ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ದೆಹಲಿ ಗಡಿಗಳಲ್ಲಿ ಕಳೆದ ಆರು ದಿನ ಗಳಿಂದ ನಡಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಕೇಂದ್ರ ಸರಕಾರದಿಂದ ನಿರೀಕ್ಷಿತ ಬಾರದಿದ್ದಲ್ಲಿ ಫೆ.೨೧ರಿಂದ ದೆಹಲಿ
ಚಲೋ ಪ್ರತಿಭಟನೆಯನ್ನು ಮುಂದುವರಿಸುವಂತೆ ಹೇಳಿದ್ದಾರೆ. ಕಳೆದ ಆರು ದಿನಗಳ ರೈತರ ಪ್ರತಿಭಟನೆಯಿಂದಾಗಿ ಆಹಾರ ಸಾಮಗ್ರಿ ಪೂರೈಕೆ ಸರಪಳಿಯ ಮೇಲೆ ಅಡ್ಡ ಪರಿಣಾಮ ಬೀರಲಾರಂಭಿಸಿದೆ. ತರಕಾರಿ, ದವಸ ಧಾನ್ಯಗಳ ದರ ಗಗನಕ್ಕೇರುತ್ತಿದೆ.
ಪಂಜಾಬ್‌ನಿಂದ ಸಮರ್ಪಕ ಪೂರೈಕೆ ಯಾಗದ ಕಾರಣ ೧೫ ದಿನಗಳಲ್ಲಿ ಕ್ಯಾರೆಟ್ ಬೆಲೆಯಲ್ಲಿ ೫ ರು. ಹೆಚ್ಚಳವಾಗಿದೆ. ಪ್ರತಿಭಟನೆ ಮತ್ತೆ ಮುಂದುವರಿ ದರೆ, ಆಹಾರ ಧಾನ್ಯಗಳ ದರ ಮತ್ತಷ್ಟು ಏರುವ ಸಾಧ್ಯತೆ ಇದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು ಎನ್ನುವುದು ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆ ಯಾಗಿದೆ. ಈ ಬೇಡಿಕೆ ಬಹು ಕಾಲದಿಂದಲೂ ಇದೆ. ಕೇಂದ್ರ ಸರಕಾರ ಹಲವು ಬೆಳೆಗಳಿಗೆ ಕಾಲಕಾಲಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ. ಆದರೆ ವಾಸ್ತವಿಕವಾಗಿ ಇದರ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ, ಸಕಾಲದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದಿಲ್ಲ ಎಂಬ ದೂರು ಕೇಳಿ ಬರುತ್ತಲೇ ಇರುತ್ತದೆ.
ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಕೇಂದ್ರ ಸರಕಾರದ ಪ್ರತಿನಿಧಿಗಳು ತ್ವರಿತವಾಗಿ ಆಲಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಚಳವಳಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಅಸವಾಗಿ ಮಾರ್ಪಡದಂತೆ ರೈತ ಸಂಘಟನೆಗಳು ಎಚ್ಚರ ವಹಿಸ ಬೇಕು. ಈ ಹಿಂದೆ ನಡೆದ ರೈತ ಚಳವಳಿಯಲ್ಲಿ ದೇಶ ವಿರೋಽ ಶಕ್ತಿಗಳು ಸೇರಿ ಕೊಂಡು ಅಶಾಂತಿ ಸೃಷ್ಟಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಬಾರಿಯ ರೈತ ಹೋರಾಟ ಶಾಂತಿಯುತವಾಗಿ ತಾರ್ಕಿಕ ಅಂತ್ಯ ಕಾಣಲಿ. ರೈತ ಮುಖಂಡರು ಮತ್ತು ಸರಕಾರದ ಪ್ರತಿನಿಧಿಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಸಂಧಾನ ಮಾತುಕತೆ ನಡೆಸುವ ಮೂಲಕ ನೈಜ ರೈತರ ಬೇಡಿಕೆಗಳು ಸೌಹಾರ್ದಯುತ ವಾಗಿ ಆದಷ್ಟು ಬೇಗ ಈಡೇರುವಂತಾಗಲಿ.