Friday, 27th May 2022

ನಾಳೆ ರಾತ್ರಿಯಿಂದಲೇ ವಾರಾಂತ್ಯ ಕರ್ಪ್ಯೂ ಜಾರಿ…

ಬೆಂಗಳೂರು: ಶುಕ್ರವಾರ (ಡಿ.7)ರಾತ್ರಿ 10ರಿಂದ ಹೋಟೆಲ್‌, ಬಾರ್‌,ಪಬ್‌.ರೆಸ್ಟೋರೆಂಟ್‌ ಬಂದ್‌ ಮಾಡಲು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದೆ. ಸೋಮವಾರ ಬೆಳಗ್ಗೆ 6 ರತನಕ ಬಂದ್‌ ಮಾಡಲು ಆದೇಶ ಪತ್ರದಲ್ಲಿ ಹೇಳಲಾಗಿದೆ. ನಾಳೆ ರಾತ್ರಿಯಿಂದ ರಾಜ್ಯದಲ್ಲಿ ವಾರಾಂತ್ಯ ಕರ್ಪ್ಯೂ ಜಾರಿಗೊಳ್ಳಲಿದೆ.

ಬಾರ್ ಗಳು ತೆರೆದಿದ್ದು, ಕೇವಲ ಪಾರ್ಸಲ್ ಗೆ ಅವಕಾಶ ಇರುತ್ತದೆ ಎನ್ನಲಾಗುತ್ತಿತ್ತು. ಆದರೆ ವಾರಾಂತ್ಯ ಕರ್ಪ್ಯೂ ಸಂದರ್ಭದಲ್ಲಿ ಬಾರ್ ಗಳು ಕ್ಲೋಸ್ ಎಂಬುದಾಗಿ ಅಬಕಾರಿ ಇಲಾಖೆ ತಿಳಿಸಿದೆ.

ಅಂದಹಾಗೇ ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯಾಧ್ಯಂತ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿ ಇರಲಿದೆ. ಈ ಸಂದರ್ಭದಲ್ಲಿ ತುರ್ತು ಸಂದರ್ಭದಲ್ಲಿ ಹೊರತಾಗಿ ಯಾರಿಗೂ ಅವಕಾಶ ಇರುವುದಿಲ್ಲ.