Tuesday, 31st January 2023

ಯುವಕರಿಗೆ ವೃತ್ತಿ ಮಾರ್ಗದರ್ಶನ ಅಗತ್ಯ : ಡಾ ರೋಹಿಣಿ

ಪ್ರಗತಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸ

ಮಾನವಿ : ‘ವಿದ್ಯಾವಂತ ಯುವಕ, ಯುವತಿಯರಿಗೆ ಭವಿಷ್ಯದ ಸ್ವಾವಲಂಬಿ ಜೀವನಕ್ಕಾಗಿ ಸರಿಯಾದ ವೃತ್ತಿ ಮಾರ್ಗದರ್ಶನ ಅಗತ್ಯ’ ಎಂದು ಖ್ಯಾತ ವೈದ್ಯೆ ಡಾ.ರೋಹಿಣಿ ಮಾನ್ವಿಕರ್ ಹೇಳಿದರು.

ಶುಕ್ರವಾರ ಪಟ್ಟಣದ ಪ್ರಗತಿ ಪಿಯು ಕಾಲೇಜಿನಲ್ಲಿ ಯುನ್‌ಡಿಪಿ-ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ‘ನರ್ಸಿಂಗ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಅವಕಾಶಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಪ್ರಸ್ತುತ ದಿನಮಾನಗಳಲ್ಲಿ ಖಾಸಗಿ ವಲಯದಲ್ಲಿ ವಿಪುಲ ಉದ್ಯೋಗವಕಾಶಗಳು ಇವೆ. ಕೌಶಲ ಆಧಾರಿತ ಶಿಕ್ಷಣ ಪಡೆದವರಿಗೆ ಹೆಚ್ಚು ಬೇಡಿಕೆ ಇದೆ. ಎಲ್ಲೆಡೆ ವೃತ್ತಿಪರ ಶಿಕ್ಷಣಕ್ಕೆ ಮಹತ್ವ ಉಂಟಾಗಿದೆ. ವೈದ್ಯಕೀಯ ಕ್ಷೇತ್ರದ ನರ್ಸಿಂಗ್, ಆರೋಗ್ಯ ಶಿಕ್ಷಣ ಸೇರಿದಂತೆ ಇತರ ಕೋರ್ಸ್ಗಳನ್ನು ಅಧ್ಯಯನ ಮಾಡಿದರೆ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಪಡೆದು ವ್ಯಾಸಂಗ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆಯ ಜಿಲ್ಲಾ ಸಮುದಾಯ ಸಂಘಟಕಿ ಗಿರಿಜಾ ರಾಮ್ ಅವರು ಯೋಜನೆಯ ಧ್ಯೇಯೋ ದ್ದೇಶಗಳ ಕುರಿತು ವಿವರಿಸಿದರು.

ಬಸವರಡ್ಡಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಪ್ರಾಜೆಕ್ಟ್ ಕೋಡ್ ಉನ್ನತಿ ಯೋಜನೆಯ ತಾಲ್ಲೂಕು ಸಂಘಟಕ ವೆಂಕಟೇಶ ಸಾಗರ್, ಕಾಲೇಜಿನ ಪ್ರಾಂಶುಪಾಲ ಬಸವರಾಜ ಭೋಗಾವತಿ, ಉಪ ಪ್ರಾಂಶುಪಾಲೆ ಸುಮಾ ಟಿ.ಹೊಸಮನಿ, ಉಪನ್ಯಾಸಕರಾದ ಜಯಲಕ್ಷ್ಮೀ ಪಾಟೀಲ್ ಚೀಕಲಪರ್ವಿ, ಫಿರೋಜ್ ರಾಜ್, ಸರೋಜ, ಮಲ್ಲಮ್ಮ ಪೋತ್ನಾಳ, ನಾಗರಾಜ ಚಿಮ್ಲಾಪೂರು, ರವಿಚಂದ್ರ ಇದ್ದರು.

error: Content is protected !!