Tuesday, 10th September 2024

ಕೋಟಾ: ವಿದ್ಯಾರ್ಥಿಗಳಿಗೆ ಬೇಕು ಪೋಷಕರ ನೈತಿಕ ಬೆಂಬಲ

ಉನ್ನತ ಶಿಕ್ಷಣಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇಲ್ಲಿಯವರೆಗೂ ಈ ವರ್ಷದಲ್ಲಿ ೧೮ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷದಲ್ಲಿ ಇಲ್ಲಿ ೧೮ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. ೨೦೧೫ರಿಂದ ೨೦೨೩ರ ಆಗ ೩೧ರವರೆಗೆ ಈ ರೀತಿ ೧೨೩ ಮಕ್ಕಳು ಆತ್ಮಹತ್ಯೆಗೆ ಶರಣಾಗಿzರೆ. ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಭವಿಷ್ಯದ ಬದುಕಿಗೆ ಇಂದು ಮಾಡುವ ಹೂಡಿಕೆ ಎಂಬ ಭಾವನೆ ಬಹುತೇಕ ಪಾಲಕರಲ್ಲಿದೆ. ಪ್ರಬಲವಾಗಿದೆ. ಈ ಕಾರಣದಿಂದ ಸಾಲಸೋಲ ಮಾಡಿ, ಸ್ಥಿರಾಸ್ತಿಗಳನ್ನು ಮಾರಿ, ಮಕ್ಕಳನ್ನು ಕೋಟಾ ಟ್ಯೂಷನ್ ಕೇಂದ್ರಗಳಿಗೆ ಕಳುಹಿಸುವ ಸಾವಿರಾರು ಪೋಷಕರಿದ್ದಾರೆ.

ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ಈ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಪೋಷಕರ ಈ ನಿರೀಕ್ಷೆಯ ಭಾರವನ್ನು ಹೊತ್ತು ಕೋಟಾಗೆ ಬಂದಿಳಿ ಯುವ ಮಕ್ಕಳಿಗೆ ಅಲ್ಲಿ ಬೇರೊಂದು ಪ್ರಪಂಚವೇ ಎದುರಾಗುತ್ತದೆ. ಗಾಬರಿ ಹುಟ್ಟಿಸುವ ಗಾತ್ರದ ಕ್ಲಿಷ್ಟ ಪಠ್ಯವಸ್ತು, ತೀವ್ರ ಸ್ಪರ್ಧಾತ್ಮಕ ಪರಿಸರ, ಪ್ರತಿದಿನ ೧೦ರಿಂದ ೧೫ ಗಂಟೆಗಳ ಕಾಲ ಗಮನವಿಟ್ಟು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯ ಮಕ್ಕಳನ್ನು ಕಂಗೆಡಿಸುತ್ತವೆ. ತಮ್ಮ ಊರಿನಲ್ಲಿ ಶೇ.೯೦ರಷ್ಟು ಅಂಕ ಪಡೆಯುತ್ತಿದ್ದ ಮಕ್ಕಳು, ಶೇ.೬೦-೭೦ ಅಂಕ ಬಂದಾಗ ಕುಗ್ಗುವುದು ಸಹಜ.

ಪ್ರತಿ ವಾರವೂ ಕಡ್ಡಾಯವಾಗಿ ತೆಗೆದು ಕೊಳ್ಳಲೇಬೇಕಾದ ಟೆ ತೀವ್ರ ಆತಂಕಕ್ಕೆ ಕಾರಣವಾಗುವುದನ್ನು ಅಧ್ಯಯನ ಗಳು ತೋರಿಸಿ ಕೊಟ್ಟಿವೆ. ಈ ಟೆಸ್ಟ್‌ ಗಳಲ್ಲಿ ಕಡಿಮೆ ಅಂಕ ಬಂದವರನ್ನು ಪ್ರತ್ಯೇಕಿಸಿ, ಉತ್ತಮ ಅಂಕ ಪಡೆದ ಸ್ಟಾರ್ ವಿದ್ಯಾ ರ್ಥಿಗಳಿಗೆ ಮತ್ತಷ್ಟು ಉತ್ತಮ ತರಬೇತಿ ನೀಡಲಾಗುತ್ತದೆ. ಈ ವರ್ಗೀಕರಣ ಮತ್ತು ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಪಾಲಕರಿಗೆ ತಿಳಿಸುವ ವ್ಯವಸ್ಥೆ ಅನೇಕ ಮಕ್ಕಳ ಪಾಲಿಗೆ ದುಃಸ್ವಪ್ನವಾಗುತ್ತದೆ. ಲಕ್ಷಾಂತರ ರುಪಾಯಿಯನ್ನು ಸಾಲವಾಗಿ ಪಡೆದ ಪೋಷಕರು ಈ ಪರಿಸ್ಥಿತಿಯಲ್ಲಿ ಮಕ್ಕಳ ಮೇಲೆ ಮತ್ತಷ್ಟು ಒತ್ತಡ ಹೇರುತ್ತಾರೆ. ಇಂತಹ ಒತ್ತಡವನ್ನು ನಿಭಾಯಿ ಸಲು ವಿದ್ಯಾರ್ಥಿಗಳಿಗೆ ಸ್ನೇಹಿತರು, ಪೋಷಕರು, ಶಿಕ್ಷಕರು, ಹಿತೈಷಿಗಳ ಸಾಂತ್ವನ, ಬೆಂಬಲ ಬೇಕಿದೆ. ಇಲ್ಲವಾದಲ್ಲಿ ಆತ್ಮಹತ್ಯೆ ಸರಕಣಿ ಮುಂದುವ ರಿಯುತ್ತಲೇ ಇರುತ್ತದೆ.

Leave a Reply

Your email address will not be published. Required fields are marked *