Tuesday, 17th May 2022

ಒಕ್ಕೂಟ ವ್ಯವಸ್ಥೆಯಲ್ಲೇಕೆ ಇಂತಹ ಒಡಕು?

ವಿಮರ್ಶೆ

ರಮಾನಂದ ಶರ್ಮಾ, ಬೆಂಗಳೂರು
ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ರಾಜ್ಯ ಅನುಭವಿಸುತ್ತಿಿರುವ ವಿಶೇಷ ಸ್ಥಾಾನಮಾನವನ್ನು ಅಂತ್ಯಗೊಳಿಸಿ, ಜಮ್ಮು ಕಾಶ್ಮೀರ ರಾಜ್ಯವನ್ನು ವಿಂಗಡಿಸಿ ಜಮ್ಮು, ಕಾಶ್ಮೀರ ಮತ್ತು ಲಡಾಖಗಳನ್ನು ಯೂನಿಯನ್ ಟೆರಿಟರಿ ಅಥವಾ ಕೇಂದ್ರಾಾಡಳಿತ ಪ್ರದೇಶಗಳೆಂದು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದಾಗ, ಹಿರಿಯ ಪತ್ರಕರ್ತರೊಬ್ಬರು ‘ಇದರಲ್ಲೇನಿದೆ ವಿಶೇಷ? ಈ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಆಳ್ವಿಿಕೆ ಇರುವ ಎಲ್ಲಾ ರಾಜ್ಯಗಳೂ ಕೇಂದ್ರಾಾಡಳಿತ ಪ್ರದೇಶಗಳೇ’ ಎಂದು ಪ್ರತಿಕ್ರಿಿಯಿಸಿದ್ದರು. ಮೇಲುನೋಟಕ್ಕೆೆ ಈ ಪ್ರತಿಕ್ರಿಿಯೆ ಹಾಸ್ಯ ಚಟಾಕಿ ಎಂದು ಎನಿಸಬಹುದು. ಆದರೆ ಕಾಂಗ್ರೆೆಸ್ ಪಕ್ಷ ಹೈಕಮಾಂಡ್ ಹೆಸರಿನಲ್ಲಿ, ಭಾರತೀಯ ಜನತಾ ಪಕ್ಷ ವರಿಷ್ಠರ ಹೆಸರಿನಲ್ಲಿ ಮತ್ತು ಕಮ್ಯುನಿಸ್‌ಟ್‌ ಪಕ್ಷ ಪಾಲಿಟ್ ಬ್ಯೂರೋ ಹೆಸರಿನಲ್ಲಿ ತಮ್ಮ ರಾಜ್ಯ ಸರಕಾರಗಳನ್ನು ನಿಯಂತ್ರಿಿಸುವುದನ್ನು ನೋಡಿದಾಗ ಈ ಪತ್ರಕರ್ತರ ಪ್ರತಿಕ್ರಿಿಯೆಯ ಹಿಂದೆ ಅಡಗಿರುವ ಸತ್ಯದ ಅರಿವು ಆಗದಿರದು.

ಸಂವಿಧಾನವು ಯಾವ ಯಾವ ವಿಷಯಗಳನ್ನು ಕೇಂದ್ರ ಸರಕಾರ ನೋಡಿಕೊಳ್ಳಬೇಕು, ಯಾವ ವಿಷಯಗಳನ್ನು ರಾಜ್ಯ ಸರಕಾರಗಳು ನೋಡಿಕೊಳ್ಳಬೇಕು ಮತ್ತು ಯಾವ ವಿಷಯಗಳನ್ನು ಕೇಂದ್ರ ಮತ್ತು ರಾಜ್ಯಗಳೆರಡೂ ಜೊತೆಯಾಗಿ ನೋಡಿಕೊಳ್ಳಬಹುದು ಎನ್ನುವುದನ್ನು ನಿಖರವಾಗಿ ಹೇಳಿದೆ. ಹಣಕಾಸು, ವಿದೇಶಾಂಗ ಮತ್ತು ರಕ್ಷಣೆ ವಿಚಾರಗಳು ಕೇಂದ್ರ ಸರಕಾರದ ಸುಪರ್ದಿಯಲ್ಲಿ ಇದ್ದು, ಉಳಿದ ಬಹುತೇಕ ವಿಷಯಗಳನ್ನು ರಾಜ್ಯಸರಕಾರಗಳು ನೋಡಿಕೊಳ್ಳುತ್ತವೆ. ಶಿಕ್ಷಣದಂಥ ಕೆಲವು ವಿಷಯಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡರ ಜಂಟಿ ಸುಪರ್ದಿಯಲ್ಲಿರುತ್ತವೆ. ಇದು ನಮ್ಮ ಒಕ್ಕೂಟ ವ್ಯವಸ್ಥೆೆಯ *(್ಛಛಿಛ್ಟಿ್ಝಿ ಠ್ಟ್ಠ್ಚಿಿಠ್ಠ್ಟಿಿಛಿ) ವಿಶೇಷತೆ. ನಮ್ಮ ಸಂವಿಧಾನ ಕರ್ತೃಗಳು ಸಾಕಷ್ಟು ಅಭ್ಯಸಿಸಿ ದೇಶದ ಸುಲಲಿತ ಆಡಳಿತಕ್ಕೆೆ ಇಂಥದೊಂದು ನೀಲ ನಕ್ಷೆಯನ್ನು ನೀಡಿದ್ದಾರೆ.

ಆದರೆ ಕಳೆದ ಏಳು ದಶಕಗಳಲ್ಲಿ ಈ ವ್ಯವಸ್ಥೆೆಯು ಸಂವಿಧಾನ ರಚಿಸಿದವರು ನೀರೀಕ್ಷಿಸಿದಷ್ಟು ಸುಗಮವಾಗಿ ಸಾಗುತ್ತಿಿಲ್ಲ ಎನ್ನುವ ಅಭಿಪ್ರಾಾಯ ವ್ಯಕ್ತವಾಗುತ್ತಿಿದೆ. ಕೇಂದ್ರ ಸರಕಾರವು ದಿನದಿಂದ ದಿನಕ್ಕೆೆ ರಾಜ್ಯಗಳ ಮೇಲೆ ತನ್ನ ಹತೋಟಿಯನ್ನು ಬಿಗಿಗೊಳಿಸುತ್ತಿಿದೆ ಎಂದು ರಾಜ್ಯ ಸರಕಾರಗಳು ಆರೋಪವನ್ನು ವ್ಯಕ್ತ ಮಾಡುತ್ತಿಿವೆ ಮತ್ತು ಆಕ್ರೋೋಶವನ್ನು ಹೊರಹಾಕುತ್ತಿಿವೆ. ತನ್ನ ಸುಪರ್ದಿಯಲ್ಲಿರುವ ವಿಷಯಗಳಲ್ಲಿ ಕೇಂದ್ರ ಕೈ ಆಡಿಸುವುದು, ನಿಯಂತ್ರಿಿಸುವುದಂತೂ ಸರಿಯೇ ಸರಿ.

‘ರಾಜ್ಯದಲ್ಲಿರುವ ಕೇಂದ್ರ ಸರಕಾರದ ಕಚೇರಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಮೈಲು ಕಲ್ಲುಗಳ ಮೇಲೆ, ರೈಲು ನಿಲ್ದಾಾಣದಲ್ಲಿ ಇಟ್ಟಿಿರುವ ಕಸದ ಬುಟ್ಟಿಿಯವರೆಗೆ…ಯಾವ ಭಾಷೆಯನ್ನು ಬಳಸಬೇಕು ಎನ್ನುವವರೆಗೆ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತದೆ’ ಎಂದು ತಮಿಳುನಾಡು ಆರೋಪಿಸಿದರೆ ‘ ಕೇಂದ್ರ ಸರಕಾರದ ನೀತಿಯಿಂದಾಗಿ ಈ ದಿನಗಳಲ್ಲಿ ಸರಕಾರಿ ಸ್ವಾಾಮ್ಯದ ಬ್ಯಾಾಂಕುಗಳಲ್ಲಿ ಕನ್ನಡ ಮತ್ತು ಕನ್ನಡಿಗರು ಮಾಯವಾಗುತ್ತಿಿದ್ದು ಬ್ಯಾಾಂಕುಗಳಲ್ಲಿ ವ್ಯವಹಾರ ನಡೆಸುವುದೇ ಕಷ್ಟವಾಗಿದೆ’ ಎಂದು ಕನ್ನಡಿಗರು ಬೇಸರಿಸಿಕೊಳ್ಳುತ್ತಾಾರೆ.

ಕನ್ನಡ ಬಿಟ್ಟು ಬೇರೆ ಭಾಷಾ ಬರದ ಮಹಿಳಾ ಗ್ರಾಾಹಕರು ಕನ್ನಡ ಬಾರದ ಮ್ಯಾಾನೇಜರ್ ಮತ್ತು ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವರದಿಗಳು ಇತ್ತೀಚೆಗೆ ದೃಶ್ಯ ಮತ್ತು ಮುದ್ರಣ ಮಾದ್ಯಮಗಳೆರಡರಲ್ಲೂ ವೈರಲ್ ಆಗಿತ್ತು. ಇದು ತಮ್ಮ ವ್ಯವಹಾರದ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ ಎಂದು ಕೆಲವು ಬ್ಯಾಾಂಕ್ ಮ್ಯಾಾನೇಜರ್ ಗಳು ಪರೋಕ್ಷವಾಗಿ ಹೇಳುತ್ತಿಿದ್ದಾರೆ. ಕೆಲವು ಗ್ರಾಾಹಕರು ಮೌನವಾಗಿ ತಮ್ಮ ಖಾತೆ/ವ್ಯವಹಾರವನ್ನು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವ ಸಹಕಾರಿ ಮತ್ತು ನಗರ ಬ್ಯಾಾಂಕುಗಳಿಗೆ ಬದಲಾಯಿಸುತ್ತಿಿದ್ದಾರಂತೆ.

ರಾಜ್ಯ ಸರಕಾರ ಮತ್ತು ಜನತೆ ಎಷ್ಟೇ ಪ್ರಯತ್ನಿಿಸಿದರೂ ಇಂಥ ಒಂದು ಸಣ್ಣ ವಿಷಯದಲ್ಲಿಯೂ ಯಾವುದೇ ಸುಧಾರಣೆಯಿಲ್ಲ. ರಾಜ್ಯ ನಿಸ್ಸಹಾಯಕವಾಗುತ್ತಿಿದ್ದು, ಒಕ್ಕೂಟ ವ್ಯವಸ್ಥೆೆ ಯ ಮೂಲವನ್ನೇ ಪ್ರಶ್ನಿಿಸುತ್ತಿಿದೆ. ಕೇಂದ್ರ ಸರಕಾರ ‘ಕೊರತೆ ಬಜೆಟ್’ ಎದುರಿಸಬೇಕಾದ ಪ್ರಮೇಯ ಬಂದರೆ ರಿಸರ್ವ್ ಬ್ಯಾಾಂಕ್ ನೆರವಿಗೆ ಬರುತ್ತದೆ. ಆದರೆ ಈ ಭಾಗ್ಯ ರಾಜ್ಯಗಳಿಗೆ ಇಲ್ಲ ಎಂದು ಒಂದು ರಾಜ್ಯದ ಹಣಕಾಸು ಮಂತ್ರಿಿಗಳು ಅಲವತ್ತುಕೊಂಡಿದ್ದರು. ಇದರ ಸತ್ಯಾಾಸತ್ಯತೆ ಎಷ್ಟು ಎಂಬುದು ಬೇರೆ ಮಾತು. ಆದರೆ ಪ್ರತಿಯೊಂದಕ್ಕೂ, ತಮ್ಮ ಅಧಿಕಾರ ವ್ಯಾಾಪ್ತಿಿಯ ಕ್ಷೇತ್ರದ ವಿಚಾರದಲ್ಲೂ ರಾಜ್ಯ ಸರಕಾರಗಳು ಪದೇಪದೆ ಕೇಂದ್ರದ ಮರ್ಜಿ ಕಾಯಬೇಕಾದ್ದು ಎಷ್ಟು ಸರಿ ಎನ್ನುವ ಚರ್ಚೆ ಆಗಾಗ ಮೇಲ್ಮೈಗೆ ಬರುತ್ತದೆ. ತಿಂಗಳು ಕಳೆದರೂ ಕರ್ನಾಟಕಕ್ಕೆೆ ಇನ್ನೂ ಚಿಕ್ಕಾಾಸು ನೆರೆಪರಿಹಾರ ಕೇಂದ್ರದಿಂದ ಬರಲಿಲ್ಲ .

ಈ ನಿರ್ಲಕ್ಷ್ಯ, ಮೇಲಿನ ಚರ್ಚೆಗೆ ಇನ್ನೊೊಮ್ಮೆೆ ಚಾಲನೆ ನೀಡುವ ಸಾಧ್ಯತೆಯನ್ನು ತಳ್ಳಿಿಹಾಕಲಾಗದು. ಹಾಗೆಯೇ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳನ್ನು ಒಂದೇ ಸಮಾನ ನೋಡದಿರುವುದು ಕೂಡಾ ಚರ್ಚಿತವಾಗುತ್ತಿಿದೆ. ಅಧ್ಯಕ್ಷೀಯ ಪದ್ಧತಿಯ ಆಡಳಿತ ವ್ಯವಸ್ಥೆೆಯ ಸಾಧ್ಯಾಾಸಾಧ್ಯತೆಗಳ ಬಗೆಗೆ ಅರುಣ ಶೌರಿ, ರಾಂ ಜೇಠ್‌ಮಲಾನಿ, ಪಾಲ್ಕಿಿವಾಲಾ, ರಾಮಕೃಷ್ಣ ಹೆಗಡೆ ಮತ್ತು ಪೀಲೂ ಮೋದಿಯವರು ಚರ್ಚೆಯನ್ನು ಹುಟ್ಟುಹಾಕಿದಾಗ ಒಕ್ಕೂಟ ವ್ಯವಸ್ಥೆೆಯ ನ್ಯೂನತೆಗಳ ಬಗೆಗೆಗೂ ವಿಸ್ತೃತ ಮಂಥನ ನಡೆದಿತ್ತು. ಕಾರಣಾಂತರದಿಂದ ಆ ಚರ್ಚೆ ಮುಂದುವರಿಯಲಿಲ್ಲ.

ಇದೀಗ ರಾಜಕೀಯ ಪಕ್ಷಗಳ ಕಾರ್ಯ ವೈಖರಿಯಲ್ಲೂ ಒಕ್ಕೂಟ ವ್ಯವಸ್ಥೆೆಯ ಕರಾಳ ಛಾಯೆ ಆವರಿಸಿದೆ. ದೇಶದ ಪ್ರಗತಿಯ ಹಾದಿಯಲ್ಲಿ ಹೈಕಮಾಂಡ್ ಬಂಡೆಗಲ್ಲಾಗಿದೆ ಎನ್ನುವ ಅಭಿಪ್ರಾಾಯ ವ್ಯಾಾಪಕವಾಗಿ ಹರಡುತ್ತಿಿದೆ. ಖ್ಯಾಾತ ಶಿಕ್ಷಣ ತಜ್ಞ, ಆಗಿನ ಕೇಂದ್ರ ಮಂತ್ರಿಿ ಮತ್ತು ಹೆಸರಾಂತ ನ್ಯಾಾಯವಾದಿ ಎಂ.ಸಿ.ಛಾಗ್ಲಾಾ ಅವರು ತಮ್ಮ *್ಕಟಛಿ ಐ್ಞ ಈಛ್ಚಿಿಛಿಞಚಿಛ್ಟಿಿ ಪುಸ್ತಕದಲ್ಲಿ, ‘ಇಂದಿರಾ ಗಾಂಧಿಯವರು ಸೂಚಿಸಿದ ವ್ಯಕ್ತಿಿಯನ್ನು ನಾವು ನಮ್ಮ ಲೀಡರ್ ಎಂದು ಸರ್ವಾನುಮತದಿಂದ ಆರಿಸುತ್ತೇವೆ ಎಂದು ಪಂಚಾಯತದಿಂದ ಪಾರ್ಲಿಮೆಂಟ್‌ವರೆಗೆ ನಮ್ಮ ರಾಜಕಾರಣಿಗಳು ಸರ್ವಾನುಮತದ ನಿರ್ಣಯ ತೆಗೆದುಕೊಳ್ಳುವಾಗ ನಮ್ಮ ಪ್ರಜಾಪ್ರಭುತ್ವ ಗಹಗಹಿಸಿ ನಗುತ್ತದೆ’ ಎಂದು ವ್ಯಂಗ್ಯವಾಡಿದ್ದರು. ಹೈಕಮಾಂಡ್ ಸಂಸ್ಕೃತಿ ತೆಗೆದುಕೊಳ್ಳುವ ತಿರುವನ್ನು ಅವರು ಆ ದಿನಗಳಲ್ಲೇ ಊಹಿಸಿದ್ದರು.

‘ನಮಗೆ ಹೈಕಮಾಂಡೇ ಸರ್ವಸ್ವ, ಅವರೇ ನಮಗೆ ದೇವರು, ನಾವು ಹೈಕಮಾಂಡ್ ನ ಆಜ್ಞಾಧಾರಕರು, ಹೈಕಮಾಂಡ್‌ನ ಶಿಸ್ತಿಿನ ಸೇವಕರು, ಸಿಪಾಯಿಗಳು, ಹೈಕಮಾಂಡ್ ಹೇಳಿದರೆ ಯಾವುದೇ ಕೆಲಸವನ್ನು ಮಾಡುತ್ತೇವೆ, ಕೆಲಸವನ್ನು ನಿಭಾಯಿಸುತ್ತೇವೆ, ನಮಗೆ ಅಧಿಕಾರದ ಆಶೆ ಇಲ್ಲ…ಆದರೆ, ಹೈಕಮಾಂಡ್ ಯಾವುದೇ ಜವಾಬ್ದಾಾರಿ (ಅಧಿಕಾರ ಎಂದು ಹೇಳುವುದಿಲ್ಲ) ನೀಡಿದರೆ ನಿರ್ವಂಚನೆಯಿಂದ ನಿಭಾಯಿಸುತ್ತೇವೆ… ಹೈಕಮಾಂಡ ಹೇಳಿದರೆ ಕಚೇರಿಯ ಕಸವನ್ನು ಗುಡಿಸುತ್ತೇವೆ, ಯಾರಿಗಾದರೂ ಗುಂಡಿಕ್ಕುತ್ತೇವೆ’ ( ಒಬ್ಬರು ಇಂಥ ಹೇಳಿಕೆ ನೀಡಿ ವಿವಾದಕ್ಕೆೆ ಸಿಲುಕಿದ್ದರು) ಮುಂತಾದ ಹೈಕಮಾಂಡ್ ಸ್ತುತಿಯ ಹೇಳಿಕೆಗಳು ಮಾಧ್ಯಮಗಳಲ್ಲಿ ದಿನವೂ ಬರುತ್ತಿಿದೆ. ಇವನ್ನು ಓದಿದ ಪ್ರಜ್ಞಾವಂತ ಜನರೇ ಏಕೆ, ರಾಜಕೀಯದ ಎಬಿಸಿಡಿ ತಿಳಿಯದವರೂ ಅಧಿಕಾರ ದಾಹ, ವ್ಯಕ್ತಿಿಪೂಜೆ, ಮತ್ತು ಕೇಂದ್ರಿಿಕೃತ ರಾಜಕಾರಣ ಈ ಮಟ್ಟಕ್ಕೆೆ ಇಳಿಯಿತೇ ಎಂದು ವಿಷಾದಿಸುತ್ತಾಾರೆ.

ರಾಷ್ಟ್ರೀಯ ಪಕ್ಷಗಳ ರಾಜ್ಯ ಘಟಕಗಳಲ್ಲಿಯೂ ಇದೇ ದುರವಸ್ಥೆೆ. ಯಾವುದೇ ಅಧಿಕಾರ ಮತ್ತು ಸ್ವಾಾತಂತ್ರ್ಯವನ್ನು ಅವು ಅನುಭವಿಸುವುದಿಲ್ಲ. ಜನಪ್ರಿಿಯ ತಮಿಳು ನಟ, ರಾಜಕಾರಣಿ , ನಾಟಕಕಾರ, ವಕೀಲ ಮತ್ತು ‘ತುಘಲಕ್’ ತಮಿಳು ಪತ್ರಿಿಕೆಯ ಸಂಪಾದಕ ಚೋ ರಾಮಸ್ವಾಾಮಿ, ರಾಷ್ಟ್ರೀಯ ಪಕ್ಷಗಳನ್ನು ಹೈಕಮಾಂಡ್ ಪಕ್ಷಗಳೆಂದು ಲೇವಡಿ ಮಾಡುತ್ತಿಿದ್ದರು…ಈ ಪಕ್ಷಗಳಲ್ಲಿ ಒಂದು ಎಲೆ ಅಲ್ಲಾಡುವುದಿದ್ದರೂ ಹೈಕಮಾಂಡ್ ಅನುಮತಿ ಬೇಕು ಎಂದು ಅವುಗಳ ಆಂತರಿಕ ದುರಾಡಳಿತ ಮತ್ತು ನಿಯಂತ್ರಣದ ಬಗೆಗೆ ತಮಾಷೆ ಮಾಡುತ್ತಿಿದ್ದರು. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆೆ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆೆ, ಮಂತ್ರಿಿಗಳ ಆಯ್ಕೆೆ, ಖಾತೆಗಳ ಹಂಚಿಕೆ, ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆೆ, ಹೀಗೆ ಪ್ರತಿಯೊಂದನ್ನೂ ಹೈಕಮಾಂಡ್ ನಿರ್ಣಯಿಸುವುದಾದರೆ ರಾಜ್ಯ ಘಟಕಗಳು ಇರುವುದಾದರೂ ಯಾಕೆ?