Wednesday, 11th December 2024

ಶಾಲೆಗಳ ಆರಂಭ ರಾಜಕೀಯ ಮೀರಿದ ಸಂಗತಿ

ರಾಜ್ಯದಲ್ಲಿ ಇದೀಗ ಬಹು ಚರ್ಚಿತವಾಗಿರುವ ಸಂಗತಿ ಎಂದರೆ ಶಾಲೆಗಳ ಆರಂಭದ ವಿಚಾರ. ಬಹು ದಿನಗಳ ನಂತರ ಶಾಲೆಗಳ
ಆರಂಭಕ್ಕೆ ಸಿದ್ಧತೆಗಳು ಆರಂಭಿಸುವ ವೇಳೆಗಾಗಲೇ ರಾಜ್ಯದಲ್ಲಿ ಸಂಭವಿಸಿರುವ ಅನೇಕ ಶಿಕ್ಷಕರ ಸಾವುಗಳು ಆಘಾತವನ್ನು ತಂದೊಡ್ಡಿದೆ.

ಶಾಲೆಯನ್ನು ಆರಂಭಿಸುವುದರಿಂದ ಉಂಟಾಗಬಹುದಾದ ಪರಿಣಾಮ ಕುರಿತು ಇದು ಮುನ್ನೆಚ್ಚರಿಕೆಯಾಗಿದೆ. ಈ ಬೆಳವಣಿಗೆ ಯಿಂದ ಶಾಲೆಗಳ ಆರಂಭಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗಿದ್ದು, ಸರಕಾರವೂ ಸಹ ಶಾಲೆಗಳನ್ನು ಆರಂಭಿಸಲು ಧಾವಂತ ವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ರಾಜ್ಯದಲ್ಲಿ ಶಾಲೆ ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ತಮ್ಮ ಸಲಹೆ ಜತೆಯಲ್ಲಿಯೇ ರೋಪಗಳನ್ನೂ ಹೋರಿಸಿದ್ದಾರೆ. ಸರಕಾರದ ದಾಖಲೆಗಳ ಪ್ರಕಾರ 10 ವರ್ಷದೊಳಗಿನ 20256  ಮಕ್ಕಳು ಮತ್ತು 11 ರಿಂದ 20 ವರ್ಷದೊಳಗಿನ 47,061 ಮಕ್ಕಳು ಈಗಾಗಲೇ ಕರೋನಾ ಸೋಂಕಿತರಾಗಿದ್ದಾರೆ. ಈ ಎರಡೂ ಗುಂಪಿನಿಂದ 61 ಮಕ್ಕಳು ಮೃತಪಟ್ಟಿzರೆ. ಸರಕಾರ ಕರೋನಾ ಸಾವುಗಳ ಸಂಖ್ಯೆಯನ್ನು ದೊಡ್ಡಮಟ್ಟದಲ್ಲಿ ಮುಚ್ಚಿಡುತ್ತಿದೆ ಎಂಬುದು ಆರೋಪ. ಆಡಳಿತ ಪಕ್ಷದ ವಿಚಾರಗಳಂತೆಯೇ ವಿಪಕ್ಷಗಳ ವಿಚಾರಗಳು ಸಹ ಮುಖ್ಯ ಏಕೆಂದರೆ ಇದೀಗ ತಾನೇ ಲಾಕ್‌ಡೌನ್ ಪರಿಸ್ಥಿತಿಯಿಂದ ಹೊರಬಂದು ಥಿಯೇಟರ್‌ಗಳನ್ನು – ಶಾಲೆಗಳನ್ನು ಆರಂಭಿಸುವ ಪ್ರಕ್ರಿಯೆಗೆ ಸರಕಾರ ಮುಂದಾಗು ತ್ತಲಿತ್ತು. ಈ ವೇಳೆ ಸೋಂಕಿತ ಶಿಕ್ಷಕರ ಸಾವಿನ ಪ್ರಕರಣಗಳು ಅನಿರೀಕ್ಷಿತವಾದ ಆಘಾತವನ್ನು ತಂದೊಡ್ಡಿದೆ. ಇಂಥ ಸಂದರ್ಭ ದಲ್ಲಿ ಮಕ್ಕಳ ಸುರಕ್ಷತೆ, ಶಿಕ್ಷಕರ ಸುರಕ್ಷತೆ, ಜೀವನ ಭದ್ರತೆ ಹಾಗೂ ಶಾಲೆಗಳ ಆರಂಭದ ವಿಚಾರದಲ್ಲಿ ಆಡಳಿತ ಪಕ್ಷಗಳಷ್ಟೇ ಜವಾಬ್ದಾರಿ ವಿಪಕ್ಷಗಳ ಮೇಲೂ ಇರುವುದರಿಂದ ಇದೊಂದು ರಾಜಕೀಯ ಮೀರಿದ ಮಹತ್ವದ ಸಂಗತಿ.