Wednesday, 11th December 2024

ಅನಗತ್ಯ ವಿವಾದ ಸೃಷ್ಟಿ ಸರಿಯಲ್ಲ

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳದಿದಂದ ಕೇಂದ್ರದ ಶಿಫಾರಸಿಗೆ ಕಳುಹಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿ ರಾಜ್ಯದಲ್ಲಿ ಆಡಳಿತ ಪಕ್ಷದ ಮೇಲೆ ಪ್ರತಿಪಕ್ಷಗಳು ಮುಗಿಬಿದ್ದಿರುವುದು ಅನವಶ್ಯಕ ವಿವಾದ ಸೃಷ್ಟಿ ಮಾಡುತ್ತಿವೆ.

ಈವರೆಗೂ ನಡೆದುಕೊಂಡ ಬಂದ ಪದ್ಧತಿಯಂತೆ ಗಣರಾಜ್ಯೋತ್ಸವ ಪೆರೇಡ್‌ಗೆ ರಾಜ್ಯಗಳು ಮತ್ತು ಕೇಂದ್ರಾ ಡಳಿತ ಪ್ರದೇಶಗಳು ಸೇರಿ 36 ಕಡೆಗಳಿಂದ ಸ್ತಬ್ಧಚಿತ್ರಗಳನ್ನುಕಳುಹಿಸಲಾಗುತ್ತದೆ. ಆದರೆ, ಪರೇಡ್‌ಗೆ 12 ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಗೆ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವ ಹಿಸುವ ಅವಕಾಶವಿರುತ್ತದೆ.

ಅದರಂತೆ, 2018 ಮತ್ತು 2021ರಲ್ಲಿ ಕೇರಳ ರಾಜ್ಯ ಸ್ತಬ್ಧಚಿತ್ರಗಳೊಂದಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿತ್ತು. ಪುನರಾವರ್ತಿತ ನಿಯಮದಂತೆ ಕಳೆದ ವರ್ಷ ಭಾಗವಹಿಸಿದ ರಾಜ್ಯಗಳನ್ನು ಬಿಟ್ಟು ಉಳಿದ 12 ರಾಜ್ಯಗಳಿಗೆ ಈ ವರ್ಷ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ನಿಯಮಾವಳಿಯಂತೆ 2021ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳಕ್ಕೆ ಭಾಗವಹಿಸಲು ಅವಕಾಶ ಇಲ್ಲ. ಈ ನಿಯಮ ತಿಳಿದಿದ್ದರೂ ಕೇರಳ ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನವಶ್ಯಕ ವಿವಾದವನ್ನು ಹುಟ್ಟು ಹಾಕುತ್ತಿದೆ.

ರಾಜ್ಯದಲ್ಲೂ ಪ್ರತಿಪಕ್ಷ ನಾಯಕರು ಒಂದು ಸಮುದಾಯವನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಉದ್ದೇಶದಿಂದ ನಾರಾಯಣ ಗುರುಗಳ ವಿಚಾರವನ್ನು ಎಳೆದು ತಂದು ವಿವಾದ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ಅಲ್ಲದೇ, ಈ ವರ್ಷವೂ ಕರ್ನಾಟಕದ ಸ್ಥಬ್ದಚಿತ್ರ ಆಯ್ಕೆ ಯಾಗಿರುವುದಕ್ಕೆ ಪಕ್ಷಾತೀತವಾಗಿ ಎಲ್ಲರೂ ಸಂತಸ ಪಡಬೇಕು. ಅದನ್ನು ಬಿಟ್ಟು ಅನಗತ್ಯ ವಿಚಾರಗಳನ್ನು ಹಿಡಿದುಕೊಂಡು ರಾಜಕಾರಣ ಮಾಡುವುದು ಸರಿ ಯಲ್ಲ. ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತ ದಲ್ಲಿದ್ದರೂ ಆಯಾ ರಾಜ್ಯದ ಸಾಂಸ್ಕೃತಿಕ ಪರಂಪರೆ ಯನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳನ್ನು ಕೇಂದ್ರದ ಶಿಫಾರಸ್ಸಿಗೆ ಕಳಿಸುತ್ತಾರೆ.

ಹೀಗಾಗಿ ಕೇಂದ್ರ ಸರಕಾರವೂ ಇದರಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಕರ್ನಾಟಕದಲ್ಲೂ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದಾಗ ಬಿಜೆಪಿ ಯೇತರ ಸರಕಾರ ಅಧಿಕಾರದಲ್ಲಿದೆ ಎಂದು ಸ್ಥಬ್ದಚಿತ್ರವನ್ನು ಕೇಂದ್ರ ಆಯ್ಕೆ ಸಮಿತಿ ನಿರಾಕರಿಸಿರಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.