ಅಕ್ಕ ಕೇಳವ್ವಾ… ಫಿಲಡೆಲ್ಫಿಯಾದಲ್ಲಿ ಕರ್ನಾಟಕವಾ ಕಂಡೆ..
ಪೆನ್ವಿಲ್ವೇನಿಯಾ ಕನ್ವೆನ್ಷನ್ ಸೆಂಟರ್ ಮೂವತ್ತು ಸಾವಿರ ಜನರು ಸೇರಬಹುದಾದಷ್ಟು ದೊಡ್ಡ ಒಳಾಂಗಣ. ಅಲ್ಲಿ ಆರೇಳು ಸಾವಿರ ಜನರು ಏಕಕಾಲದಲ್ಲಿ ಕುಳಿತುಕೊಳ್ಳುವಷ್ಟು ದೊಡ್ಡ ಹಾಲ್- ಮುಖ್ಯ ವೇದಿಕೆ. ಅಲ್ಲಿಯೇ ಎಲ್ಲ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದದ್ದು. ಸುಮಾರು ನಾಲ್ಕೆ ದುನೂರು ಜನರು ಕುಳಿತುಕೊಳ್ಳುವ ಇನ್ನೂ ನಾಲ್ಕು ವೇದಿಕೆಗಳು. ಅದರ ನಡುವೆ ಸುಮಾರು ಇಪ್ಪತ್ತು ಮೀಟರಿಗಿಂತ ಜಾಸ್ತಿ ಅಗಲದ ಕಾರಿಡಾರ್- ರಾಜ ಹಜಾರಗಳು.