Saturday, 14th December 2024

ಪ್ರಧಾನಿ ನಡೆಗೆ ಮನ್ನಣೆ ದೇಶಕ್ಕೆ ಸಲ್ಲುವ ಗೌರವ

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮುಂದುವರಿದಿರುವಂತೆಯೇ ರಾಷ್ಟ್ರ ರಾಜಕಾರಣದಲ್ಲೀಗ
ಆರೋಪ – ಪ್ರತ್ಯಾರೋಪಗಳು ಮಹತ್ವ ಪಡೆದಿವೆ.

ಪ್ರಧಾನಿ ಮೋದಿ ನಡೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ಧಾಳಿ ಆರಂಭಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಜಾಗತಿಕ ನಾಯಕರಿಗಿಂತಲೂ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಬೆಳವಣಿಗೆ ದೇಶದ ಭವಿಷ್ಯದ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯಾಗಿ ಕಾಣಬಹುದು. ನಿರಂತರವಾಗಿ ಇಂಧನ ಬೆಲೆ ಏರಿಕೆ ಮಾಡುತ್ತಿರುವುದೇ ಮೋದಿ ಸರಕಾರದ ಸಾಧನೆ ಎಂದು ಟೀಕಿಸಿರುವ ರಾಹುಲ್‌ಗಾಂಧಿ, ಪ್ರಧಾನಿ ಮೋದಿಯವರು ಮಾಡಿರುವ ತಪ್ಪುಗಳನ್ನು ಒಪ್ಪಿಕೊಂಡರೆ ಮಾತ್ರ ದೇಶದ
ಪುನರ್ ನಿರ್ಮಾಣ ಸಾಧ್ಯ ಎಂದು ಟೀಕಿಸಿದ್ದಾರೆ. ಆದರೆ ಪ್ರಪಂಚದ ಪ್ರಮುಖ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮುಂದಿದ್ದಾರೆ.

ಅಮೆರಿಕ ಮೂಲದ ಸಂಸ್ಥೆಯೊಂದು ನಡೆಸಿರುವ ಅಧ್ಯಯನದ ಪ್ರಕಾರ ಇತ್ತೀಚೆಗೆ ಮೋದಿಯವರ ಬಗ್ಗೆ ಜನರ ಬೆಂಬಲ ಕಡಿಯಾಗಿದ್ದರೂ, ಜಾಗತಿಕ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮುಂದಿದ್ದಾರೆ ಎಂಬ ಅಂಶವನ್ನು ಪ್ರಕಟಿಸಿದೆ. 2019ನೇ ಸಾಲಿನಲ್ಲಿ ಶೇ೮೦ರಷ್ಟು ಮಂದಿ ಮೋದಿಯವರನ್ನು ಅನುಮೋದಿಸಿದ್ದರು. ಆದರೆ ಇದೀಗ ಶೇ.20 ಪ್ರಮಾಣ ತಗ್ಗಿದೆ. ಆದರೂ ಜಾಗತಿಕ ಪ್ರಭಾವಿ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಅಂಶಗಳು ಬೆಳಕಿಗೆ ಬಂದಿವೆ. ಅಮೆರಿಕ, ಯುಕೆ, ರಷ್ಯಾ ಸೇರಿದಂತೆ 13 ದೇಶಗಳಲ್ಲಿ ವಿಶ್ವ ನಾಯಕರಿಗಿಂತಲೂ ಮೋದಿ ಪ್ರಭಾವಿಯಾಗಿದ್ದಾರೆ ಎನ್ನಲಾಗಿದೆ.

ರಾಷ್ಟ್ರ ರಾಜಕಾರಣಿದಲ್ಲಿನ ಆರೋಪ – ಪ್ರತ್ಯಾರೋಪಗಳೇನೆ ಇದ್ದರೂ ಮೋದಿ ಗಳಿಸಿರುವ ಜನಪ್ರಿಯತೆ ಹಾಗೂ ಪ್ರಭಾವಿ ಮನ್ನಣೆ ದೇಶದ ಪಾಲಿಗೂ ಗೌರವದ ಸಂಗತಿ. ಇದು ದೇಶದ ಪಾಲಿಗೆ ಸೇರುವ ಗೌರವ.