿಕ್ಕು ತಪ್ಪುತ್ತಿರುವ ಲಕ್ಷಣ ಗಳನ್ನು ಸೂಚಿಸುತ್ತದೆ. ಕೃಷಿ ಮಸೂದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಆರಂಭಿಸಿದ ರೈತರು ಕೇಂದ್ರ ಸರಕಾರ ಆಹ್ವಾನಿಸಿದ ಹಲವು ಸುತ್ತಿನ ಮಾತುಕತೆಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಕ್ಕೆ ತಡೆಯಾಜ್ಞೆ ದೊರಕಿತು. ಈ ಆದೇಶವನ್ನು ಗೌರವಿಸುವುದು ರೈತರ ಕರ್ತವ್ಯವಾಗಿತ್ತು. ನ್ಯಾಯಾಲಯಗಳ ಆದೇಶವನ್ನು ಪಾಲಿಸಬೇಕಿರುವುದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯವೂ ಹೌದು. ತಡೆ ಯಾಜ್ಞೆ ಜತೆಗೆ ಈ ಸಮಸ್ಯೆ ರೈತರ ಜೀವನ್ಮರಣದ ಸಮಸ್ಯೆ ಎಂಬುದಾಗಿಯೂ ಸೂಚಿಸಿದೆ. ನ್ಯಾಯಾಲಯ ರೈತರ ಪರ ಕಾಳಜಿ
ಹೊಂದಿರುವುದಕ್ಕೆ ನಿದರ್ಶವಿದು. ಆದರೂ ಪ್ರತಿಭಟನೆ ಮುಂದುವರಿಸಿರುವುದು ನ್ಯಾಯಾಲಯಕ್ಕೆ ತೋರುವ ಅಗೌರವ. ಇದೀಗ ಸುಗ್ಗಿ ಹಬ್ಬವನ್ನು ಆಚರಿಸಬೇಕಾದ ರೈತರು ಕೃಷಿ ಮಸೂದೆ ಬಿಲ್‌ಗಳನ್ನು ಸುಟ್ಟಿರುವುದು ದುರಂತ ಸಂಗತಿ.

ಕೇಂದ್ರ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಇದುವರೆಗೆ ಅನೇಕ ಮಹತ್ವದ ಯೋಜನೆಯಗಳನ್ನು ಘೋಷಿಸಿದೆ. ಆದರೆ ಕೃಷಿ ಮಸೂದೆ ಜಾರಿಯಲ್ಲಿ ವಿಫಲವಾಯಿತೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೃಷಿಗೆ ಪೂರಕವಾಗಲೆಂದು ಕೇಂದ್ರ ಸರಕಾರ ಜಾರಿಗೊಳಿಸಿದ ಮೂರು ಮಸೂದೆಗಳು ತಡೆಯಾಜ್ಞೆಗೆ ತುತ್ತಾಗಿರುವುದು ಕಳವಳಕಾರಿ. ಕೇಂದ್ರ ಸರಕಾರ ನ್ಯಾಯಾಲಯದ ಆದೇಶದ ಪರಿಪಾಲನೆಗೆ ಮುಂದಾಗಿರುವಂತೆಯೇ ರೈತರು ಪ್ರತಿಭಟನೆ ಸ್ಥಗಿತಗೊಳಿಸಿ ಆದೇಶ ಪಾಲಿಸಬೇಕಿರುವುದು ಸರಿಯಾದ ಮಾರ್ಗ.