Tuesday, 29th September 2020

ಏಕ ಕಾಲದಲ್ಲಿ ಎರಡೂ ಕೈಗಳಿಂದ ಬರೆದು ವಿಶ್ವದಾಖಲೆ

ಮಂಗಳೂರು: ಏಕ ಕಾಲದಲ್ಲಿ ಎರಡೂ ಕೈಗಳಿಂದ ಆಂಗ್ಲ ಪದಗಳನ್ನು ನಿಮಿಷವೊಂದಕ್ಕೆೆ 45 ಪದಗಳಂತೆ ಬರೆದು ಸ್ವರೂಪ ಅಧ್ಯಯನ ಕೇಂದ್ರದ ಪ್ರತಿಭೆ ಆದಿ ಸ್ವರೂಪ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ಉತ್ತರ ಪ್ರದೇಶದ ಬರೇಲಿಯಾ ಟಾಟಾ ಫೌಂಡೇಶನ್ ಸಂಸ್ಥೆ ಈಕೆಯ ಈ ಸಾಧನೆಯನ್ನು ದಾಖಲಿಸಿ ಎಕ್ಸ್’ಕ್ಲೂಸಿವ್ ವಲ್ಡರ್ ರೆಕಾರ್ಡ್ ದಾಖಲೆ ಎಂದು ಘೋಷಿಸಿರುವುದಾಗಿ ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್ ಹಾಗೂ ಸುಮಾಡ್ಕರ್ ದಂಪತಿಯ ಪುತ್ರಿ ಆದಿ ಸ್ವರೂಪ ಬಹುಮುಖ ಪ್ರತಿಭೆಯನ್ನು ಮೈಗೂಡಿಸಿಕೊಂಡಿದ್ದು ಇದೀಗ ಎರಡೂ ಕೈಗಳಲ್ಲಿ ಅತೀ ವೇಗವಾಗಿ ಹತ್ತು ಶೈಲಿಯಲ್ಲಿ ಬರೆಯುವ ಸಾಮರ್ಥ್ಯ ಪಡೆದಿದ್ದಾಳೆ ಎಂದು ಗೋಪಾಡ್ಕರ್ ತಿಳಿಸಿದ್ದಾರೆ.

ಸ್ವಯಂ ಕಲಿಕೆಯ ಮೂಲಕ ತನ್ನ ಒಂದೂವರೆ ವರ್ಷದಲ್ಲಿಯೇ ಓದಲು ಮತ್ತು ಎರಡೂವರೆ ವರ್ಷದಲ್ಲಿ ಸುಮಾರು 30 ಪುಟ ಬರೆಯುವ ಸಾಮರ್ಥ್ಯ ಪಡೆದುಕೊಂಡಿದ್ದು ಇದೀಗ ನೇರವಾಗಿ ಹತ್ತನೆಯ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ ಎರಡೂ ಕೈಗಳಿಂದ ಬರೆಯುವ ಸಿದ್ಧತೆಯಲ್ಲಿದ್ದಾಳೆ. ಗಿಟಾರ್, ಕೀ ಬೋರ್ಡ್, ಹಿಂದೂಸ್ಥಾನಿ ಸಂಗೀತವನ್ನು ಅಭ್ಯಸಿಸುತ್ತಿರುವ ಆದಿ ಸ್ವರೂಪ, 7 ವರ್ಷಗಳಲ್ಲಿ 50ರಷ್ಟು ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ. ಆಕೆಯ ಹಾಡಿನ ಹಲವು ಸಿಡಿಗಳು ರಚನೆಯಾಗಿವೆ. ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ರಾಜ್ಯಾದ್ಯಂತ ಹಮ್ಮಿಕೊಂಡ ಶಿಕ್ಷಣ ಜಾಥದಲ್ಲಿ 1600 ಕಡೆಗಳಲ್ಲಿ ಆದಿ ಸ್ವರೂಪ ತನ್ನ ಪ್ರತಿಭಾ ಪ್ರದರ್ಶನವನ್ನು ತನ್ನ ಎರಡೂವರೆ ವರ್ಷದಲ್ಲಿಯೇ ನೀಡಿದ್ದಾಳೆ.

ರೂಬಿಕ್ ಕ್ಯೂಬ್ ಅನ್ನು 45 ಸೆಕೆಂಡ್‌ಗಳಲ್ಲಿ ಜೋಡಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ ಪ್ರಥ್ವೀಶ್ ಬ್ರಹ್ಮಾವರ ಇವರ ತಂಡದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾಳೆ ಎಂದು ಗೋಪಾಡ್ಕರ್ ತಿಳಿಸಿದ್ದಾರೆ. ಈ ಸಾಧನೆಯ ಬಗ್ಗೆೆ ಆದಿ ಸ್ವರೂಪಳ ತಂದೆ
-ತಾಯಿ ಹಾಗೂ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್, ಸುಮಾಡ್ಕರ್ ಮಾತನಾಡಿ, ಇದು ದಾಖಲೆಗಾಗಿ ದಾಖಲೆ ಅಲ್ಲ.

ಪ್ರತಿಯೊಬ್ಬ ಮಗುವೂ ವಿಶೇಷ ಪ್ರತಿಭೆಯನ್ನು ಹೊಂದಿರುತ್ತದೆ. ದಿನದ 16 ಗಂಟೆಯನ್ನು ಸದ್ಬಳಕೆ ಮಾಡಿಕೊಂಡರೆ ಶಾಲಾ ಪಠ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕಳೊಂದಿಗೆ ಒಂದು ವಿಷಯದಲ್ಲಾದರೂ ಸಾಧಕರಾಗಬಹುದು. ಈ ರೀತಿಯ ಕಲಿಕೆ ಶಿಕ್ಷಣ ಕ್ಷೇತ್ರದ ಕಲಿಕೆಗೆ ಕೊಡುಗೆ ಮತ್ತು ಹೊಸ ಸಾಧ್ಯತೆಗಳನ್ನು ತೆರದುಕೊಳ್ಳಲು ಸಹಾಯವಾಗುತ್ತದೆ ಎಂದರು.

Leave a Reply

Your email address will not be published. Required fields are marked *