* ಸಚಿವ ವಿ. ಸುನೀಲ್ಕುಮಾರ್ ಭರವಸೆ
ಬೆಂಗಳೂರು: ಯಕ್ಷಗಾನ ಸಮ್ಮೇಳನ ಹಾಗೂ ಸಮಗ್ರ ಯಕ್ಷಗಾನ ವಿಶ್ವಕೋಶಕ್ಕೆ ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ಕುಮಾರ್ ಭರವಸೆ ನೀಡಿದ್ದಾರೆ.
ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಹಾಗೂ ಸಮಗ್ರ ಯಕ್ಷಗಾನ ವಿಶ್ವಕೋಶಕ್ಕೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ನೀಡುವಂತೆ ಕೋರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ಮಣಕಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಭರವಸೆ ನೀಡಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಂತೆ ಯಕ್ಷಗಾನದ ಸಮ್ಮೇಳ ನವನ್ನೂ ಆಯೋಜಿಸಬೇಕು. ಇದರಿಂದ ಯಕ್ಷ ಗಾನದ ಪ್ರಸಿದ್ಧಿ ಹಾಗೂ ವಿಸ್ತರಣೆ ಸಾಧ್ಯವಾಗುತ್ತದೆ. ಅಕಾ ಡೆಮಿಯ ಈ ಪ್ರಸ್ತಾವನೆ ಹಾಗೂ ಯಕ್ಷಗಾನ ವಿಶ್ವಕೋಶಕ್ಕೆ ಬಜೆಟ್ನಲ್ಲಿ ಅನುದಾನ ಒದಗಿಸಲು ಮುಖ್ಯಮಂತ್ರಿ ಅವರ ಜತೆಗೂ ಮಾತನಾಡುತ್ತೇನೆ. ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸ ಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ, ಅಶೋಕ ಎನ್. ಚಲವಾದಿ, ಬನಶಂಕರಿ ವಿ. ಅಂಗಡಿ, ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಇದ್ದರು.