Friday, 20th September 2024

ಕಲ್ಯಾಣ ಕರ್ನಾಟಕ; ಹೊಸ ಅಭಿವೃದ್ದಿ ನೀತಿ ರೂಪುಗೊಳ್ಳಬೇಕು

೩೭೧(ಜೆ) ತಿದ್ದುಪಡಿಯಾಗಿ ನಾಳೆಗೆ ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಈ ಅವಽಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬದಲಾವಣೆ ಗಳಾಗಿವೆ. ಪ್ರತಿವರ್ಷ ? ೩ ಸಾವಿರ ಕೋಟಿ ಅನುದಾನ ಬರುತ್ತಿದೆ. ಉನ್ನತ ಶಿಕ್ಷಣ, ಸರಕಾರಿ ಹುದ್ದೆಗಳಲ್ಲಿ ಮೀಸಲು ಸಿಕ್ಕಿದ್ದರಿಂದಾಗಿ ೩೫ ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳು ಲಭಿಸಿವೆ.

ಪ್ರತಿವರ್ಷ ೭೦೦ ಮೆಡಿಕಲ್ ಸೀಟುಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿzರೆ. ಸಾವಿರಾರು ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಸಿಗುತ್ತಿದೆ. ಸರಕಾರಿ ನೌಕರಿಗಳಲ್ಲಿ ಅನೇಕರಿಗೆ ಮುಂಬಡ್ತಿ ಸಿಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಆಗಿದ್ದು ಇಷ್ಟಾದರೆ ಆಗಬೇಕಾಗಿರುವುದು ಬಹಳಷ್ಟಿದೆ. ಆರೂ ಜಿಗಳಲ್ಲಿ ಸಾಕ್ಷರತೆ ಪ್ರಮಾಣ, ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಪ್ರಮಾಣ ನಿರಾಶಾದಾಯಕವಾಗಿಯೇ ಮುಂದುವರಿದಿವೆ. ಕೆಲಸ ಹುಡುಕಿ ಕೊಂಡು ಜನರು ಗುಳೆ ಹೋಗುವ ಕಷ್ಟ ತಪ್ಪಿಲ್ಲ. ಅತ್ಯಂತ ಕಷ್ಟಪಟ್ಟು ಪಡೆದ ೩೭೧(ಜೆ) ಕಲಂ ತಿದ್ದುಪಡಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗಿರುವ ಪ್ರಯೋಜನಗಳ ಮೌಲ್ಯಮಾಪನವೂ ದೂರವೇ ಉಳಿದಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆಯಾದ ಕೋಟ್ಯಂತರ ರುಪಾಯಿ ಅನುದಾನದ ಸಮರ್ಪಕ ಬಳಕೆಯಾಗಿಲ್ಲ. ಈ ಜಿಗಳಿಂದ ಆ
ಅನುದಾನ ಹಲವು ಬಾರಿ ವಾಪಸು ಹೋಗಿದೆ. ಆಗದೇ ಇರುವ ಅಭಿವೃದ್ಧಿ ಕಾಮಗಾರಿಯನ್ನು ಆಗಿದೆ ಎಂದು ತಪ್ಪು ವರದಿ ನೀಡಿದ ನಿದರ್ಶನಗಳೂ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿವೆ. ಈ ಪ್ರದೇಶದಲ್ಲಿ ಜನರ ಜೀವನಮಟ್ಟ ಬದಲಾಗಬೇಕು. ಮೂಲಸೌಕರ್ಯಗಳ ಕೊರತೆ ನೀಗಿ ಶಿಕ್ಷಣ,
ಉದ್ಯೋಗ, ಅಭಿವೃದ್ಧಿ ಪಥದಲ್ಲಿ ಅದು ರಾಜ್ಯದ ಇತರ ಪ್ರದೇಶಗಳಿಗೆ ಸರಿಸಮನಾಗಿ ನಿಲ್ಲಲು ಮಹತ್ವದ, ದೂರದೃಷ್ಟಿಯುಳ್ಳ ಕಾರ್ಯಕ್ರಮಗಳೂ
ರೂಪುಗೊಳ್ಳಬೇಕು.

ಕಲ್ಯಾಣ ಕರ್ನಾಟಕವು ಇನ್ನುಳಿದ ಕರ್ನಾಟಕದ ಎದುರು ತಲೆ ಎತ್ತಿ ನಿಲ್ಲುವಂತೆ ಆಗಬೇಕು. ಕಲ್ಯಾಣ ರಾಜ್ಯದ ಆಶಯವಾದ ಅಭಿವೃದ್ಧಿ ಮತ್ತು ಸಂಪತ್ತಿನ ಅಸಮತೋಲನ ನೀಗಬೇಕು. ಅದಕ್ಕೆ ಹೊಸ ಅಭಿವೃದ್ಧಿ ನೀತಿಯೇ ರೂಪುಗೊಳ್ಳಬೇಕು. ಈ ಭಾಗದ ಜನರು ಇತರ ಪ್ರದೇಶಗಳತ್ತ ನೋಡುತ್ತಾ ಕೊರಗುವಂತೆ ಆಗಬಾರದು