ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರಂಜಿತ್​ ಎಚ್​ ಅಶ್ವತ್ಥ್

columnist

info74@vishwavani.news

ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Ranjith H Ashwath Column: ಉಪಾಹಾರ ಸಭೆಯಿಂದ ಕೊಟ್ಟ ಸಂದೇಶವೇನು ?

Ranjith H Ashwath Column: ಉಪಾಹಾರ ಸಭೆಯಿಂದ ಕೊಟ್ಟ ಸಂದೇಶವೇನು ?

ಕೆಲವೊಮ್ಮೆ ಪಕ್ಷಗಳ ವಿಭಜನೆ, ಅಧಃಪತನಕ್ಕೆ ಕಾರಣವಾಗಿವೆ. ಆದರೆ ಕರ್ನಾಟಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆದ ನಾಯಕತ್ವ ಬದಲಾವಣೆಯ ಕಿತ್ತಾಟ ಹಲವು ಹೈಡ್ರಾಮಾಕ್ಕೆ ಸಾಕ್ಷಿಯಾದರೂ, ಅಂತಿಮವಾಗಿ ಬ್ರೇಕ್ ಫಾಸ್ಟ್ ಸಭೆಯೊಂದರಲ್ಲಿಯೇ ಎಲ್ಲ ಸಮಸ್ಯೆ ಬಗೆಹರಿದು ‘ನಾವೆಲ್ಲ ಒಂದೇ’ ಎನ್ನುವ ಸಂದೇಶವನ್ನು ಇಬ್ಬರೂ ನಾಯಕರು ರವಾನಿಸಿದ್ದಾರೆ.

Ranjith H Ashwath Column: ಡಿಕೆ ಉಡಾಯಿಸಿದ ಕ್ಷಿಪಣಿ ಪಾಸೋ ? ಫೇಲೋ ?

ಡಿಕೆ ಉಡಾಯಿಸಿದ ಕ್ಷಿಪಣಿ ಪಾಸೋ ? ಫೇಲೋ ?

ಬಜೆಟ್ ಮುಗಿಸುವ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಅವರಿದ್ದರೆ, ‘ಒಪ್ಪಂದ’ ವಿಷಯವನ್ನು ಮುಂದಿಟ್ಟು ಎರಡೂವರೆ ವರ್ಷಕ್ಕೆ ತಮಗೆ ಸಿಎಂ ಪಟ್ಟಕಟ್ಟ ಬೇಕೆಂಬ ವಾದವನ್ನು ಡಿ.ಕೆ. ಶಿವಕುಮಾರ್ ಮಂಡಿಸುತ್ತಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಅಧಿಕಾರ ಹಂಚಿಕೆಯ ಸೂತ್ರದ ಗೊಂದಲ ಸದ್ಯ ಹೈಕಮಾಂಡ್‌ಗೂ ತಲೆಬಿಸಿಯಾಗಿದೆ.

Ranjith H Ashwath Column: ಸಿಕ್ಕ ಯಶಸ್ಸನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರೆ ?

ಸಿಕ್ಕ ಯಶಸ್ಸನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರೆ ?

ರಾಹುಲ್ ಗಾಂಧಿ ಕಾಂಗ್ರೆಸ್ ನೇತೃತ್ವ ವಹಿಸಿದ ಬಳಿಕ ಸುಮಾರು ಚುನಾವಣೆಗಳನ್ನು ಎದುರಿಸ ಲಾಗಿದೆ. ಇದರಲ್ಲಿ 95 ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆಯಂತೆ. ಪ್ರಮುಖವಾಗಿ ಹಿಮಾಚಲ ಪ್ರದೇಶ (2007, 2017), ಪಂಜಾಬ್ (2007, 2012, 2022), ಗುಜರಾತ್ (2007, 2012, 2017, 2022), ಮಧ್ಯಪ್ರದೇಶ (2008, 2013, 2018, 2023), ಮಹಾ ರಾಷ್ಟ್ರ (2014, 2019, 2024) ಮತ್ತು ದೆಹಲಿ, ಹರಿಯಾಣ, ಉತ್ತರಪ್ರದೇಶ, ಬಿಹಾರದಲ್ಲಿ ಸರಣಿ ಸೋಲುಗಳನ್ನು ಕಾಂಗ್ರೆಸ್ ಕಂಡಿದೆ.

Ranjith H Ashwath Column: ಆರಂಭ-ಅಂತ್ಯವಿಲ್ಲದ ಜೈಲಿನ ರಾಜಾತಿಥ್ಯ

Ranjith H Ashwath Column: ಆರಂಭ-ಅಂತ್ಯವಿಲ್ಲದ ಜೈಲಿನ ರಾಜಾತಿಥ್ಯ

ವಿಕೃತ ಕಾಮಿ ಉಮೇಶ್ ರೆಡ್ಡಿ ಮೊಬೈಲ್ ಹಿಡಿದು ಸೆಲ್‌ನಲ್ಲಿಯೇ ಮಾತನಾಡುತ್ತಿರುವುದು, ಐಸಿಸ್ ಜತೆ ನಂಟು ಹೊಂದಿದ್ದ ಉಗ್ರನೊಬ್ಬ ಆರಾಮಾಗಿ ವಿಡಿಯೋಗಳನ್ನು ನೋಡಿಕೊಂಡು, ಫೋನ್‌ನಲ್ಲಿ ಮಾತನಾ ಡುತ್ತಿರುವುದು ಮುಂತಾದ ದೃಶ್ಯಗಳು ಪರಪ್ಪನ ಅಗ್ರಹಾರ ಜೈಲಿನಿಂದ ವೈರಲ್ ಆಗುತ್ತಿದ್ದಂತೆ, ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Ranjith H Ashwath Column: ಒಳಗಿದ್ದ ಆರು ಮಂದಿಯಲ್ಲಿ ಹೇಳೋರ್ಯಾರು ?

Ranjith H Ashwath Column: ಒಳಗಿದ್ದ ಆರು ಮಂದಿಯಲ್ಲಿ ಹೇಳೋರ್ಯಾರು ?

ಸಂಪುಟ ಪುನಾರಚನೆ ಮಾಡಿಕೊಳ್ಳುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ‘ಫುಲ್‌ಸ್ಟಾಪ್’ ಇಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದರೆ, ಡಿ.ಕೆ.ಶಿವಕುಮಾರ್ ಅವರು ಸಂಪುಟ ಪುನಾರಚನೆಗೂ ಮೊದಲೇ ಹೈಕಮಾಂಡ್ ತಮಗೆ ನೀಡಿದೆ ಎನ್ನಲಾಗುತ್ತಿರುವ ‘ವರ’ವನ್ನು ನೆನಪಿಸಿ ಪಡೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ.

Ranjith H Ashwath Column: ಉತ್ತರಾಧಿಕಾರಿ ಘೋಷಣೆ ಸುಲಭವಲ್ಲ

Ranjith H Ashwath Column: ಉತ್ತರಾಧಿಕಾರಿ ಘೋಷಣೆ ಸುಲಭವಲ್ಲ

ಯತೀಂದ್ರ ಅವರು ಬೆಳಗಾವಿಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಮೆಚ್ಚಿಸಲು ಹೇಳಿದರೋ ಅಥವಾ ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕನ್ಯಾರು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿದರೋ ಅಥವಾ ಅವರೇ ಸಮರ್ಥಿಸಿಕೊಂಡಂತೆ ಸೈದ್ಧಾಂತಿಕ ನಾಯಕತ್ವದ ಬಗ್ಗೆ ಮಾತನಾಡಿದರೋ, ಇಲ್ಲವೇ ರಾಜ್ಯಾದ್ಯಂತ ಸದ್ದಾಗುತ್ತಿರುವಂತೆ ಸಿಎಂ ಸ್ಥಾನದ ಬಗ್ಗೆ ಮಾತನಾಡಿ ದರೋ ಗೊತ್ತಿಲ್ಲ

Ranjith H Ashwath Column: ನಿರ್ಬಂಧದ ತೀರ್ಮಾನ; ಲಾಭಕ್ಕಿಂತ ನಷ್ಟವೇ ಹೆಚ್ಚು !

ನಿರ್ಬಂಧದ ತೀರ್ಮಾನ; ಲಾಭಕ್ಕಿಂತ ನಷ್ಟವೇ ಹೆಚ್ಚು !

ಸರಕಾರ ಈಗ ಹೊರಡಿಸಿರುವ ಆದೇಶದ ಪಾಲನೆಯನ್ನು ಮೊದಲಿನಿಂದಲೇ ಮಾಡಿಕೊಂಡು ಬರುತ್ತಿರು ವಾಗ ನಮ್ಮ ಯಾವ ಕಾರ್ಯಕ್ರಮಗಳಿಗೂ ತೊಂದರೆಯಾಗುವುದಿಲ್ಲ ಎನ್ನುವ ಸ್ಪಷ್ಟತೆಯಲ್ಲಿದ್ದಾರೆ. ಹಾಗಾದರೆ, ಈ ಆದೇಶದಿಂದ ಸರಕಾರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Ranjith H Ashwath Column: ಊಟ ಮಾಡೋದು ತಪ್ಪಲ್ಲ, ಆದ್ರೆ..!

Ranjith H Ashwath Column: ಊಟ ಮಾಡೋದು ತಪ್ಪಲ್ಲ, ಆದ್ರೆ..!

ಮುಖ್ಯಮಂತ್ರಿಯಾದವರು ತಮ್ಮ ಸಂಪುಟದ ಸಚಿವರನ್ನು ಊಟಕ್ಕೆ ಆಹ್ವಾನಿಸುವುದು ಹೊಸ ದೇನಲ್ಲ. ಹಾಗೆ ನೋಡಿದರೆ, ಮುಖ್ಯಮಂತ್ರಿ ಹುದ್ದೆಯಲ್ಲಿ ಕೂತವರಲ್ಲಿ ಬಹುತೇಕರು ತಮ್ಮ ಊಟವನ್ನು ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿ ತಮ್ಮ ಆಪ್ತರು, ಸಚಿವರು ಹಾಗೂ ನಾಯಕ ರೊಂದಿಗೆ ಮಾಡುತ್ತಾರೆ. ಇದು ಸಿದ್ದರಾಮಯ್ಯ ಅವರಿಗಷ್ಟೇ ಅಲ್ಲ, ಈವರೆಗೆ ಆ ಹುದ್ದೆಯಲ್ಲಿ ಕೂತಿರುವ ಎಲ್ಲ ಮುಖ್ಯಮಂತ್ರಿ ಗಳಿಗೂ ಅನ್ವಯವಾಗುತ್ತದೆ.

ಬುರುಡೆ ಪ್ರಕರಣ: ದಿಕ್ಕು ತಪ್ಪಿತೇ ಎಸ್‌ಐಟಿ ತನಿಖೆ?

ಬುರುಡೆ ಪ್ರಕರಣ: ದಿಕ್ಕು ತಪ್ಪಿತೇ ಎಸ್‌ಐಟಿ ತನಿಖೆ?

ವಿಚಾರಣೆಯ ವೇಳೆ ಚಿನ್ನಯ್ಯ ಸಹ ತಿಮರೋಡಿ ಗ್ಯಾಂಗ್ ಹೇಳಿಕೊಟ್ಟಿದ್ದ ಗಿಳಿಪಾಠ ಮಾತ್ರ ನಾನು ಹೇಳಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದ. ಬಳಿಕ ತಿಮರೋಡಿ ನಿವಾಸದಲ್ಲಿ ನಡೆದ ಸ್ಥಳ ಮಹಜರಿನ ವೇಳೆಯೂ ಷಡ್ಯಂತ್ರದಲ್ಲಿ ತಿಮರೋಡಿ ಹಾಗೂ ಮಟ್ಟಣ್ಣನವರ್ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಷ್ಟೆಲ್ಲ ಸಾಕ್ಷ್ಯವಿದ್ದರೂ ಈವರೆಗೂ ಈ ಇಬ್ಬರ ವಿರುದ್ಧ ಕ್ರಮ ವಹಿಸದೇ ಇರುವುದು ಏಕೆ? ಎನ್ನುವ ಸಂದೇಹ ಜನರಲ್ಲಿ ಮೂಡಿದೆ.

Ranjith H Ashwath Column: ಮಾಹಿತಿಯಿಲ್ಲದಿದ್ದರೂ ವೈಜ್ಞಾನಿಕ ಸಮೀಕ್ಷೆಯೇ ?!

ಮಾಹಿತಿಯಿಲ್ಲದಿದ್ದರೂ ವೈಜ್ಞಾನಿಕ ಸಮೀಕ್ಷೆಯೇ ?!

ಎಲ್ಲ ಮಾಹಿತಿಯನ್ನು ನೀಡಲೇಬೇಕು ಎನ್ನುವ ನಿಯಮವಿಲ್ಲ ಎನ್ನುವುದನ್ನು ಹೈಕೋರ್ಟ್ ಸ್ಪಷ್ಟ ಪಡಿಸಿದೆ. ಆದರೆ ಆಧಾರ್ ಕಾರ್ಡ್, ಫೋನ್ ನಂಬರ್, ಮನೆಯ ವಿದ್ಯುತ್ ಬಿಲ್ ಅನ್ನು ನೀಡುವುದು ಅನಿವಾರ್ಯ. ಜಾತಿ ವಿಷಯದಲ್ಲಿ, ಮನೆಯಲ್ಲಿರುವ ಆಭರಣ, ಸ್ಥಿರ-ಚರಾಸ್ತಿ ವಿಷಯದಲ್ಲಿ ಹೆಚ್ಚು ಕಡಿಮೆ ಮಾಡಬಹುದು. ನಗರ ಪ್ರದೇಶದಲ್ಲಿರುವ ಬಹುತೇಕರಿಗೆ, ಈ ಬೇಸಿಕ್ ಮಾಹಿತಿಯನ್ನು ನೀಡುವ ವಿಷಯದಲ್ಲಿಯೇ ‘ತಕರಾರು’ ಇದೆ.

Ranjith H Ashwath Column: ಗುಂಡಿ ವಿಷ್ಯದಲ್ಲಿ ಎಲ್ಲರೂ ಸಮಾನ ಅಪರಾಧಿಗಳೇ !

ಗುಂಡಿ ವಿಷ್ಯದಲ್ಲಿ ಎಲ್ಲರೂ ಸಮಾನ ಅಪರಾಧಿಗಳೇ !

‘ಗುಂಡಿಯಿಲ್ಲದ ರಸ್ತೆ ನಿರ್ಮಿಸುವ’ ಕನಸು ಹೋಗಿ, ‘ಗುಂಡಿಯಿಲ್ಲದೇ ರಸ್ತೆ ಇಲ್ಲ’ ಎನ್ನುವ ಪರಿಸ್ಥಿತಿ ಯಲ್ಲಿ ಬೆಂಗಳೂರಿನ ರಸ್ತೆಗಳಿವೆ. ಇದು ಬಿಜೆಪಿ ಗುಂಡಿ, ಕಾಂಗ್ರೆಸ್ ಗುಂಡಿ ಎನ್ನುವುದು ರಾಜಕೀಯ ಹೇಳಿಕೆ ಸರಿ. ಆದರೆ ಸಾರ್ವಜನಿಕರ ದೃಷ್ಟಿಯಿಂದ ಈ ಗುಂಡಿಗಳ ವಿಷಯದಲ್ಲಿ ಎಲ್ಲ ಪಕ್ಷದವರ ಸಮಾನ ಪಾಲಿದೆ ಎನ್ನುವುದು ಸ್ಪಷ್ಟ.

Ranjith H Ashwath Column: ಜಾತಿಗಣತಿಯೆಂಬ ಜೇನುಗೂಡು

ಜಾತಿಗಣತಿಯೆಂಬ ಜೇನುಗೂಡು

ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ‘ಕೋಲ್ಡ್ ಸ್ಟೋರೇಜ್’ ಸೇರಿದ್ದ ಜಾತಿ ಗಣತಿಯ ವರದಿಯನ್ನು ಹೊರತೆಗೆಯುವುದಕ್ಕೂ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ವರದಿ ಯನ್ನು ಸಂಪುಟ ಒಪ್ಪಿದ್ದು, ಬಹಿರಂಗಗೊಳಿಸಿದ್ದು, ಅದಕ್ಕೆ ಅಲ್ಪಸಂಖ್ಯಾತ ಹಾಗೂ ದಲಿತ ಹೊರತುಪಡಿಸಿ ಬಹುತೇಕ ಸಮುದಾಯಗಳು ವಿರೋಧಿಸಿದ್ದು ಗೊತ್ತಿರು ವಂಥದ್ದೇ.

Ranjith H Ashwath : ಈ ಸಮೀಕ್ಷೆಯಲ್ಲಿ ಸಿಗುವುದೇ ಜಾತಿಗಳ ನಿಖರ ಲೆಕ್ಕ ?

ಈ ಸಮೀಕ್ಷೆಯಲ್ಲಿ ಸಿಗುವುದೇ ಜಾತಿಗಳ ನಿಖರ ಲೆಕ್ಕ ?

ದೇಶದ ರಾಜಕೀಯದಲ್ಲಿ ಒಂದೊಂದು ವಿಷಯ ಒಂದೊಂದು ರೀತಿಯ ಪ್ರಭಾವ ಬೀರುತ್ತದೆ. ಉತ್ತರ ಭಾರತ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಧರ್ಮಾಧಾರಿತ ರಾಜಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕರೆ ಕರ್ನಾಟಕದ ಮಟ್ಟಿಗೆ ಧರ್ಮಕ್ಕಿಂತ ಮಿಗಿಲಾದ ಜಾತಿ ಸಮೀಕರಣದಲ್ಲಿಯೇ ರಾಜಕೀಯದ ಆಗು-ಹೋಗುಗಳಾಗುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

Ranjith H Ashwath Column: ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

ಒಂದು ವೇಳೆ ಬ್ಯಾಲೆಟ್ ಪೇಪರ್ ಬಳಸಿಕೊಂಡು ಕಾಂಗ್ರೆಸ್ಸಿಗರು ಗೆದ್ದರೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ‘ಮತಗಳ್ಳತನ’ದ ಆರೋಪವನ್ನೇ ಮತ್ತೊಂದು ಸ್ವರೂಪದಲ್ಲಿ ಬಿಜೆಪಿಗರು ಮಾಡುತ್ತಾರೆ. ಒಂದು ವೇಳೆ ಕಾಂಗ್ರೆಸ್ ಮೇಲುಗೈ ಸಾಧಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೊಂದು ರೀತಿಯ ಟೀಕೆ ಮಾಡುವುದಂತೂ ಸತ್ಯ.

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಉರ್ದು ಶಿಕ್ಷಕರಿಗೆ ಕನ್ನಡ ಅಥವಾ ಇಂಗ್ಲಿಷ್ ಬಾರದಿರುವುದರಿಂದ, ಅವರು ಉರ್ದು ವಿನಲ್ಲಿಯೇ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕ. ಉರ್ದು ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಕನ್ನಡವೂ ಗೊತ್ತಿಲ್ಲ. ಅವರು ಉರ್ದುವಿನಲ್ಲಿಯೇ ಪಾಠ ಮಾಡಿದರೆ, ನಮಗೆ ಅರ್ಥವಾಗುವುದಿಲ್ಲ.

Ranjith H Ashwath Column: ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?

ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?

ಧರ್ಮಸ್ಥಳ ಬುರುಡೆ ಪ್ರಕರಣ ಹೋಗಲಿ, ಕೆಲ ದಿನಗಳ ಹಿಂದೆ ಕೋಲಾರದಲ್ಲಿ ಪ್ರೀತಿಯ ವಿಷಯ ದಲ್ಲಿ ನಡೆದ ಕೊಲೆಯನ್ನೂ ಎನ್‌ಐಎಗೆ ವಹಿಸಬೇಕು ಎನ್ನುವ ಆಗ್ರಹವನ್ನು ಬಿಜೆಪಿ ನಾಯಕರು ಮಾಡಿ ದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದ ಅವಧಿಯಲ್ಲಿ ಕನಿಷ್ಠ 10 ಪ್ರಕರಣಗಳನ್ನು ಸಿಬಿಐಗೆ ವಹಿಸ ಬೇಕು ಎಂದು ಬಿಜೆಪಿಗರು ಆಗ್ರಹಿಸಿದ್ದರು.

Ranjith H Ashwath Column: ಬೌ ಬೌ ಸಂಘರ್ಷ ಗಂಭೀರವಾದುದು

Ranjith H Ashwath Column: ಬೌ ಬೌ ಸಂಘರ್ಷ ಗಂಭೀರವಾದುದು

ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ನೀಡುವುದಕ್ಕಾಗಿಯೇ ಬಿಬಿಎಂಪಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸುಮಾರು 4.71 ಕೋಟಿ ರು. ಹಣವನ್ನು ಎತ್ತಿಟ್ಟಿದೆ. ಪೌಷ್ಟಿಕಾಂಶ ಅಥವಾ ಆಹಾರ ಸಿಗದ ಸಮಯದಲ್ಲಿ ಜನರ ಮೇಲೆ ಎಗರುತ್ತವೆ ಎನ್ನುವ ಕಾರಣಕ್ಕೆ ಬಿಬಿಎಂಪಿಯಿಂದಲೇ ಬೀದಿನಾಯಿ ಗಳಿಗೆ ಆಹಾರ ನೀಡುವ ಉಪಕ್ರಮಕ್ಕೆಂದೇ 2.88 ಕೋಟಿ ರು. ಮೀಸಲಿಡಲಾಗಿದೆ.

Ranjith H Ashwath Column: ಬುರುಡೆ ಪ್ರಕರಣದಲ್ಲಿ ಕೊನೆಗೆ ಸಿಕ್ಕಿದ್ದೇನು ?

ಬುರುಡೆ ಪ್ರಕರಣದಲ್ಲಿ ಕೊನೆಗೆ ಸಿಕ್ಕಿದ್ದೇನು ?

ಕಳೆದೊಂದು ತಿಂಗಳಿನಿಂದ ರಾಜ್ಯದ ಅರಳಿಕಟ್ಟೆಗಳಿಂದ ಹಿಡಿದು ಸಾಮಾಜಿಕ ಜಾಲತಾಣ, ಮಾಧ್ಯಮ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸದ್ದಾಗುತ್ತಿರುವ ಏಕೈಕ ವಿಷಯ ಧರ್ಮಸ್ಥಳದ ಅನಾಮಧೇಯ ವ್ಯಕ್ತಿಯ ಬುರುಡೆ ಪ್ರಕರಣ. ವ್ಯಕ್ತಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬುರುಡೆ ಸಮೇತ ಬಂದಿದ್ದು, ಬಳಿಕ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದು, ನಂತರ ಎಸ್‌ಐಟಿ ರಚನೆಯಾಗಿದ್ದು ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯ.

ದಿಕ್ಕಿಲ್ಲದೇ ಸಾಗುತ್ತಿರುವ ತನಿಖೆಗೆ ಬೇಕಿದೆ ಲಗಾಮು

ದಿಕ್ಕಿಲ್ಲದೇ ಸಾಗುತ್ತಿರುವ ತನಿಖೆಗೆ ಬೇಕಿದೆ ಲಗಾಮು

ನಿತ್ಯ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅರ್ಥವಿಲ್ಲದ ತನಿಖೆಯನ್ನು ಕೂಡಲೇ ಸ್ಥಗಿತಗೊಳಿಸ ದಿದ್ದರೆ ವಿಶೇಷ ತನಿಖಾ ತಂಡದ ‘ಅಣಕ’ವಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಸದ್ದು ಮಾಡುತ್ತಿರುವ ‘ಮುಸುಕುಧಾರಿ ವ್ಯಕ್ತಿ’ಯ ಬುರುಡೆ ರಹಸ್ಯ ಆರಂಭದಲ್ಲಿ ರೋಚಕವಾಗಿ ಕಂಡರೂ, ‘ಗುಂಡಿ’ ತೋಡುವ ಕಾರ್ಯಾರಂಭಗೊಂಡು ನಿತ್ಯ ‘ಖಾಲಿ’ ಕೈಯಲ್ಲಿ ವಾಪಸಾಗಿದ್ದರಿಂದ ಎಸ್‌ಐಟಿಯ ತನಿಖೆಗೇ ಅರ್ಥವಿಲ್ಲದಂತಾಗಿದೆ.

Ranjith H Ashwath Column: 'ರಾಜಕೀಯʼ ಸಂಘರ್ಷಕ್ಕೆ ಶಿಕ್ಷಣ ನಲುಗದಿರಲಿ

Ranjith H Ashwath Column: 'ರಾಜಕೀಯʼ ಸಂಘರ್ಷಕ್ಕೆ ಶಿಕ್ಷಣ ನಲುಗದಿರಲಿ

ಸಾಧಕ-ಬಾಧಕದ ಬಗ್ಗೆ ಯೋಚಿಸುವುದಕ್ಕಿಂತ ಯಾರು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದರ ಮೇಲೆ, ನಮ್ಮಲ್ಲಿನ ಪರ-ವಿರೋಧ ಚರ್ಚೆಗಳು ನಡೆಯುವುದು ಸಾಮಾನ್ಯ. ಕೇಂದ್ರ ಸರಕಾರ ಜಾರಿ ಗೊಳಿಸಿರುವ ಹಲವು ಯೋಜನೆಗಳನ್ನು ವಿರೋಧಿಸಿಕೊಂಡೇ ಬಂದಿರುವ ಕಾಂಗ್ರೆಸ್ ‘ಸಹಜ’ ಎನ್ನುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿತ್ತು.

Ranjith H Ashwath Column: ಮತಗಳ್ಳತನವನ್ನು ಸಾಕ್ಷ್ಯ ಸಮೇತ ಕಟ್ಟಿಹಾಕಲಿ !

ಮತಗಳ್ಳತನವನ್ನು ಸಾಕ್ಷ್ಯ ಸಮೇತ ಕಟ್ಟಿಹಾಕಲಿ !

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೂ ಅಸಾಧ್ಯವೆನ್ನಲು ಸಾಧ್ಯವಿಲ್ಲ ಎನ್ನುವುದಕ್ಕೆ ಈಗಿನ ‘ಮತಗಳ್ಳತನ’ದ ಆರೋಪವೇ ಸ್ಪಷ್ಟ ಉದಾಹರಣೆ. ಹೌದು, ಕಳೆದ ಒಂದೆರಡು ವಾರಗಳಿಂದ ಇಡೀ ದೇಶದಲ್ಲಿ ಸದ್ದಾಗುತ್ತಿರುವುದು ‘ಮತಗಳ್ಳತನ’ದ ಆರೋಪ. ಇದಕ್ಕೂ ಮೊದಲು ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆಯ ವಿವಾದ ಶುರುವಾಗಿತ್ತು.

Ranjith H Ashwath Column: ಬೀಸೋ ದೊಣ್ಣೆಯಿಂದ ಪಾರಾಗಲು ಹೀಗೊಂದು ಅಸ್ತ್ರ !

ಬೀಸೋ ದೊಣ್ಣೆಯಿಂದ ಪಾರಾಗಲು ಹೀಗೊಂದು ಅಸ್ತ್ರ !

ಯಾವುದೇ ವಿವಾದ ಸೃಷ್ಟಿಯಾಗಿ ಅದಕ್ಕೊಂದು ತಾರ್ಕಿಕ ಅಂತ್ಯ ನೀಡದೇ, ಆ ಕ್ಷಣದಿಂದ ತಪ್ಪಿಸಿಕೊಳ್ಳಬೇಕು ಎಂದು ಸರಕಾರ ತೀರ್ಮಾನಿಸಿದರೆ ರಚನೆಯಾಗುವುದೇ ವಿಶೇಷ ತನಿಖಾ ತಂಡವೆಂದರೆ ತಪ್ಪಾಗುವುದಿಲ್ಲ. ಈ ಎಸ್ಐಟಿಗೆ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಅವರಿಗೆ ಇಂತಿಷ್ಟು ಸಮಯದಲ್ಲಿಯೇ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿ, ಅದಕ್ಕಾಗಿ ಒಂದು ಅಧಿಕಾರಿಗಳ ತಂಡ, ಕಚೇರಿಯನ್ನು ಸೃಷ್ಟಿಸಿದರೆ ಅಲ್ಲಿಗೆ ಆ ವಿವಾದದ ಕಾವು ಆರಿದಂತೆ.

Ranjith H Ashwath Column: ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ

ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ

ಪಕ್ಷದ ನಾಯಕರ ನಡುವಿನ ತಿಕ್ಕಾಟವಿದ್ದರೂ, ಇದರಲ್ಲಿ ಅತಿಹೆಚ್ಚು ಸಮಸ್ಯೆಗೆ ಒಳಗಾಗಿದ್ದು ಮಾತ್ರ ಸಂಘಟನೆ. ಏಕೆಂದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇತ್ತ ಪಕ್ಷವನ್ನೂ ಬಿಟ್ಟುಕೊಡಲಾಗದೇ, ಅತ್ತ ನಾಯಕರನ್ನೂ ಬಿಟ್ಟುಕೊಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಉದಾಹರಣೆಗೆ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ ಅಥವಾ ಜಿ.ಎಂ.ಸಿದ್ದೇಶ್ವರ ಅವರೊಂದಿಗೆ ದಶಕಗಳ ಕಾಲ ಗುರುತಿಸಿಕೊಂಡಿರುವ ಪಕ್ಷದ ಕಾರ್ಯಕರ್ತರು ಈಗ ರಾಜ್ಯಾಧ್ಯಕ್ಷ ಹಾಗೂ ತಮ್ಮ ನಾಯಕನ ನಡುವೆ ಭಿನ್ನಮತ ಉಂಟಾದ ಮಾತ್ರಕ್ಕೆ ಇತ್ತ ನಾಯಕರನ್ನು ಬಿಡಲಾಗದೇ, ಅತ್ತ ಪಕ್ಷವನ್ನೂ ಬಿಡಲಾಗದ ಸ್ಥಿತಿಗೆ ಬಂದು ನಿಂತಿದ್ದಾರೆ.

Ranjith H Ashwath Column: ಹೈಕಮಾಂಡ್‌ ಅನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಕರ್ನಾಟಕ

ಹೈಕಮಾಂಡ್‌ ಅನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಕರ್ನಾಟಕ

‘ನಾನೇ ಸಿಎಂ’ ಎಂದಿದ್ದ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೂತು ಸುದ್ದಿಗೋಷ್ಠಿ ನಡೆಸುವ ಮೂಲಕ ಇದೇ ಸಂದೇಶವನ್ನು ರವಾನಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ದರು. ರಾಜಸ್ಥಾನದ ಅನುಭವವನ್ನು ನೋಡಿದ್ದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಬಣಕ್ಕೆ ‘ಡೋಂಟ್ ರಿಯಾಕ್ಟ್’ ಎನ್ನುವ ಸಂದೇಶವನ್ನು ರವಾನಿಸಿದೆ ಎನ್ನುವುದು ಸ್ಪಷ್ಟ.

Loading...