Sunday, 17th October 2021

ಬ್ರಿಟಿಷರ ವಿರುದ್ಧ ಹೋರಾಡಿದ ಇವರನ್ನು ನಾವೇಕೆ ಮರೆತಿದ್ದೇವೆ?

ಶಶಾಂಕಣ
ಶಶಿಧರ ಹಾಲಾಡಿ
shashidhara.halady@gmail.com

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯ ಪಡೆಯಲು ನಡೆದ ಹೋರಾಟದ ವಿವರಗಳನ್ನು ಗಮನಿಸುತ್ತಾ ಹೋದರೆ, ಎದುರಾಗುವ ಹಲವು ಪ್ರಶ್ನೆಗಳು ಸಾಕಷ್ಟು ಕುತೂಹಲ ಕೆರಳಿಸುತ್ತವೆ.

1947ಕ್ಕಿಂತ ಬಹಳ ಮುಂಚೆಯೇ ಬ್ರಿಟಿಷರನ್ನು ಭಾರತದಿಂದ ಓಡಿಸಲು ಸಾಧ್ಯವಿತ್ತೆ? ಕಲೋನಿಯ್ ದುರಾಡಳಿತ ಕೊನೆಗೊಳ್ಳಲು ಎರಡನೆಯ ಮಹಾಯುದ್ಧ ಮುಗಿದು, ಬ್ರಿಟಿಷರ ಶಕ್ತಿ ಕುಂದುವ ತನಕ ಕಾಯಬೇಕಿತ್ತೆ? ಮೊದಲನೆಯ ಮಹಾಯುದ್ಧದ ಸಮಯದಲ್ಲೇ, ಬ್ರಿಟಿಷರನ್ನು ಭಾರತದಿಂದ ಹೊರದಬ್ಬುವ ಒಂದು ಪ್ರಯತ್ನ ನಡೆದಿದ್ದರೂ, ಆ ಹೋರಾಟದ ವ್ಯಾಪಕ ವಿವರಗಳು ಇಂದು ಏಕೆ ಜನಮಾನಸದಿಂದ ಮರೆಯಾಗಿವೆ? 1912ರಲ್ಲೇ ಭಾರತದ ವೈಸ್‌ರಾಯ್ ಮೇಲೆ ಬಾಂಬ್ ಎಸೆದು, ಆತನನ್ನು ಗಾಯಗೊಳಿಸಿ, ಆತನ ಪಕ್ಕದಲ್ಲಿ ನಿಂತಿದ್ದ ಭಾರತೀಯ ಅಂಗರಕ್ಷಕನನ್ನು ಸಾಯಿಸಿದ ಸ್ವಾತಂತ್ರ್ಯ ಹೋರಾಟಗಾರರ ಅಭಿಯಾ ನವು, ನಂತರದ ದಶಕಗಳಲ್ಲಿ ತನ್ನ ಶಕ್ತಿಯನ್ನು ತೀವ್ರವಾಗಿ ಕಳೆದುಕೊಂಡದ್ದು ಹೇಗೆ? ಇಂತಹ ಹಲವು ಕುತೂಹಲಕಾರಿ, ಆದರೆ ಸೂಕ್ಷ್ಮ ವಿಶ್ಲೇಷಣೆಗೆ ಒಳಗಾಗ ಬೇಕಾದ ಹಲವು ಪ್ರಶ್ನೆಗಳಿಗೆ ಸ್ಪಷ್ಟವಾದ, ಇದಮಿತ್ಥಂ ಎಂಬ ಉತ್ತರ ಹುಡುಕುವುದು ತುಸು ಕಷ್ಟದ ಕೆಲಸ.

ಅಂತಹ ಪ್ರಶ್ನೆಗಳಿಗೆ ಉತ್ತರವನ್ನು ಅಧಿಕೃತ ಇತಿಹಾಸದ ಪುಸ್ತಕಗಳಲ್ಲಿ, ವಿವಿಧ ವರದಿಗಳಲ್ಲಿ, ಹೋರಾಟ ಗಾರರ ಜೀವನಚರಿತ್ರೆಗಳಲ್ಲಿ, ಮುಚ್ಚಿಹಾಕಿದ ಮತ್ತು ಮರೆಮಾಚಿದ ಕಥನಗಳಲ್ಲಿ ಹುಡುಕಬೇಕಷ್ಟೆ. ದೂರದ ದಕ್ಷಿಣ ಆಫ್ರಿಕಾದಲ್ಲಿ ಎರಡು ದಶಕಗಳ ಕಾಲ ವಾಸಿಸಿದ್ದ ಬ್ಯಾರಿಸ್ಟರ್, ಹೋರಾಟಗಾರ, ಸತ್ಯಾಗ್ರಹ ಎಂಬ ಅಸವನ್ನು ಅಲ್ಲಿನ ಬ್ರಿಟಿಷ್ ಆಡಳಿತಗಾರರ ವಿರುದ್ಧ ಪ್ರಯೋಗಿಸಿ ಹೆಸರಾಗಿದ್ದ, ಅಹಿಂಸೆ ಮತ್ತು ಶಾಂತಿಯನ್ನೇ ಹೋರಾಟಕ್ಕೆ ಪ್ರಧಾನವಾಗಿ ಬಳಸಬೇಕೆಂದು ಪ್ರತಿಪಾದಿಸುತ್ತಿದ್ದ ಮಹಾತ್ಮಾ ಗಾಂಧೀಜಿಯವರು 1915ರಲ್ಲಿ ಭಾರತಕ್ಕೆ ಬಂದರು.

ಅಂದಿನ ಹೋರಾಟಗಾರ ನಾಯಕ ಗೋಪಾಲ ಕೃಷ್ಣ ಗೋಖಲೆಯವರ ಮನವಿಯ ಮೇರೆಗೆ, ಸಿ.ಎಸ್. ಆಂಡ್ರೂಸ್ ಎಂಬ ಆಂಗ್ಲಿಕನ್ ಪ್ರೀಸ್ಟ್ ಮತ್ತು ಕ್ರಿಶ್ಚಿಯನ್ ಮಿಷನರಿಯು, ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಹೋಗಿ, ಗಾಂಧೀಜಿಯವರ ಜತೆ ಕೆಲ ಕಾಲ ವಾಸಿಸಿ, ಅವರ ಗೆಳೆತನ ಸಂಪಾದಿಸಿ, ಅವರನ್ನು ಭಾರತಕ್ಕೆ ವಾಪಸಾಗುವಂತೆ ಮನವೊಲಿಸಿ, ಕರೆತರುವಲ್ಲಿ ಯಶಸ್ವಿಯಾಗುತ್ತಾನೆ. 9.1.1915ರಂದು ಮುಂಬಯಿಗೆ ಹಡಗಿನ ಮೂಲಕ ಬಂದ ಗಾಂಧೀಜಿಯವರನ್ನು ಮುಂಬಯಿಯ ಶ್ರೀಮಂತ ವರ್ತಕರು, ಜನಸಾಮಾನ್ಯರು ಭವ್ಯವಾಗಿ ಸ್ವಾಗತಿಸುತ್ತಾರೆ.

ಶ್ರೀಮಂತ ವ್ಯಾಪಾರಿಯೊಬ್ಬನ ಅರಮನೆಯಂತಹ ಬಂಗಲೆಯಲ್ಲಿ ಅವರಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗುತ್ತದೆ. ಇದಕ್ಕೆ ಅಲ್ಲಿನ ಬ್ರಿಟಿಷ್ ಸರಕಾರದ ಸಮ್ಮತಿ ಇತ್ತು! ಮಾತ್ರವಲ್ಲ, ಬ್ರಿಟಿಷ್ ಸರಕಾರವೇ ಗಾಂಧೀಜಿಯವರನ್ನು ಸ್ವಾಗತಿ ಸುವ ಸಂಭ್ರಮದಲ್ಲಿ ಪಾಲ್ಗೊಂಡಿತ್ತು! 1915ರಲ್ಲಿ ನಡೆದ ಬ್ರಿಟಿಷ್ ರಾಜನ ಜನ್ಮದಿನದ ನೆನಪಿನಲ್ಲಿ ಗಾಂಧೀಜಿಯವರಿಗೆ ‘ಕೈಸರ್ ಎ ಹಿಂದ್’ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು. ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಸೈನಿಕರಿಗೆ ಮತ್ತು ಜುಲು ಜನರಿಗೆ ಆಂಬುಲೆನ್ಸ್ ಸೇವೆ ನೀಡಿದ್ದಕ್ಕಾಗಿ ಗಾಂಧೀಯವರಿಗೆ ಆ ಪದಕ ನೀಡಲಾಗಿತ್ತು!

ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯ ನಾಯಕತ್ವವನ್ನು ವಹಿಸ ಲೆಂದೇ ಬಂದಿದ್ದ, ಅದಾಗಲೇ ಮಹಾತ್ಮಾ ಎಂಬ ಗೌರವಕ್ಕೆ ಪಾತ್ರರಾಗಿದ್ದ ಗಾಂಧೀಜಿಯವರನ್ನು ಬ್ರಿಟಿಷ್ ಸರಕಾರವು ಭವ್ಯವಾಗಿ ಸ್ವಾಗತಿಸಿ, ಚಿನ್ನದ ಪದಕ ನೀಡಿ ಗೌರವಿಸಿದ ವಿಚಾರವು, ಬ್ರಿಟಿಷರ ವಿಶಾಲ ಹೃದಯವನ್ನು ತೋರಿಸುತ್ತದೆ ಎಂಬ ವಿಶ್ಲೇಷಣೆಗೆ ಒಳಪಟ್ಟಿದೆ. ಗಮನಿಸಿ – ಅದಾಗಲೇ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ವಿರೋಧಿ ಎಂದೇ ಹೆಸರು ಮಾಡಿದ, ಪ್ರಖ್ಯಾತ ಹೋರಾಟಗಾರರಾಗಿದ್ದರು.

1915ರಲ್ಲಿ ಗಾಂಧೀಜಿಯವರು ಭಾರತಕ್ಕೆ ಬಂದಾಗ, ಇಲ್ಲಿ ವೈಸ್‌ರಾಯ್ ಆಗಿದ್ದ ಹಾರ್ಡಿಂಜ್ ಎಂಬಾತ ಮನದಲ್ಲೇ ಸಂಭ್ರಮಿಸಿರಲೇಬೇಕು! ಮೂರು ವರ್ಷಗಳ ಹಿಂದೆ ಬಾಂಬ್ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಆತನು, ಗಾಂಧೀಜಿಯವರ ಹೋರಾಟದ ಪ್ರಮುಖ ಅಸಗಳಲ್ಲಿ ಒಂದಾದ ‘ಸತ್ಯಾಗ್ರಹ’ವನ್ನು ಬಹಿರಂಗವಾಗಿ ಬೆಂಬಲಿಸಿ, ಹೊಗಳುತ್ತಾನೆ! ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ವಿರುದ್ಧವೇ ಪ್ರಯೋಗಿಸಿದ್ದ ಈ ಅಸ್ತ್ರ ಸಂಶೋಧಕರಾದ ಮಹಾತ್ಮಾ ಗಾಂಧೀಜಿಯವರನ್ನು ಭಾರತ ದಲ್ಲಿ 1915ರಲ್ಲಿ ಗೌರವಿಸುವ ಮೂಲಕ, ಬ್ರಿಟಿಷ್ ಸರಕಾರ ಮತ್ತು ಅಂದಿನ ವೈಸ್‌ರಾಯ್ ಅವರ ನಡೆಯು ಬ್ರಿಟಿಷರ ಕರಾಮತ್ತು ಮತ್ತು ಸಂಚು ಎಂದು ಕರೆದ ಇತಿಹಾಸಕಾರರೂ ಇದ್ದಾರೆ. ಹೀಗೆ ವಿಶ್ಲೇಷಿಸುವಾಗ, ಮಹಾತ್ಮಾ ಅವರ ಅಹಿಂಸಾತ್ಮಕ ಹೋರಾಟ ಮತ್ತು ಸತ್ಯಾಗ್ರಹದ ಮಹತ್ವವನ್ನು ಅನುಮಾನಿಸುತ್ತಿಲ್ಲ, ಬದಲಿಗೆ ಬ್ರಿಟಿಷರ ನಡೆಯನ್ನು ಸಂಶಯದಿಂದ ನೋಡಲಾಗಿದೆ.

ಮೊದಲನೆಯ ಮಹಾಯುದ್ಧ ಆರಂಭವಾದ ನಂತರ (29.7.1914), ದೂರದ ಯುರೋಪಿನಲ್ಲಿ ಆ ಯುದ್ಧದಲ್ಲಿ ಭಾಗಿಯಾಗಿದ್ದ ಬ್ರಿಟಿಷ್ ಸೇನೆಯು, ತನ್ನ
ಅಡಿಯಾಳಾಗಿದ್ದ ಭಾರತೀಯ ಸೇನೆಯ ಯೋಧರನ್ನೂ ಕರೆಸಿಕೊಂಡಿತ್ತು. ಆ ಕಾರಣದಿದಾಗಿ, ಭಾರತದಲ್ಲಿ ಉಳಿದಿದ್ದ ಬ್ರಿಟಿಷ್ ಸೈನಿಕರ ಸಂಖ್ಯೆ ಸಹಜವಾಗಿ ಕಡಿಮೆಯಾಗಿತ್ತು. ಇದೇ ಸಂದರ್ಭವನ್ನುಪಯೋಗಿಸಿಕೊಂಡು, ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಶಸ ಹೋರಾಟ ನಡೆಸಿ, ಆ ಕಲೋನಿಯಲ್ ಶಕ್ತಿಯನ್ನು ಭಾರತದಿಂದ ಒದ್ದೋಡಿಸಬೇಕೆಂದು ಬಂಗಾಳದ ಕ್ರಾಂತಿಕಾರಿಗಳು, ಪಂಜಾಬ್ ನ ಗದ್ದರ್ ಪಕ್ಷದ ಸದಸ್ಯರು ಯೋಜನೆ ಯೊಂದನ್ನು ತಯಾರಿಸಿದ್ದರು! ಒಂದು ಅಂದಾಜಿ ನಂತೆ, ಆ ಸಮಯದಲ್ಲಿ ಭಾರತದಲ್ಲಿ ಉಳಿದಿದ್ದ ಬ್ರಿಟಿಷ್ ಸೈನ್ಯದ ಸಂಖ್ಯೆ ಕೇವಲ 15000. ಬ್ರಿಟಿಷರ ವಿರುದ್ಧ ಯೋಜಿತ ಹೋರಾಟಕ್ಕೆಂದೇ ಸಾವಿರಾರು ಪಂಜಾಬಿ ಹೋರಾಟಗಾರರು ಕೆನಡಾ ಮತ್ತು ಇತರ ದೇಶಗಳಿಂದ ರಹಸ್ಯವಾಗಿ, ವಿವಿಧ ನೆಪಗಳನ್ನು ಮಾಡಿಕೊಂಡು 1914-15ರ ಅವಽಯಲ್ಲಿ ಭಾರತಕ್ಕೆ ಬಂದಿದ್ದರು.

ಬ್ರಿಟಿಷರ ವಿರುದ್ಧ ಬೃಹತ್ ಸಂಚು ರೂಪಿಸಿದ್ದ ಈ ಹೋರಾಟಕ್ಕೆ ಕೇಂದ್ರೀಕೃತ ನಾಯಕತ್ವ ಇರಲಿಲ್ಲ ಎಂದು ಅಧಿಕೃತ ಇತಿಹಾಸಕಾರರು ಹೇಳಿದ್ದಾರೆ. ಗದ್ದರ್‌ಪಕ್ಷ ಮತ್ತು ಬಂಗಾಳದ ಅನುಶೀಲನ ಸಮಿತಿಯ ಹಲವು ಸದಸ್ಯರು ಈ ಹೋರಾಟದ ನಾಯಕತ್ವ ವಹಿಸಿದ್ದರು. ಬಂಗಾಳದ ರಾಶ್ ಬಿಹಾರಿ ಬೋಸ್ ಎಂಬ ಹೋರಾಟಗಾರನ ನಾಯಕತ್ವದಲ್ಲಿ 21.2.1915ರಂದು, ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯ ಏಳಬೇಕು ಎಂಬುದು ಆರಂಭಿಕ ಯೋಜನೆ. ಪಂಜಾಬಿನ 23ನೇ ಪದಾತಿದಳದ ಸೈನಿಕರು, ಆ ದಿನ ಬೆಳಿಗ್ಗೆ ಹಾಜರಾತಿಯ ಸಮಯದಲ್ಲಿ ಬ್ರಿಟಿಷ್ ಅಽಕಾರಿಗಳನ್ನು ಸಾಯಿಸಿ, ಶಸ್ತ್ರಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ಇದೇ ರೀತಿಯ ಹೋರಾಟವು ದೆಹಲಿ ಮತ್ತು ಲಾಹೋರಿನಲ್ಲಿ ಮುಂದುವರಿಯಬೇಕು ಎಂಬುದು ಮೂಲ ಯೋಜನೆ.

ಅದೇ ದಿನ ಹೊರಟು, ಬಂಗಾಳಕ್ಕೆ ಬಂದು ತಲುಪುವ ಪಂಜಾಬ್ ಮೈಲ್ ರೈಲು ಪಯಣವು, ಬಂಗಾಳಿ ಹೋರಾಟಗಾರರಿಗೆ ಸಂದೇಶ ನೀಡುವ ವಾಹಕ! ಪಂಜಾಬಿನಲ್ಲಿ ಸಶಸ ಹೋರಾಟ ನಡೆದಿದ್ದ ಪಕ್ಷದಲ್ಲಿ, ಪಂಜಾಬ್ ಮೈಲ್ ರೈಲು ಆ ದಿನ ಬರುವುದಿಲ್ಲ ಮತ್ತು ಅದನ್ನೇ ಸೂಚನೆ ಎಂದು ತಿಳಿದು, ಬಂಗಾಲದ ಕ್ರಾಂತಿಕಾರಿಗಳು ಅಲ್ಲಿ ಹೋರಾಟ ನಡೆಸಬೇಕು ಎಂಬುದು ನೀಲನಕ್ಷೆ. ಆದರೆ ರಾಶ್ ಬಿಹಾರಿ ಬೋಸ್ ಮತ್ತು ಇತರರ ಜತೆಗೂಡಿ ತಯಾರಿಸಿದ್ದ ಈ ಯೋಜನೆ ವಿ-ಲಗೊಳ್ಳಲು ಕಾರಣನಾದವನು ಕಿರ್ಪಾಲ್ ಸಿಂಗ್ ಎಂಬ ಸೈನಿಕ ಮತ್ತು ಗೂಢಚಾರ!

23ನೇ ಪದಾತಿದಳದಲ್ಲಿದ್ದ ಸೈನಿಕನೊಬ್ಬನು ಈತನ ಸೋದರ ಸಂಬಂಧಿ. ಬ್ರಿಟಿಷರ ವಿರುದ್ಧ ಹೋರಾಡುವ ಈ ಸಶಸ ದಂಗೆಯ ವಿವರಗಳನ್ನು ಆತ ಸಂಗ್ರಹಿಸಿ, ಬ್ರಿಟಿಷರಿಗೆ ತಿಳಿಸುತ್ತಾನೆ. ಈ ವಿಚಾರವು ಹೋರಾಟಗಾರರಿಗೆ ತಿಳಿಯುತ್ತದೆ. ತುಸು ಗಲಿಬಿಲಿಗೊಂಡ ರಾಶ್ ಬಿಹಾರಿ ಬೋಸ್, ಹೋರಾಟದ ದಿನಾಂಕವನ್ನು ಎರಡು ದಿನ ಹಿಂದೂಡುತ್ತಾರೆ. 19.2.1915ರಂದು ಹೋರಾಟ ನಡೆಯ ಬೇಕು ಎಂದು ಮಾಡಿದ ಇವರ ನಿರ್ಧಾರವು ಸಹ ಕಿರ್ಪಾಲ್ ಸಿಂಗ್‌ಗೆ ತಿಳಿದು, ಅವನ ಮೂಲಕ ಲಿಯಾಕತ್ ಹಯಾತ್ ಖಾನ್ ಎಂಬ ಪೊಲೀಸ್ ಅಽಕಾರಿಗೆ ರವಾನೆಯಾಗುತ್ತದೆ.

ಮುಂದಿನದು ಕ್ಷಿಪ್ರ, ಶೀಘ್ರ. ಹೋರಾಟಗಾರರು ಗುಪ್ತ ಸಭೆ ನಡೆಸುತ್ತಿದ್ದ ಜಾಗವನ್ನು ಕ್ರಿಪಾಲ್ ಸಿಂಗ್ ಪೊಲೀಸರಿಗೆ ತೋರಿಸಿದ್ದರಿಂದ, ಅವರಲ್ಲಿ ಹಲವರನ್ನು ಬ್ರಿಟಿಷ್ ಸರಕಾರ ಬಂಧಿಸುತ್ತದೆ. ಅವರನ್ನು ಕ್ಷಿಪ್ರ ಕಾನೂನು ಪ್ರಕ್ರಿಯೆಗೆ ಒಳಪಡಿಸಿ, ಶಿಕ್ಷೆ ವಿಧಿಸಿ, ಬ್ರಿಟಿಷರು ಫೆಬ್ರವರಿ 1915ರ ಉದ್ದೇಶಿತ ಹೋರಾಟವನ್ನು ಮಣಿಸುವಲ್ಲಿ ಸಫಲವಾಗುತ್ತಾರೆ. ಈ ನಡುವೆ ಗಾಂಽಜಿಯವರು ಬ್ರಿಟಿಷರ ವಿರುದ್ಧ ನಡೆಯುವ ಅಂತಹ ಸಶಸ ಹೋರಾಟವನ್ನು ಬಲವಾಗಿ ಖಂಡಿಸಿ, ಶಾಂತಿ ಯಿಂದ ಪ್ರತಿಭಟನೆ ಮಾಡಬೇಕೆಂದು ಬಹಿರಂಗ ಕರೆಯನ್ನು ಹಲವು ಬಾರಿ ನೀಡುತ್ತಾರೆ ಮಾತ್ರವಲ್ಲ, ಸತ್ಯಾಗ್ರಹ ಅಸ್ತ್ರನ್ನು ಮೈಸೂರು ರಾಜಮನೆತನ ಕ್ಕೂ ದಸರಾ ಆನೆಗಳಿಗೂ ವಿಶೇಷವಾದ ನಂಟಿದೆ.

ಪ್ರತಿ ವರ್ಷವೂ ಆನೆಗಳು ಕಾಡಿನಿಂದ ಆಗಮಿಸಿದ ನಂತರ ರಾಜಮನೆತನದವರು ಆನೆಗಳನ್ನು ಸ್ವಾಗತಿಸಿ, ಮಾವುತರು ಮತ್ತು ಕಾವಡಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ದಸರಾ ಮುಗಿದ ಬಳಿಕ ಅವರಿಗೆ ಔತಣ ಕೂಟ ಆಯೋಜಿಸಿ, ಉಡುಗೊರೆಗಳನ್ನು ಕೊಟ್ಟು ಬೀಳ್ಕೊಡುತ್ತಾರೆ. ಈಗ ದಸರೆಯ ಜವಾಬ್ದಾರಿ ಯನ್ನು ಸರ್ಕಾರ ನಿರ್ವಹಿಸುತ್ತಿದ್ದರೂ, ರಾಜಮನೆತನದ ಸಂಪ್ರದಾಯಗಳು ಹಾಗೆಯೇ ಮುಂದುವರಿದಿದೆ. ಬ್ರಿಟಿಷರ ವಿರುದ್ಧ ಹಲವು ಬಾರಿ ಪ್ರಯೋಗಿಸುತ್ತಾರೆ.
1915ರಲ್ಲಿ ಬ್ರಿಟಿಷ್ ಪೋಲೀಸರಿಂದ ಬಂಧನಕ್ಕೆ ಒಳಗಾಗದೇ ತಪ್ಪಿಸಿಕೊಂಡ ಹೋರಾಟಗಾರರಲ್ಲಿ ಪ್ರಮುಖರೆಂದರೆ ರಾಶ ಬಿಹಾರಿ ಬೋಸ್! ಬ್ರಿಟಿಷ್
ಇತಿಹಾಸಕಾರರು ಈ ಒಂದು ವಿದ್ಯಮಾನವನ್ನು ಒಂದು ದೊಡ್ಡ ನಷ್ಟ ಎಂದು ವಿವರಿಸಿದ್ದಾರೆ.

ಎಷ್ಟಿದ್ದರೂ, ಅದು ಬ್ರಿಟಿಷರ ಅಧಿಕೃತ ಇತಿಹಾಸ ತಾನೆ! ರಾಶ್ ಬಿಹಾರಿ ಬೋಸ್‌ರನ್ನು ಬಂಧಿಸಬೇಕೆಂಬ ಅವರ ಅಭಿಲಾಷೆ ಉತ್ಕಟವಾಗಿತ್ತು. ಏಕೆಂದರೆ, 1912ರಲ್ಲಿ ದೆಹಲಿಯಲ್ಲಿ ವೈಸ್‌ರಾಯ್ ಮೇಲೆ ಬಾಂಬ್ ಎಸೆತದ ಪ್ರಕರಣದಲ್ಲಿ ರಾಶ್ ಬಿಹಾರಿ ಬೋಸ್ ಅವರು ಪ್ರಮುಖ ಆರೋಪಿ. ಆ ಪ್ರಕರಣದಲ್ಲಿ, ಬಾಂಬ್ ಎಸೆದ ಬಸಂತ್ ಕುಮಾರ್ ಬಿಸ್ವಾಸ್ ಎಂಬ ಯು ಕ್ರಾಂತಿಕಾರಿ ಮತ್ತು ಇತರ ನಾಲ್ವರನ್ನು ಬ್ರಿಟಿಷರು ನೇಣುಗಂಬಕ್ಕೆ ಹಾಕಿದರು. ಆದರೆ ಬಾಂಬ್ ಎಸೆತದಲ್ಲಿ ಪ್ರಮುಖ ಪಾತ್ರವಹಿ ಸಿದರೂ, ಡೆಹರಾಡೂನ್‌ನಲ್ಲಿ ಸರಕಾರಿ ಸೇವೆಯಲ್ಲಿದ್ದುಕೊಂಡೇ, ರಹಸ್ಯವಾಗಿ ಮತ್ತೆ ಮೂರು ವರ್ಷ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದ ರಾಶ್ ಬಿಹಾರಿ ಬೋಸ್ ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಆದರೆ, ಬ್ರಿಟಿಷ್ ಸಾಮ್ರಾಜ್ಯದಲ್ಲಿದ್ದರೆ ಒಂದಲ್ಲ ಒಂದು ದಿನ ನಮ್ಮವರೇ ಅವರನ್ನು ಹಿಡಿದುಕೊಡುವುದು ಖಚಿತ ಎಂದರಿತ ಬೋಸ್, ಜಪಾನ್ ದೇಶಕ್ಕೆ ರಹಸ್ಯವಾಗಿ ಪಯಣಿಸುತ್ತಾರೆ. ಎಲ್ಲಿಯ ಬಂಗಾಳ! ಎಲ್ಲಿಯ ಜಪಾನ್! ಆದರೆ, ರಾಶ್ ಬಿಹಾರಿ ಬೋಸ್ ತಮ್ಮ ಹೋರಾಟವನ್ನು ದಶಕಗಳ ಕಾಲ ಚಾಲ್ತಿಯ ಲ್ಲಿಟ್ಟಿದ್ದು ಮಾತ್ರ ವಿಶೇಷ. 1915ರಲ್ಲಿ ರಹಸ್ಯವಾಗಿ ಜಪಾನ್ ಪ್ರವೇಶಿಸಿದ ರಾಶ್ ಬಿಹಾರಿ ಬೋಸ್ ಅವರು, ಮೊದಲ ಕೆಲವು ವರ್ಷಗಳ ಕಾಲ ರೋಚಕ ರಹಸ್ಯ ಜೀವನ ನಡೆಸುತ್ತಾರೆ. ರವೀಂದ್ರ ನಾಥ ಠಾಕೂರರ ಸಂಬಂಧಿ ಪ್ರಿಯನಾಥ್ ಠಾಕೂರ್ ತಾನು ಎಂದು ಮಾರುವೇಷ ಧರಿಸಿ, ಮೂರು ವರ್ಷಗಳ ಕಾಲ ಭೂಗತ ಜೀವನ ನಡೆಸಿದರು.

ಏಕೆಂದರೆ, ಬ್ರಿಟಿಷರು ಇವರನ್ನು ಭಾರತಕ್ಕೆ ಕಳಿಸಿ ಎಂದು ಜಪಾನ್ ಸರಕಾರವನ್ನು ಒತ್ತಾಯಿಸುತ್ತಿತ್ತು! 1918ರಲ್ಲಿ ಜಪಾನ್ ಯುವತಿಯನ್ನು ಮದುವೆಯಾದ ರಾಶ್ ಬಿಹಾರಿ ಬೋಸ್‌ರು, 1923ರಲ್ಲಿ ಜಪಾನ್ ದೇಶದ ಪೌರತ್ವ ಪಡೆದುಕೊಂಡು, ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾರೆ. ಜಪಾನ್‌ನಲ್ಲೇ ಜನರನ್ನು ಸಂಘಟಿಸಿ, ಇಂಡಿಯನ್ ಇಂಡೆಪೆಂಡೆನ್ಸ್ ಲೀಗ್ ಸ್ಥಾಪಿಸಿ, ಇಂಡಿಯನ್ ನ್ಯಾಷನಲ್ ಆರ್ಮಿ ಹುಟ್ಟುಹಾಕಿ, ನಂತರ ಅದನ್ನು ಸುಭಾಷ್ ಚಂದ್ರ ಬೋಸ್ ರಿಗೆ ಒಪ್ಪಿಸುತ್ತಾರೆ. 21.1.1945ರಲ್ಲಿ ಕ್ಷಯರೋಗದಿಂದ ಜಪಾನ್‌ನಲ್ಲೇ ಅವರು ನಿಧನರಾದಾಗ, ಜಪಾನ್ ಸರಕಾರದ ಗೌರವಕ್ಕೂ ಪಾತ್ರರಾಗುತ್ತಾರೆ. ಜಪಾನ್‌ನಲ್ಲಿದ್ದುಕೊಂಡೇ, ಬ್ರಿಟಿಷರ ವಿರುದ್ಧ ಹೋರಾಟವನ್ನು ಚಾಲ್ತಿಯಲ್ಲಿಟ್ಟ ರಾಶ್ ಬಿಹಾರಿ ಬೋಸ್ ಅವರಿಗೆ ಭಾರತದಿಂದ ಸೂಕ್ತ ಪ್ರತಿಸ್ಪಂದನೆ ದೊರಕಲಿಲ್ಲ ಎಂದೇ ಹೇಳಬಹುದು. ಬೋಸ್ ಅವರ ಪ್ರಕಾರ, ಬ್ರಿಟಿಷರನ್ನು ಬೆದರಿಸಿ, ಶಸಗಳ ಮೂಲಕ ಓಡಿಸಬೇಕು.

ಆದರೆ, 1918ರ ನಂತರ, ನಮ್ಮ ದೇಶದಲ್ಲಿ ಅಹಿಂಸಾತ್ಮಕ ಹೋರಾಟ ಹೆಚ್ಚು ಪ್ರಚಾರಕ್ಕೆ ಬರುತ್ತದೆ. ಅಹಿಂಸೆಯನ್ನು ಪ್ರತಿಪಾದಿಸುವ ಮಹಾತ್ಮಾ ಗಾಂಽಜಿ ಯವರ ನಾಯಕತ್ವವನ್ನು, ಬ್ರಿಟಿಷ್ ಸರಕಾರ ಒಂದು ಮಟ್ಟದಲ್ಲಿ ಅಧಿಕೃತಗೊಳಿಸಿತು ಎಂದೇ ಹೇಳಬಹುದು! ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರು ದುರ್ಬಲರಾದಾಗ, ಅವರನ್ನು ಬಗ್ಗುಬಡಿಯ ಬಹುದು ಎಂದು ಗದ್ದರ್ ಪಕ್ಷದ ಮತ್ತು ಬಂಗಾಳಿ ಮೂಲದ ಕ್ರಾಂತಿಕಾರಿಗಳು ಯೋಚಿಸುತ್ತಿದ್ದರೆ, ಅದೇ ಸಮಯದಲ್ಲಿ ಮಹಾತ್ಮಾ ಗಾಂಽಜಿಯವರನ್ನು ಮಾತುಕತೆಗೆ ಕರೆದ ಬ್ರಿಟಿಷ್ ವೈಸ್‌ರಾಯ್ ಒಂದು ಬಹು ಮುಖ್ಯ ಅಭಿಯಾನಕ್ಕೆ ಮಹಾತ್ಮಾ ಗಾಂಽಜಿಯವರ ಸಮ್ಮತಿಯನ್ನು ಪಡೆಯುತ್ತಾನೆ. ಅದೇನೆಂದರೆ, ಮಹಾಯುದ್ಧದಲ್ಲಿ ಬ್ರಿಟಿಷರ ಪರ ಹೋರಾಡಲು, ಭಾರತದ ಸ್ಥಳೀಯರನ್ನು ಭಾರಿ ಸಂಖ್ಯೆಯಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸೇರಿಸುವುದು!

‘ನಮ್ಮವರು ಯುದ್ಧ ತಂತ್ರ ಕಲಿಯಲಿ’ ಎಂಬ ಕಾರಣ ನೀಡಿ, ಗಾಂಧೀಜಿಯವರು ಅಂತಹ ನಡೆಗೆ ಸಮ್ಮತಿ ನೀಡುತ್ತಾರೆ. ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೈನ್ಯ ಸೇರಿದ ನಮ್ಮ ದೇಶದ ಯುವಕರು, ಬ್ರಿಟಿಷ್ ಸೈನ್ಯವನ್ನು ಬಲಪಡಿಸಿ, ಯುರೋಪಿನ ಮೂಲೆ ಮೂಲೆಗಳಲ್ಲಿ ಅವರ ಪರವಾಗಿ ಹೋರಾಡಿದರು, ವೀರ ಮರಣ ವನ್ನೂ ಪಡೆದರು. ಇತ್ತ, ಮಹಾಯುದ್ಧದ ಸಂದರ್ಭದಲ್ಲೇ ಬ್ರಿಟಿಷರನ್ನು ಬಗ್ಗುಬಡಿಯಬೇಕೆಂಬ ಕ್ರಾಂತಿಕಾರಿಗಳ ಹೋರಾಟ, ಕ್ರಮೇಣ ಕಾವು ಕಳೆದು ಕೊಂಡು, ನಿರ್ವಿಣ್ಣವಾಗುತ್ತದೆ!

1915-18ರ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಯೋಜನೆ ತಯಾರಿಸಿದ ರಾಶ್ ಬಿಹಾರಿ ಬೋಸ್‌ರನ್ನು ಇಂದು ಭಾರತ ಮರೆತಿದೆ. ಕೊಲ್ಕೊತ್ತಾದ
ಒಂದು ರಸ್ತೆಗೆ ಅವರ ಹೆಸರನ್ನಿಟ್ಟಿದ್ದರೂ, ಈ ರಾಶ್ ಬಿಹಾರಿ ಎಂದರೆ ಯಾರು ಎಂದು ಜನಸಾಮಾನ್ಯರನ್ನು ಕೇಳಿ ನೋಡಿ, ಉಹುಂ ಎಂದೇ ತಲೆಯಾಡಿಸುತ್ತಾರೆ.
ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಹೋರಾಟ ನಡೆಸಿ, ತಮ್ಮ ಸುಖ ಜೀವನವನ್ನೇ ತ್ಯಾಗ ಮಾಡಿದ ಇಂತಹ ಹಲವು ಹೋರಾಟಗಾರರನ್ನು ನಮ್ಮ
ದೇಶದವರು, ಅಂದರೆ ನಾವು, ಯಾಕೆ ಈ ರೀತಿ ಮರೆತುಬಿಡಬೇಕು ಎಂಬ ಪ್ರಶ್ನೆ ಮಾತ್ರ ಕಾಡುತ್ತಿದೆ.

Leave a Reply

Your email address will not be published. Required fields are marked *