ತುಂಗಭದ್ರಾ ಅಣೆಯಕಟ್ಟೆಯ ೧೯ನೇ ಗೇಟ್ ಕೊಚ್ಚಿ ಹೋಗಿರುವುದರಿಂದ ಅಪಾರ ಪ್ರಮಾಣದ ನೀರು ನದಿಗೆ ವ್ಯರ್ಥವಾಗಿ ಹರಿಯುತ್ತಿದೆ. ಕಳೆದ ಮೂರ‍್ನಾಲ್ಕು ದಿನಗಳಿಂದ ಗೇಟ್ ದುರಸ್ಥಿ ಕಾರ್ಯ ನಡೆಯುತ್ತಿದ್ದರೂ ನಿರೀಕ್ಷಿತ ಮಟ್ಟಿಗೆ ಕಾರ್ಯ ಸಾಗುತ್ತಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ನೀರು ಉಳಿಸಿ ಕೊಂಡೇ ಗೇಟ್ ಅಳವಡಿಸಿಸಬೇಕು ಎಂಬ ಪ್ರಯತ್ನದಲ್ಲಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ನಿರತಾಗಿದ್ದರೂ ನೀರಿನ ಹೊರ ಹರಿವಿನ ಪ್ರಮಾಣ ೧.೧೦ ಲಕ್ಷ ಕ್ಯುಸೆಕ್‌ನಿಂದ ೮೬,೩೧೦ ಕ್ಯುಸೆಕ್‌ಗೆ ತಗ್ಗಿಸಿದ್ದಾರೆ.
ಹೀಗಿದ್ದರೂ ಕಳೆದ ಆರು ದಿನಗಳಲ್ಲಿ ೩೩ ಟಿಎಂಸಿ ಅಡಿಯಷ್ಟು ನೀರು ಜಲಾಶಯದಿಮದ ನದಿಗೆ ನೀರು ಹರಿದು ಹೋಗಿದೆ. ೧೦೫.೭೮ ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಈಗ ಉಳಿದಿರುವುದು ೭೨.೬೦ ಅಡಿ ನೀರು ಮಾತ್ರ. ಅಣೆಕಟ್ಟೆಯ ಮುಂದಿನ ಗ್ರಾಮಗಳ ರೈತರ ಒಂದು ಬೆಳೆಗೆ ನೀರು ಸಿಗುತ್ತದೆ ಎಂದು ಸರಕಾರ ಹೇಳಿದೆಯಾದರೂ, ಅದು ಕೂಡ ಮಳೆ ಬರುವ ಅಂದಾಜಿನ ಮೇರೆಗೆ ಮಾತ್ರ. ಈಗಾಗಲೇ ಅಣೆಕಟ್ಟಿನಲ್ಲಿ ಉಳಿದಿರುವ ನೀರನ್ನು ಬಿಡುಗಡೆ ಮಾಡುವ ಬಗ್ಗೆ ಯಾರೊಬ್ಬರೂ ಹೇಳಿಲ್ಲ.
ಒಂದು ವೇಳೆ ಅಣೆಕಟ್ಟೆಯಲ್ಲಿ ಇರುವ ನೀರನ್ನೇ ಮುಂದಿನ ಗ್ರಾಮಗಳ ಜಲಾನಯನ ಪ್ರದೇಶಗಳಿಗೆ ಹರಿಸಿದರೆ ಹಿನ್ನೀರು ಬಳಸಿಕೊಂಡು ನಿರ್ಮಿಸಿದ ಏತನೀರಾವರಿ ಯೋಜನೆಯ ನೀರನ್ನೇ ನಂಬಿದ ರೈತರ ಬದುಕು ಕೂಡ ದುಸ್ತರವಾಗಲಿದೆ. ಆದ್ದರಿಂದ ಸರಕಾರ ಈ ಭಾಗದ ರೈತರ ನೆರವಿಗೆ ಧಾವಿಸಬೇಕು.
ಅವರಿಗಾಗಿ ವಿಶೇಷ ಪ್ಯಾಕೇಜ್ ಘೋಷನೆ ಮಾಡಬೇಕು. ಅಲ್ಲದೆ, ತುಂಗಭದ್ರಾ ಅಣೆಕಟ್ಟೆ ನಿರ್ಮಾಣವಾಗಿ ೭೦ ವರ್ಷ ಕಳೆದರೂ ಒಮ್ಮೆಯೂ ಹೂಳು
ತೆಗೆದಿಲ್ಲ. ಈಗಾಗಲೇ ೩೩ ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡಿದೆ ಎನ್ನಲಾಗಿದೆ. ಇದೀಗ ಈಗಲಾದರೂ ಹೂಳು ತೆಗೆಯಲು ಮುಂದಾಗಬೇಕು.
ಅದಕ್ಕೆ ಬೇಕಾದ ವೆಚ್ಚವವನ್ನು ಅಂದಾಜು ಮಾಡಿ, ಕೇಂದ್ರದಿಂದ ಮತ್ತು ಜಲಾಶಯದ ನೀರಿನ -ಲಾನುಭವಿಗಳಿಂದ ಹಣ ಸಂಗ್ರಹಿಸಬೇಕು.