ರಾಜ್ಯದಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಹೈದರಾಬಾದ್ ಕರ್ನಾಟಕವನ್ನು (ಕಲ್ಯಾಾಣ ಕರ್ನಾಟಕ) ಪ್ರತ್ಯೇಕ ಮಾಡಿ ವಿಶೇಷ ಸ್ಥಾಾನ ನೀಡಿರುವುದು ಅಭಿವೃದ್ಧಿಿಗೆ ಪೂರಕ. ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಪ್ರತ್ಯೇಕ ಜಿಲ್ಲೆೆ ಎಂಬ ಕೂಗು ಕೇಳು ಬರುತ್ತಿಿದೆ. ಇದು ಒಕ್ಕೂಟ ವ್ಯವಸ್ಥೆೆಗೆ ವಿರುದ್ಧವಾದುದು ಎಂದು ಹೇಳಿದರೆ ತಪ್ಪಾಾಗಲಾರದು. ರಾಜಕೀಯ ಹಿತಾಸಕ್ತಿಿಗಾಗಿ ಪ್ರತ್ಯೇಕ ಜಿಲ್ಲೆೆಗಳಾಗಿ ವಿಭಜಿಸಿದರೆ ಆಡಳಿತಕ್ಕೆೆ ಸುಗಮವಾಗಬಹುದೇ ಹೊರತು ಸಾಮಾಜಿಕ ಹಿತದೃಷ್ಟಿಿಗೆ ಒಳಿತಲ್ಲ.
ಒಂದು ವೇಳೆ ಪ್ರತ್ಯೇಕ ಜಿಲ್ಲೆೆಯಾಗಿ ಘೋಷಣೆಯಾಗಬೇಕಾದರೆ ಆಯಾ ಪ್ರದೇಶದ ಜನಸಂಖ್ಯೆೆ ಹಾಗೂ ವಿಸ್ತೀರ್ಣದ ಆಧಾರದ ಮೇಲೆ ಪರಿಗಣಿಸಲಾಗುತ್ತಿಿದೆ. ಆದರೆ ರಾಜಕೀಯವಾಗಿ ಪ್ರತ್ಯೇಕ ಜಿಲ್ಲೆೆ ಎಂಬುದು ಅಪ್ರಸ್ತುತ. ಮೈಸೂರು ಜಿಲ್ಲೆೆಯನ್ನು ಹಳೆಯ ಮೈಸೂರು ಭಾಗ ಎಂದು ಮತ್ತೊೊಂದೆಡೆ ನಾಮಕರಣ ಮಾಡಲಾಗಿದೆ. ಇದೀಗ ಇದೇ ಭಾಗದಲ್ಲಿರುವ ಹುಣಸೂರನ್ನು ಪ್ರತ್ಯೇಕ ಮಾಡಬೇಕೆಂದು ಒತ್ತಾಾಯಿಸುತ್ತಿಿರುವ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಅಭಿಪ್ರಾಾಯ ರಾಜ್ಯದ ಜನತೆಗೆ ತಿಳಿಸಬೇಕಿದೆ.
ಬೇಡಿಕೆಯಂತೆ ಆಡಳಿತದ ಅನುಕೂಲಕ್ಕಾಾಗಿ ಜಿಲ್ಲೆಗಳನ್ನು ವಿಭಜಿಸಿದರೆ ರಾಜ್ಯದಲ್ಲಿ 10 ಜಿಲ್ಲೆಗಳು ಹೊಸದಾಗಿ ಅಸ್ತಿಿತ್ವಕ್ಕೆೆ ಬರಲಿವೆ. ಗಣಿ ಜಿಲ್ಲೆ ಬಳ್ಳಾಾರಿಯಿಂದ ಪ್ರತ್ಯೇಕ ಮಾಡಿ ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬ ಕೂಗು ಪ್ರಾಾರಂಭವಾಗಿ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿಗೂ ಕಾಲಿಟ್ಟಿಿದೆ. ಮೈಸೂರು ಜಿಲ್ಲೆಯಿಂದ ಹುಣಸೂರು, ಬಾಗಲಕೋಟೆಯಿಂದ ಜಮಖಂಡಿ, ವಿಜಯಪುರದಿಂದ ಇಂಡಿ, ಬೆಳಗಾವಿಯಿಂದ ಚಿಕ್ಕೋೋಡಿ, ಕಲ್ಪತರು ನಾಡು ತುಮಕೂರುನಿಂದ ಮಧುಗಿರಿ ಹಾಗೂ ತಿಪಟೂರು, ಉತ್ತರ ಕನ್ನಡದಿಂದ ಬನವಾಸಿ, ಶಿರಸಿ ಬೆಳಗಾವಿಯ ಗೋಕಾಕ್ ಮತ್ತು ಯಲ್ಲಾಪುರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬ ಬೇಡಿಕೆಯಿದೆ.
ಮಾಜಿ ಮುಖ್ಯಮಂತ್ರಿ ದಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಿಯಾಗಿದ್ದ ಸಂದರ್ಭದಲ್ಲಿ ಅವಿಭಜಿತ ಮೈಸೂರಿನಿಂದ ಚಾಮರಾಜನಗರ, ದಕ್ಷಿಣ ಕನ್ನಡದಿಂದ ಉಡುಪಿ, ರಾಯಚೂರಿನಿಂದ ಕೊಪ್ಪಳ, ಶಿವಮೊಗ್ಗ, ಚಿತ್ರದುರ್ಗದಲ್ಲಿದ್ದ ತಾಲೂಕುಗಳನ್ನು ಪ್ರತ್ಯೇಕ ಮಾಡಿ ದಾವಣಗೆರೆ, ಧಾರವಾಡದಿಂದ ಹಾವೇರಿ, ಗದಗ, ವಿಜಯಪುರದಿಂದ ಬಾಗಲಕೋಟೆ ಸೇರಿದಂತೆ ಒಟ್ಟು 7 ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಿದ್ದರು. ನಂತರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಾಮಿಯವರು ಬೆಂಗಳೂರು ಗ್ರಾಾಮಾಂತರ ಕ್ಷೇತ್ರದಿಂದ ರಾಮನಗರವನ್ನು ಪ್ರತ್ಯೇಕಿಸಿ ಜಿಲ್ಲಾ ಕೇಂದ್ರವನ್ನಾಾಗಿ ಘೋಷಣೆ ಮಾಡುವ ಜತೆಗೆ ಕೋಲಾರದಿಂದ ಚಿಕ್ಕಬಳ್ಳಾಾಪುರಕ್ಕೂ ಜಿಲ್ಲಾ ಸ್ಥಾಾನಮಾನ ನೀಡಿದರು. ಬಳಿಕ ಬಿ.ಎಸ್.ಯಡಿಯೂರಪ್ಪ ಸಿಎಂ ಆದ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯನ್ನು ವಿಭಾಗಿಸಿ ಯಾದಗಿರಿಯನ್ನು ಜಿಲ್ಲಾ ಕೇಂದ್ರ ಮಾಡಿದರು.
ಪ್ರತ್ಯೇಕತೆ ಎಂಬ ಕೂಗು ದಿನೇ ದಿನೇ ಹೊಸ ಆಯಾಮದತ್ತ ಸಾಗುತ್ತಿಿದ್ದು, ದೊಡ್ಡ ಜಿಲ್ಲೆಗಳನ್ನು ಆಡಳಿತದ ಅನುಕೂಲಕ್ಕಾಾಗಿ ಪ್ರತ್ಯೇಕ ಮಾಡಬೇಕೆಂಬ ಕೂಗು ಹೆಚ್ಚಾಾಗುತ್ತಿಿದೆ. ಮುಂದೊಂದು ದಿನ ಆಂಧ್ರ ಪ್ರದೇಶದಲ್ಲಾಾದ ತೆಲಂಗಾಣ ಪ್ರತ್ಯೇಕ ರಾಜ್ಯದ ಪರಿಸ್ಥಿಿತಿಯ ಸ್ವರೂಪ ರಾಜ್ಯದಲ್ಲಿ ಪಡೆದುಕೊಂಡರೂ ಅನುಮಾನವಿಲ್ಲ. ಏಕೆಂದರೆ ಉತ್ತರ, ದಕ್ಷಿಿಣ, ಮಲೆನಾಡು, ಕರಾವಳಿ ಭಾಗದ ಜನತೆ ತಮ್ಮ ಹಿತಾಸಕ್ತಿಿಗೆ ಪ್ರತ್ಯೇಕ ರಾಜ್ಯ ಎಂದು ಅಲೆ ಎಬ್ಬಿಿಸುವ ಮುನ್ನ, ಪ್ರತ್ಯೇಕ ಜಿಲ್ಲೆೆಯ ಕೂಗು ನಿಲ್ಲಿಸಲು ಸರಕಾರ ಮುಂದಾಗಬೇಕಿದೆ. ಇದಕ್ಕೊೊಂದು ನೀತಿ ರೂಪಿಸುವುದು ಅನಿವಾರ್ಯ.
ಇತ್ತೀಚಿನ ವಿದ್ಯಮಾನ, ವಿವಾದ ಪ್ರತ್ಯೇಕತೆ ಎಂಬ ಕೂಗು ದಿನೇ ದಿನೇ ಹೊಸ ಆಯಾಮ ಸೃಷ್ಟಿಿಗೆ ಕಾರಣವಾಗುವ ಎಲ್ಲಾಾ ಲಕ್ಷಣಗಳು ಮುನ್ನಲೆ ಬರುವುದು ಹಾಗೆಯೇ ಇದೊಂದು ಒಕ್ಕೂಟ ವ್ಯವಸ್ಥೆೆಗೆ ತಿರುಮಂತ್ರ ಮಾತು ಸುಳ್ಳಲ್ಲ.