Friday, 7th October 2022

ಯುವ ಲೆಕ್ಕ ಪರಿಶೋಧಕಿ ಅಸೌಖ್ಯದಿಂದ ನಿಧನ

ಶಿರ್ವ: ಯುವ ಲೆಕ್ಕ ಪರಿಶೋಧಕಿ ಫ್ರಾನ್ಸಿನ್‌ ಶೈನಿ ಮೆನೇಜಸ್‌ (30)ಅವರು ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಬಂಟಕಲ್ಲು ಮಾಪಾಡಿ ನಿವಾಸಿ ಫೆಡ್ರಿಕ್‌ ಮೆನೇಜಸ್‌ ಅವರ ಪುತ್ರಿ ಪ್ರತಿಭಾನ್ವಿತೆ. 2016ರಲ್ಲಿ ಉನ್ನತ ರ್‍ಯಾಂಕ್‌ನೊಂದಿಗೆ ಸಿಎ ಪದವಿ ಪೂರೈಸಿದ್ದರು. ಬೆಂಗಳೂರು ಮತ್ತು ಲಂಡನ್‌ನಲ್ಲಿ ಲೆಕ್ಕ ಪರಿಶೋಧಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಪಾಂಬೂರು ಹೋಲಿ ಕ್ರಾಸ್‌ ಚರ್ಚಿನ ಐಸಿವೈಎಂ ಯುವ ಸಂಘ‌ಟನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಶಿರ್ವ ವಲಯದ ಐಸಿವೈಎಂ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.