Wednesday, 11th December 2024

ಜಿಲ್ಲೆ ವಿಭಜನೆಯ ರಾಜಕೀಯ ಭಜನೆ!

ಸುಗಮ ಆಡಳಿತ ದೃಷ್ಟಿಯಿಂದ ಜಿಲ್ಲೆೆ ಮತ್ತು ತಾಲೂಕುಗಳ ವಿಭಜನೆ ಮಾಡುವುದು ಸರಕಾರದ ಉದ್ದೇಶ. ಆದರೆ, ಇತ್ತೀಚಿನ ಈ ತೀರ್ಮಾನಗಳು ರಾಜಕೀಯದ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳಾಗಿ ಬದಲಾಗುತ್ತಿವೆ. ರಾಜಕೀಯವಾಗಿ ಯಾವ ಪಕ್ಷಕ್ಕೆ ಎಲ್ಲಿ ಲಾಭವಾಗುವ ಸಾಧ್ಯತೆ ಹೆಚ್ಚಿರುತ್ತದೆಯೋ ಅಲ್ಲಿ ಜಿಲ್ಲೆೆ ಮತ್ತು ತಾಲೂಕು ರಚನೆಯಂತಹ ಕಾರ್ಯಕ್ಕೆ ಆಯಾ ಸಂದರ್ಭದಲ್ಲಿ ಆಡಳಿತ ನಡೆಸುವ ಸರಕಾರಗಳು ಮುಂದಾಗುತ್ತವೆ. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಮನಗರವನ್ನು ಜಿಲ್ಲೆೆಯನ್ನಾಗಿ ಘೋಷಿಸುವ ಮೂಲಕ ತಮ್ಮ ಮಣ್ಣಿನ ಋಣ ತೀರಿಸಿದ್ದರು.

ಬೇಡಿಕೆ ಮತ್ತು ರಾಜಕೀಯ ಸ್ವಾಾರ್ಥಕ್ಕಾಾಗಿಯೇ ಬಾಗಲಕೋಟೆ ಮತ್ತು ಯಾದಗಿರಿ, ಚಿಕ್ಕಬಳ್ಳಾಾಪುರ ಜಿಲ್ಲೆೆಗಳು ಘೋಷಣೆಯಾಗಿದ್ದವು. ಇದೀಗ ವಿಜಯ ನಗರ ಜಿಲ್ಲೆೆಯ ಘೋಷಣೆ ಮಾಡಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಸರಕಾರ ಅಲ್ಲಿನ ಪರ ವಿರೋಧದ ನಡುವೆ ನಲುಗುತ್ತಿಿದೆ. ಈ ನಡುವೆಯೇ ಮತ್ತಷ್ಟು ಜಿಲ್ಲೆೆಗಳನ್ನು ರೂಪಿಸುವ ಒತ್ತಾಾಯವನ್ನು ಕೆಲ ನಾಯಕರು ಸಿಎಂ ಮುಂದಿಡುತ್ತಿದ್ದಾರೆ. ಬೆಳಗಾವಿ ಜಿಲ್ಲೆೆಯ ಭೌಗೋಳಿಕ ವಿಸ್ತೀರ್ಣ ಹೆಚ್ಚಾಾಗಿದ್ದು, ಇದನ್ನು ವಿಭಜನೆ ಮಾಡಿ ಚಿಕ್ಕೋೋಡಿ ಅಥವಾ ಗೋಕಾಕ್ ಜಿಲ್ಲೆೆ ರೂಪಿಸುವ ನಿಟ್ಟಿನಲ್ಲಿ ಬಹಳ ದಿನಗಳಿಂದ ಹೋರಾಟ ನಡೆಯುತ್ತಿದೆ.

ಆದರೆ, ಅಥಣಿ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರು ಡಿಸಿಎಂ ಸ್ಥಾನಕ್ಕೇರುತ್ತಿದ್ದಂತೆ ಅಥಣಿಯನ್ನೇ ಜಿಲ್ಲೆೆಯನ್ನಾಾಗಿ ರೂಪಿಸಬೇಕೆಂಬ ಕೂಗು ಬಲವಾಗತೊಡಗಿದೆ. ಮಾಜಿ ಡಿಸಿಎಂ ತಾವು ಅಧಿಕಾರದಲ್ಲಿದ್ದಾಾಗ ಸುಮ್ಮನಿದ್ದು, ತಮ್ಮ ಸ್ವಕ್ಷೇತ್ರ ಕೊರಟಗೆರೆಯನ್ನು ಸೇರಿಸಿ ಮಧುಗಿರಿ ಜಿಲ್ಲೆೆಯನ್ನು ಮಾಡಬೇಕೆಂದು ಮನವಿ ಮಾಡಿದರು. ಇದೀಗ ಈ ಸಾಲಿನ ತಮ್ಮ ಶಾಸಕ ಸ್ಥಾಾನ ಕಳೆದುಕೊಂಡು ರಾಜಕೀಯ ಅಸ್ಥಿಿರತೆಯಲ್ಲಿರುವ ಎಚ್.ವಿಶ್ವನಾಥ್ ಹುಣಸೂರನ್ನು ಜಿಲ್ಲಾಾ ಕೇಂದ್ರವಾಗಿರಿಸಿಕೊಂಡು ಮೈಸೂರು ಜಿಲ್ಲೆೆಯ ವಿಭಜನೆಗೆ ಮನವಿ ಮಾಡಿದ್ದಾರೆ.

ಭೌಗೋಳಿಕ ವಿಸ್ತೀರ್ಣ ಮತ್ತು ಅಭಿವೃದ್ಧಿಿಗೆ ಅಡ್ಡಿಿಯಾಗಿರುವ ಅಂಶಗಳನ್ನಿಿಟ್ಟುಕೊಂಡು ಜಿಲ್ಲೆೆಗಳ ವಿಭಜನೆ ಮಾಡುವುದು ಆಡಳಿತದ ದೃಷ್ಟಿಿಯಿಂದ ಒಳ್ಳೆೆಯದು. ಆದರೆ, ಜಿಲ್ಲಾಾ ಕೇಂದ್ರ 50 ಕಿ.ಮೀ. ದೂರವೂ ಇಲ್ಲದ ಪ್ರದೇಶಗಳನ್ನು ಜಿಲ್ಲೆೆಯನ್ನಾಾಗಿ ರೂಪಿಸಿ ಎಂದು ಬೇಡಿಕೆ ಇಡುವುದು ರಾಜಕೀಯ ಸ್ವಾಾರ್ಥದ ಪರಾಕಾಷ್ಟೇ. 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆೆಯ ವಿಭಜನೆ ಒಂದು ಮಟ್ಟಿಗೆ ಅನಿವಾರ್ಯ ಎನಿಸಿದರೂ ಉಳಿದ ಜಿಲ್ಲೆೆಗಳ ವಿಭಜನೆಯ ಜರೂರತ್ತು ಅಷ್ಟೊೊಂದು ಕಾಣಿಸುವುದಿಲ್ಲ.

ವಿಜಯ ನಗರ ಜಿಲ್ಲೆೆಯ ಘೋಷಣೆ ಎಬ್ಬಿಿಸಿರುವ ವಿವಾದ ಮುಂದಿನ ಚುನಾವಣೆಗಳಲ್ಲಿ ತಮಗೆ ಎಷ್ಟರಮಟ್ಟಿಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಾಚಾರದಲ್ಲಿ ಕೆಲವರು, ಅದರ ವಿರೋಧ ಮಾಡಿದರೆ ಆಗುವ ಲಾಭವೇನು ಎಂಬ ಬಗ್ಗೆೆ ಕೆಲವರು ಚಿಂತನೆ ನಡೆಸುತ್ತಿಿದ್ದರೆ, ಮೈಸೂರಿನಿಂದ 30 ಕಿ.ಮೀ. ದೂರದ ಹುಣಸೂರನ್ನು ಜಿಲ್ಲೆೆ ಮಾಡುವಂತೆ ಮನವಿ ಮಾಡುವ ಮೂಲಕ ವಿಶ್ವನಾಥ್, ಹೊಸ ಜಿಲ್ಲೆೆಗೆ ವಾರಸುದಾರರಾಗುವ ಕನಸು ಕಾಣುತ್ತಿಿರಬಹುದು. ಒಟ್ಟಾಾರೆ, ರಾಜಕೀಯ ನಾಯಕರ ಅಭಿಲಾಷೆಗೆ ಜಿಲ್ಲೆೆ ರಚನೆ ಮಾಡಿ ಸಾರ್ವಜನಿಕರ ಪರದಾಟಕ್ಕೆೆ ಸರಕಾರ ವೇದಿಕೆ ನಿರ್ಮಿಸದಿರಲಿ ಎಂದು ಆಶಿಸೋಣ.