Friday, 27th May 2022

ಪಕ್ಷ ಯಾವುದೇ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ: ವಿಜಯೇಂದ್ರ

ತುಮಕೂರು: ಪಕ್ಷ ಯಾವುದೇ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ನಾಯಕರ ಅಪೇಕ್ಷೆ ಏನಿದೆ, ಸಮಯ, ಸಂದರ್ಭ ನೋಡ್ಕೊಂಡು ನಿರ್ಧಾರ ಮಾಡ್ತಾರೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರು ನಿಭಾಯಿಸ್ತೀನಿ ಎಂದರು.

ಪಕ್ಷ ಹೇಳಿದ ಕಡೆ ಸ್ಪರ್ಧಿಸುತ್ತೇನೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತೆ. ಶಿರಾ ಮತ್ತು ಕೆ. ಆರ್. ಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ.ಕಾರ್ಯಕರ್ತರ ಜತೆ ಕೆಲಸ ಮಾಡಿದ್ದಕ್ಕೆ ಸಂತೋಷ ಇದೆ ಎಂದರು.

ಸ್ವಾಮೀಜಿ ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಮಾಡುವ ಪ್ರಮೇಯ ಉದ್ಭವ ಆಗಿಲ್ಲ. ಅನವಶ್ಯಕ ಟೀಕೆಗೆ ಮಹತ್ವ ನೀಡ ಬಾರದೆಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರು ಮೂರ್ಖರಿದ್ದಾರೆ.50ರಿಂದ 60 ವರ್ಷಗಳ ಕಾಲ ಅಧಿಕಾರ ದಲ್ಲಿದ್ದ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆಯಲ್ಲಿ ಇಲ್ಲ. ಹೀಗಾಗಿ ಬಿಜೆಪಿ ಸರಕಾದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡ್ತಾರೆ.

ಚುನಾವಣೆ ಯಾವಾಗ ಬರುತ್ತೆ, ಮತ್ತೆ ಯಾವಾಗ ಅಧಿಕಾರಕ್ಕೆ ಬರ್ತೀವೋ ಅಂತ ಆತುರದಲ್ಲಿ ಹಗಲುಗನಸು ಕಾಣ್ತಿದ್ದಾರೆ. ಅವರ ಕನಸು ನನಸಾಗಲ್ಲ, ಬಿಜೆಪಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.