ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾನುವಾರ ಒಂದೇ ದಿನ ಕರೋನಾ ಸೋಂಕಿನಿಂದಾಗಿ ಇಬ್ಬರು ಸಾವಿಗೀಡಾಗಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಕಳೆದ 22 ದಿನಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ೫,೪೨೨ ಓಮೈಕ್ರಾನ್ ಪ್ರಕರಣಗಳು ಮತ್ತು 4623 ಡೆಲ್ಟಾ ಉಪತಳಿ ಪ್ರಕರಣಗಳು ಪತ್ತೆಯಾಗಿವೆ. ಇದು ಕರೋನಾ ನಾಲ್ಕನೇ ಅಲೆಯ ಮುನ್ಸೂಚನೆಯಾಗಿದೆ. ಸಾರ್ವಜನಿಕ ಬದುಕು ಹಳಿಗೆ ಮರಳು ತ್ತಿರುವ ಸಂದರ್ಭದ ಕರೋನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳ, ಒಳಾಂಗಣ ಮತ್ತು ಪ್ರಯಾಣದ ಸಂದರ್ಭದಲ್ಲಿ ಮಾ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಮಾರ್ಗಸೂಚಿ ಹೊರಡಿಸಿದೆ.
ಮಾಸ್ಕ್ ಧರಿಸದವರಿಗೆ ದಂಡ ವಿಽಸುವ ನಿರ್ಧಾರಕ್ಕೆ ಸರಕಾರ ಇನ್ನೂ ಬಂದಿಲ್ಲ ವಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ಹಾಕುವುದಾಗಿ ಎಚ್ಚರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎರಡು ಅಡಿ ಭೌತಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದೆ. ಸರಕಾರದ ಈ ಮಾರ್ಗಸೂಚಿಯನ್ನು ಹೇರಿಕೆಯೆಂದು ಭಾವಿಸದೆ, ವೈಯಕ್ತಿಕ ಹಾಗೂ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಪಾಲಿಸಬೇಕಾಗಿದೆ.
ಮೊದಲ ಎರಡು ಅಲೆಗಳಲ್ಲಿ ಎದುರಿಸಿದ ಸಾವುನೋವುಗಳ ಪಾಠ ಸುಲಭಕ್ಕೆ ಮರೆಯುವಂತಹದ್ದಲ್ಲ. ಮೂರನೇ ಅಲೆಯು ಸೌಮ್ಯ ವಾಗಿದ್ದ ಕಾರಣ ಹೆಚ್ಚು ಸಾವುನೋವಿಲ್ಲದೆ ಅದನ್ನು ಎದುರಿಸಲು ಸಾಧ್ಯವಾಗಿತ್ತು. ಈಗ ನಾಲ್ಕನೇ ಅಲೆಯ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕೆಯ ವಿವೇಕ ಹಾಗೂ ಸಂಯಮವನ್ನು ಪ್ರದರ್ಶಿಸಬೇಕಾಗಿದೆ. ಮತ್ತೊಂದು ಲಾಕ್ ಡೌನ್‌ಗೆ ಅವಕಾಶ ಕಲ್ಪಿಸದಿರುವ ಸಾಧ್ಯತೆ ಸಾರ್ವಜನಿಕರ ಕೈಯ ಇದೆ.
ಮೇ 16ರಿಂದ ಶಾಲೆಗಳು ಆರಂಭಗೊಳ್ಳುತ್ತಿವೆ. 5 ರಿಂದ 12 ವಯೋಮಾನದ ಮಕ್ಕಳಿಗೆ ತುರ್ತು ಬಳಕೆಗಾಗಿ ಎರಡು ಲಸಿಕೆಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು, ಶಾಲಾ ಮಕ್ಕಳನ್ನು ಲಸಿಕೆಯ ಸುರಕ್ಷಿತ ಆವರಣದೊಳಗೆ ತರುವುದಕ್ಕೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಸರಕಾರ ತ್ವರಿತವಾಗಿ ಮಾಡಬೇಕಾಗಿದೆ. ಆ ಮೂಲಕ ಪೋಷಕರಲ್ಲಿನ ಆತಂಕವನ್ನು ದೂರ ಮಾಡಬೇಕಿದೆ.