ಬೆಂಗಳೂರಿನ ಗೋಲ್ಡ್ ಫಿಂಚ್ ಹೊಟೇಲ್: ಆತಿಥ್ಯಕ್ಕೆ ಹೊಸ ಹೆಸರು
Goldfinch Hotel Bengaluru: ಬೆಂಗಳೂರು ನಗರದಲ್ಲಿ ಹೊಟೇಲ್ಗಳಿಗೇನೂ ಕೊರತೆಯಿಲ್ಲ. ಐಷಾರಾಮಿ ವಾಸ್ತವ್ಯಕ್ಕೆ, ವ್ಯಾವಹಾರಿಕ ಸಭೆಗಳಿಗೆ, ಕುಟುಂಬದೊಂದಿಗೆ ಸಮಯ ಕಳೆಯಲು, ರುಚಿಕರ ಆಹಾರ ಸವಿಯಲು ಹೀಗೆ ಪ್ರತಿಯೊಂದು ಅಗತ್ಯಕ್ಕೂ ಹಲವು ಆಯ್ಕೆಗಳಿವೆ. ಆದರೆ, ಒಂದೇ ಸೂರಿನಡಿ ವಾಸ್ತವ್ಯ, ಆಹಾರ, ವಿಶ್ರಾಂತಿ ಮತ್ತು ಸಮಾರಂಭಗಳ ಸೌಲಭ್ಯಗಳನ್ನು ಒದಗಿಸುವ ಹೊಟೇೆಲ್ಗಳು ನಗರದ ಆತಿಥ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ. ಅಂಥ ಹೊಟೇಲ್ಗಳ ಸಾಲಿನಲ್ಲಿ ಗಮನ ಸೆಳೆಯುವ ಹೆಸರು ಗೋಲ್ಡ್ ಫಿಂಚ್ ಬೆಂಗಳೂರು.