Monday, 26th October 2020

ನಿರುದ್ಯೋಗ ಪದವೀಧರರಿಗೆ ಸದಾ ಸ್ಪಂದಿಸುವೆ: ಬಸವರಾಜ ಗುರಿಕಾರ

ಗದಗ : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಬಸವರಾಜ ಗುರಿಕಾರ ರವರ ಹುಟ್ಟೂರು ಗದಗ ಜಿಲ್ಲೆಯ ರೋಣ ತಾಲೂಕು ಹೊಸಹಳ್ಳಿ ಹಾಗೂ ರೋಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಈ ಸಂಧರ್ಭದಲ್ಲಿ ಪದವೀಧರರು ತಮ್ಮ ಅಳಲನ್ನು ತೊಡಿಕೊಂಡರು, ಈ ಸಂಧರ್ಭದಲ್ಲಿ ಬಸವರಾಜ ಗುರಿಕಾರರವರು ನಿರುದ್ಯೋಗ ಪದವೀಧರರಿಗೆ ಸದಾ ಕಾಲ ಸ್ಪಂದಿಸುವೆ, ಹಾಗೂ ಪದವೀಧರರ ಸಮಸ್ಯೆಗಳ ಬಗ್ಗೆ ಸದಾ ಹೋರಾಟ ಮಾಡುವೆ ಎಂದರು. ಈ ಸಂಧರ್ಭದಲ್ಲಿ ಬಿ.ಎಸ್ ರಡ್ಡೇರ, ಸಂಗಪ್ಪ ಮೆನಸಿನಕಾಯಿ, ಜಯಪ್ಪ ಅಬ್ಬಿಗೇರಿ, ಶೇಕರಪ್ಪ ಅಬ್ಬಿಗೇರಿ, ಮೆಹಬೂಬ ಸಾಬ್ ಹೊಸಳ್ಳಿ, ಮಲ್ಲಯ್ಯ ಸ್ಥಾವರಮಠ, ಅಶೋಕ ಅಂಗಡಿ, ಮಲ್ಲಪ್ಪ ಮಾದರ, ಮರತುಜ ಸಾಬ್ ನದಾಫ, ಡಿ.ಬಿ ಕಂಬಳಿ ಇತರರು ಇದ್ದರು.

ಇತ್ತ ನವಲಗುಂದ ಹಾಗೂ ನರಗುಂದ ನ ವಿವಿಧ ಗ್ರಾಮಗಳಲ್ಲಿ ಬಸವರಾಜ ಗುರಿಕಾರ ಇವರ ಬೆಂಬಲಿಗರು ಪ್ರಚಾರ ಕಾರ್ಯ ವನ್ನು ಮಾಡಿದರು. ಗಣೇಶ  ಜೀರಗೋಡ , ಸೋಮು ಹಂಚಿನಮನಿ, ಯಲ್ಲಪ್ಪ  ಜೀರಗೋಡ, ಕಲ್ಮೇಶ  ಮುಗದ , ಫಕ್ಕೀರ  ಮುಗದ, ಆಕಾಶ  ಜೀರಗೋಡ, ಪ್ರಕಾಶ ಮುಗದ, ಮಂಜುನಾಥ ಹಂಚಿನಮನಿ ಇವರು  ಅಳ್ನಾವರ ಪಟ್ಟಣದಲ್ಲಿ ಪ್ರಚಾರ  ಮಾಡಿದರು.

ರಮೇಶ ಕುಂಬಾರ ಹಾಗೂ ಸುರೇಶ್ ಕುಂಬಾರ ರವರ ತಂಡವು ಶಿರಗುಪ್ಪಿ, ನಾಹಗರಹಳ್ಳಿ ಹಾಗೂ ಇಂಗಳಹಳ್ಳಿ ಗ್ರಾಮಗಳಲ್ಲಿ ಪ್ರಚಾರ ಮಾಡಲಾಯಿತು. ಧಾರವಾಡದ ಶಿವಳ್ಳಿ, ಚಂದನಮಟ್ಟಿ, ಕನಕೂರ, ಕೌಲಗೇರಿ, ಹೆಬ್ಬಳ್ಳಿ, ಚಂದನಮಟ್ಟಿ ಮಾದನ ಭಾವಿ, ಯರಿಕೊಪ್ಪ ಗ್ರಾಮಗಳಲ್ಲಿ ಆನಂದ ಹಾರಿಕೊಪ್ಪ ರವರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು.

ಎಸ್.ಬಿ ಪೂಜಾರ ರವರ ತಂಡವು ಹುಬ್ಬಳ್ಳಿಯ ವಿವಿಧ ಕಾಲೇಜುಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿತು. ಕುಂದಗೋಳ ತಾಲೂಕಿನ ವಿವಿದ ಗ್ರಾಮಗಳಲ್ಲಿ ನಾಗರಾಜ ಉಣಕಲ್, ರಾಘು ನರಗುಂದ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು.

ಹಳಿಯಾಳ ಮತ್ತು ದಾಂಡೇಲಿಯಲ್ಲಿ ರವಿಕುಮಾರ ಜಮಕಂಡಿ, ಸುಬಾನಿ ಹಳಿಯಾಳ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿದರು. ಶಂಕರ ಸಾವೂರ, ಶಿವರಾಜ ಕರಿಗಾರ, ಚಂದ್ರು ಪೋಟೆರ ಇವರ ತಂಡವು ಹಾವೇರಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯವನ್ನು ಮಾಡಿದರು.

Leave a Reply

Your email address will not be published. Required fields are marked *