Friday, 13th December 2024

ಕಾಟಾಚಾರದ ಸದನ ಬೇಡ

Suvarna Soudha

ಉತ್ತರ ಕರ್ನಾಟಕದ ಭಾಗದ ಜನರ ಆಶೋತ್ತರಗಳಿಗೆ ಉತ್ತರಿಸಲು ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲುವುದಕ್ಕಾಗಿ ಬೆಳಗಾವಿಯ ಸುವರ್ಣಸೌಧ ದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ.

ಸಾಲು ಸಾಲು ಸವಾಲು, ಕರೋನಾ ಆತಂಕದ ನಡುವೆಯೂ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿ ದಂತೆ ಹೆಚ್ಚಿನ ಚರ್ಚೆ ಮಾಡುವ ಕಾರಣಕ್ಕಾಗಿಯೇ ಅಧಿವೇಶನ ನಡೆದರೂ, ಶಾಸಕರು ಮಾತ್ರ ಈ ಬಗ್ಗೆ ನಿರಾಸಕ್ತಿ ತಾಳಿದ್ದಾರೆ.

ಚಳಿಗಾಲದ ಅಧಿವೇಶನ ಆರಂಭಗೊಂಡ ಮೊದಲ ದಿನವೇ, ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಸದಸ್ಯರ ಕೊರತೆ ಎದ್ದು ಕಾಣುತ್ತಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಎರಡು ದಿನ ಪ್ರತ್ಯೇಕವಾಗಿ ರಿಸಿದ್ದರೂ, ಅದರಲ್ಲಿ ಭಾಗವಹಿಸಲು ಅನೇಕ ಶಾಸಕರು ಸಿದ್ಧರಿಲ್ಲ. ಬೆಂಗಳೂರಿನಲ್ಲಿ ಅಧಿವೇಶನ ನಡೆಯುವಾಗ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಸಮಯ ನೀಡುವುದಿಲ್ಲ ಎಂದು ಆರೋಪಿಸುವ ಕೆಲ ಶಾಸಕರು, ಬೆಳಗಾ ವಿಯ ಅಧಿವೇಶನ ದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಶಾಸನ ರಚನೆಯಲ್ಲಿ ಹಾಗೂ ಕ್ಷೇತ್ರದ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿಯೇ ಇರುವ ಸದನದಲ್ಲಿ ಭಾಗವಹಿಸಿ, ಜನರ ಸಮಸ್ಯೆಗೆ ಉತ್ತರಿಸಬೇಕಾದ ಶಾಸಕರು ಗೈರಾಗುವುದು ಸರಿಯಾದ ಕ್ರಮವಲ್ಲ.

ಈ ರೀತಿ ಶಾಸಕರು ಗೈರಾಗುತ್ತಿರುವುದು ಇದೇ ಮೊದಲಲ್ಲ. ಕೆಲ ವರ್ಷಗಳ ಸದನದಲ್ಲಿ ಶಾಸಕರ ಹಾಜರಾತಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಕಲಾಪ ಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಪ್ರತಿಪಕ್ಷದಲ್ಲಿದ್ದರೆ ಸರಕಾರದ ವಿರುದ್ಧ ಸದನದ ಹೊರಗೆ ಹೋರಾಟ ಮಾಡುವುದಾಗಿ ಹೇಳಿಕೊಂಡು ಇರುತ್ತದೆ. ಆಡಳಿತ ಪಕ್ಷದಲ್ಲಿರುವ ಶಾಸಕರು, ವಿಧಾನಸೌಧಕ್ಕೆ ಆಗಮಿಸಿದರೂ, ಕಲಾಪ ದಲ್ಲಿ ಭಾಗಿಯಾಗದೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಎಂಎಲಎ ಪಾಸ್ ಅನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ.

ಆದರೆ ಶಾಸಕರಾಗಿರುವವರು ಮೊದಲು, ಸದನದೊಳಗೆ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಮೂರು ವರ್ಷದ ಬಳಿಕ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಿಂದ ತಪ್ಪಿಸಿಕೊಳ್ಳುವ ಬದಲು, ಶಾಸಕರು ಸದನಕ್ಕೆ ಬಂದು, ತಮ್ಮ ಕ್ಷೇತ್ರಗಳ ಸಮಸ್ಯೆ ಬಗ್ಗೆ ಚರ್ಚಿಸಲಿ.