Tuesday, 17th May 2022

ನೂತನ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸನ್ಮಾನ

ಶಿರಸಿ : ಉತ್ತರ ಕನ್ನಡ ಜಿಲ್ಲಾ ಭಾರತೀಯ ಜನಪಾ ಪಾರ್ಟಿ ನೂತನ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ರವರನ್ನು ಸಮ್ಮಾನಿಸಿ ಗೌರವಿಸ ಲಾಯಿತು.

ನಗರದ ದೀನದಯಾಳ್ ಸಭಾಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಉಳ್ವೇಕರ್ ಅವರನ್ನು ಶಾಲು ಹೊದೆಸಿ ಗೌರವಿಸಿದರು. ನಂತರ ವಿವಿಧ ಮಂಡಳಗಳ ವತಿ ಯಿಂದ ಉಳ್ವೇಕರ್ ಗೌರವ ಸ್ವೀಕರಿಸಿದರು.

ನಂತರ ಮಾತನಾಡಿದ ಸಚಿವ ಹೆಬ್ಬಾರ್, ಪಕ್ಷದ ಎಲ್ಲಾ ಕಾರ್ಯಕರ್ತರು ಗಳು ಹಾಗೂ ಜನಪ್ರತಿನಿಧಿಗಳ ಕಠಿಣ ಪರಿಶ್ರಮ ದಿಂದ ಬಿಜೆಪಿ ಜಿಲ್ಲೆಯಲ್ಲಿ ಜಯಗಳಿಸಿದೆ‌. ಈ ಚುನಾವಣೆ ಯ ಬಗ್ಗೆ ಸಾಕಷ್ಟು ಆತ್ಮಾವಲೋಕನ ನಡೆಯಬೇಕಿದೆ‌. ನಮ್ಮ ನಿರೀಕ್ಷೆ ಗೆ ಎಲ್ಲೋ ಹಿನ್ನಡೆಯಾಗಿದೆ ಎಂಬ ಭಾವನೆ ಬಂದಿದೆ .ಅದಕ್ಕಾಗಿ ಆತ್ಮಾವ ಲೋಕನದ ಅವಶ್ಯಕತೆ ಸಾಕಷ್ಟು ಇದೆ ಎಂದರು.

ಹಳಿಯಾಳ ಮತ್ತು ಜೋಯಿಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ೨೫೦ ಸದಸ್ಯನ್ನು ಹಿಡಿದಿಟ್ಟುಕೊಂಡು ಜಯಗಳಿಸಲು ಸಹಕಾರ ನೀಡಿದ್ದಾರೆ ಎಂದ ಹೆಬ್ಬಾರ್, ಒಟ್ಟಾರೆಯಾಗಿ ಗಣಪತಿ ಉಳ್ವೇಕರ್ ರವರ ಗೆಲುವು ಬಹಳ ಸಂತಸತಂದಿದೆ. ಈ ಚುನಾವಣೆ ಯಿಂದ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೆವೆ. ಈ ಪಾಠವನ್ನು ಎಲ್ಲಾ ಕಾರ್ಯಕರ್ತರು ಜನಪ್ರತಿನಿಧಿ ಗಳು ಕಲಿತುಕೊಳ್ಳಬೇಕು. ಸಂಘಟನೆ ಮತ್ತು ಪ್ರಾತಿನಿತ್ಯದ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ , ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ , ಗ್ರಾಮೀಣ ವಿಕೇಂದ್ರೀಕರಣ ವ್ಯವಸ್ಥೆ ಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಪ್ರಮುಖರಾದ ಕೆ ಜಿ ನಾಯ್ಕ , ಚಂದ್ರು ಎಸಳೆ, ಉಷಾ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ, ಭಾರತಿ ಜಂಗ್ಲಿ ಸೇರಿ ಹಲವರು ಉಪಸ್ಥಿತರಿದ್ದರು.