Wednesday, 11th December 2024

ಜಾತ್ರೆಗಳ ಋತು ಶುರು: ಇರಲಿ ಎಚ್ಚರ

covid

ಕೋವಿಡ್ ಪ್ರಕರಣಗಳ ಏರುಗತಿಗೆ ಸಂಬಂಧಿಸಿದಂತೆ ದೇಶದಲ್ಲಿ ಮುಂದಿನ 40 ದಿನಗಳು ನಿರ್ಣಾಯಕವಾಗಿದ್ದು, ಜನವರಿ
ಮಧ್ಯದಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿವೆ.

ದೇಶದಲ್ಲಿ ಕೋವಿಡ್‌ನ 188 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ೩,೪೬೮ಕ್ಕೆ ತಲುಪಿದೆ. ಜನವರಿ ವೇಳೆಗೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರಕಾರ ಮತ್ತು ಜನರು ಮೈಯೆಲ್ಲ ಕಣ್ಣಾಗಿ ಕೋವಿಡ್ ನಿಯಂತ್ರಿಸಬೇಕಿದೆ. ಈ ಸಂಭಾವ್ಯ ಬಿಕ್ಕಟ್ಟನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ನಡೆಸುವುದು ಅನಿವಾರ್ಯವಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಜನ ಗುಂಪುಗೂಡುವ ಸಾಧ್ಯತೆಯಿದೆ. ರಾಜ್ಯದಲ್ಲಿ ಜನವರಿಯಿಂದ ಜಾತ್ರೆಗಳ ಋತು ಆರಂಭವಾಗುತ್ತದೆ.

ಚುನಾವಣಾ ವರ್ಷವಾಗಿರುವುದರಿಂದ, ರಾಜಕೀಯ ಸಭೆ-ಸಮಾವೇಶಗಳೂ ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತವೆ. ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಹಾಗೂ ವಾರ್ಷಿ ಕೋತ್ಸವ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ. ಲಕ್ಷಾಂತರ ಜನ ಭಾಗವಹಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ಮೊದಲ ವಾರದಲ್ಲಿ ಆಯೋಜನೆ ಗೊಂಡಿದೆ. ಈ ಎಲ್ಲ ಚಟುವಟಿಕೆಗಳೂ ಸೋಂಕಿಗೆ ಆಹ್ವಾನ ಕೊಡುವಂತೆಯೇ ಇವೆ. ಕಳೆದ ಎರಡು-ಮೂರು ವರ್ಷಗಳಿಂದ ಸಾರ್ವಜನಿಕ ಸಂಭ್ರಮ ಗಳು ಕೋವಿಡ್ ಕಾರಣದಿಂದಾಗಿ ಕೇವಲ ಔಪಚಾರಿಕ ಆಚರಣೆಗೆ ಸೀಮಿತವಾಗಿದ್ದವು.

ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳು ಇದೀಗ ಅದ್ಧೂರಿಯಾಗಿ ನಡೆಯುವ ಸಾಧ್ಯತೆಗಳಿವೆ. ಅವುಗಳಿಗೆ ಕಡಿವಾಣ ಹಾಕ ಬೇಕೆನ್ನು ವುದು ಪ್ರಾಯೋಗಿಕವಾಗಿ ಸರಿಯಾದ ಯೋಚನೆಯಲ್ಲ. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಾರ್ಯಕ್ರಮಗಳನ್ನು ಆಚರಿಸುವುದು ಜಾಣತನ. ಮಾ ಕಡ್ಡಾಯವಾಗಿ ಧರಿಸುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ಪಾಲಿಸುವುದು ಮತ್ತೆ ನಮ್ಮ ದೈನಂದಿನ ಜೀವನದ ಭಾಗವಾಗಬೇಕಾಗಿದೆ.

ಕರೋನಾ ಮಾತ್ರವಲ್ಲ, ಸುಲಭವಾಗಿ ಹರಡುವ ನೆಗಡಿ, ಕೆಮ್ಮಿನಂತಹ ಸೋಂಕುಗಳನ್ನು ತಡೆಗಟ್ಟಲೂ ಮಾ ಬಳಕೆ ಅನುಕೂಲ ಕರ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಅರ್ಹರ ಪೈಕಿ ಶೇ.೨೭ರಿಂದ ೨೮ರಷ್ಟು ಮಂದಿ ಮಾತ್ರ ಬೂಸ್ಟರ್ ಲಸಿಕೆ ಪಡೆದಿದ್ದಾರೆ. ಲಸಿಕೆಯ ಸುರಕ್ಷತಾ ವಲಯದಿಂದ ದೂರ ಉಳಿದವರೂ ಲಸಿಕೆ ಪಡೆಯಲು ಸರಕಾರ ಅವಕಾಶ ಕಲ್ಪಿಸಬೇಕು. ವಿದೇಶಗಳಿಂದ ಬರುವ ಪ್ರಯಾಣಿಕರನ್ನು, ವಿಶೇಷವಾಗಿ ಸೋಂಕು ಉಲ್ಬಣಗೊಂಡಿರುವ ಪ್ರದೇಶಗಳಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು.