Friday, 12th August 2022

ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿರುವ ನೀರು ಮೀನುಗಾರಿಕೆಗೆ ಯೋಗ್ಯ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿರುವ ನೀರು ಮೀನುಗಾರಿಕೆಗೆ ಯೋಗ್ಯವಾಗಿದೆ ಎಂದು ಮೀನು ಆರೋಗ್ಯ ತನಿಖಾ ಪ್ರಯೋಗಾಲಯ ವರದಿ ನೀಡಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಟಿ.ಎನ್.ಯಶಸ್ವಿನಿ ತಿಳಿಸಿದ್ದಾರೆ.

ಇತ್ತೀಚೆಗೆ ಕೆರೆಯಲ್ಲಿ ಮೀನುಗಳ ಸಾವು ಸಂಭವಿಸಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು.

ಕಳೆದ ಕೆಲವು ದಿನಗಳ ಹಿಂದೆ ಗೋಪಾಲಕೃಷ್ಣ ಅಮಾನಿಕೆರೆಯಲ್ಲಿ ಮೀನುಗಳು ಸತ್ತಿದ್ದವು. ಹೀಗಾಗಿ ಬೆಂಗಳೂರಿನ ಹೆಬ್ಬಾಳ ದಲ್ಲಿರುವ ಮೀನು ಆರೋಗ್ಯ ತನಿಖಾ ಪ್ರಯೋಗಾಲಯಕ್ಕೆ ಕೆರೆ ನೀರನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು  ಪ್ರಯೋಗಾ ಲಯ ವರದಿ ನೀಡಿದ್ದು, ಕೆರೆಯಲ್ಲಿ ನೀರಿನ ಗುಣಮಟ್ಟ ಅನುಮತಿಸಲಾದ ಮಿತಿಯಲ್ಲೇ ಇದೆ. ಅಲ್ಲದೆ ಕೆರೆಯಲ್ಲಿರುವ ನೀರು ಮೀನುಗಾರಿಕೆಗೆ ಯೋಗ್ಯವಾಗಿದೆ ಎಂದು ವರದಿ ಯಲ್ಲಿ ತಿಳಿಸಲಾಗಿದೆ ಎಂದು ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ .

ತೀವ್ರ ಉಷ್ಣಾಂಶದ ಹಿನ್ನಲೆಯಲ್ಲಿ ಕೆರೆಯಲ್ಲಿರುವ ನೀರಿನ ಆಮ್ಲಜನಕದ ಕೊರತೆಯಿಂದ ಮೀನುಗಳು ಸತ್ತಿವೆ. ಆದರೆ ಕೆರೆಯ ನೀರಿನಲ್ಲಿ ಯಾವುದೇ ವಿಷಕಾರಿ ಅಂಶಗಳಿಲ್ಲ ಎಂದು ಪ್ರಯೋಗಾಲಯ ಸ್ಪಷ್ಟಪಡಿಸಿದೆ.