ಪ್ರತಿ ಟನ್ ಕಬ್ಬಿಗೆ ರೂ.3500 ನಿಗದಿ ಮಾಡುವವರೆಗೂ ಸಕ್ಕರೆ ಕಾರ್ಖಾನೆ ಗಳನ್ನು ಆರಂಭಿಸಬಾರದು ಎಂದು ರೈತರು ಕಳದ ಎರಡು ತಿಂಗಳಿನಿಂದ ರಾಜ್ಯದ ವಿವಿಧೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಕಬ್ಬಿನ ದರವು ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ ದಂತಹ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿದೆ. ಅಷ್ಟೇ ಅಲ್ಲ, ಕಾರ್ಖಾನೆಗಳು ರೈತರಿಗೆ ನೀಡುವ ದರದಲ್ಲಿಯೂ ವ್ಯತ್ಯಾಸವಿದೆ. ಸರಕಾರವು ವೈಜ್ಙಾನಿಕ ವಾಗಿ ಏಕರೂಪದ ದರ ನಿಗದಿಪಡಿಸದೇ ಇರುವು ದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ದೇಶದಾದ್ಯಂತ ರೈತರು ಕಬ್ಬು ಬೆಳೆಯಲು ಖರ್ಚು ಮಾಡು ತ್ತಿರುವ ಹಣ ಹೆಚ್ಚುಕಡಿಮೆ ಒಂದೇ ಪ್ರಮಾಣ ದಲ್ಲಿ ಇದೆ.
ಕಬ್ಬಿನಲ್ಲಿನ ಸಕ್ಕರೆಯ ಪ್ರಮಾಣ ಆಧರಿಸಿ ದರ ನಿಗದಿಪಡಿಸುವುದು ವೈಜ್ಙಾನಿಕ ಪದ್ಧತಿಯಾಗುತ್ತದೆ. ಆದರೆ ಹಾಗೆ ಮಾಡದೇ ಇರುವುದು, ಫಲವತ್ತಾದ ಕಬ್ಬು ಬೆಳೆಯುವ ರಾಜ್ಯದ ರೈತರ ಬದುಕನ್ನೇ ಅಸ್ತವ್ಯಸ್ತಗೊಳಿಸುತ್ತಿದೆ. ರಾಜ್ಯದಲ್ಲಿರುವ ಬಹುತೇಕ
ಕಾರ್ಖಾನೆ ಗಳು ಸಚಿವರು, ಶಾಸಕರು, ರಾಜಕೀಯ ಮುಖಂಡರಿಗೆ ಸೇರಿವೆ. ರಾಜ್ಯ ಸರಕಾರ ಮಟ್ಟದಲ್ಲಿ ಅವರು ಪ್ರಭಾವ ಹೊಂದಿದ್ದಾರೆ.
ರೈತರ ವಿರೋಧದ ನಡುವೆಯೂ ಈಗಾಗಲೇ ಕಾರ್ಖಾನೆಗಳನ್ನು ಆರಂಭಿಸಿದ್ದಾರೆ. ಇವರ ಮೇಲೆ ರಾಜ್ಯ ಸರಕಾರಕ್ಕೆ ನಿಯಂತ್ರಣವಿಲ್ಲದಂತಾಗಿದೆ. ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಲೆ ನಿಗದಿಗೆ
ಸಂಬಂಽಸಿದಂತೆ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಆದರೆ, ಬೆಲೆ ನಿಗದಿ ಮಾಡಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಭೆ ನಡೆಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.
ಇನ್ನೂ ಸಭೆ ನಿಗದಿಯಾಗಿಲ್ಲ. ಕಬ್ಬಿನ ಬೆಲೆ ನಿಗದಿಯಾಗದ್ದರಿಂದ ಕೆಲವು ಕಾರ್ಖಾನೆಗಳು ಇನ್ನೂ ಆರಂಭವಾಗಿಲ್ಲ. ಆದರೆ,
ಈಗಾಗಲೇ ಕಬ್ಬು ಕಡಿಯುವ ತಂಡಗಳು ಬಂದಿವೆ. ಕಟಾವು ಆಗದಿದ್ದರೂ, ಕೂಲಿ ಪಾವತಿಸಬೇಕಾಗಿ ಬಂದಿದೆ. ಕೆಲವು ಕಡೆಗಳಲ್ಲಿ ಕಬ್ಬು ಕಟಾವಿಗೆ ಬಂದಿದೆ. ಆದರೆ, ಕಟಾವು ಆಗದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಆದ್ದರಿಂದ ಈ ವರ್ಷ ವಾದರೂ ರೈತರಿಗೆ ನ್ಯಾಯ ದೊರೆಯುವಂತೆ ರಾಜ್ಯ ಸರಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ.