ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಇನ್ನೊಂದೆ ಪಂದ್ಯ ಬಾಕಿ, ಕಪ್‌ ಜೊತೆ ಬರ್ತೀವಿʼ-ಆರ್‌ಸಿಬಿ ಫ್ಯಾನ್ಸ್‌ಗೆ ಮಾತು ಕೊಟ್ಟ ಪಾಟಿದಾರ್‌!

ಪಂಜಾಬ್‌ ಕಿಂಗ್ಸ್‌ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 8 ವಿಕೆಟ್‌ಗಳ ಸುಲಭ ಗೆಲುವನ್ನು ತನ್ನದಾಗಿಸಿಕೊಂಡಿತು. ಆ ಮೂಲಕ ನಾಲ್ಕನೇ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದೆ. ಪಂದ್ಯದ ಬಳಿಕ ಆರ್‌ಸಿಬಿ ಅಭಿಮಾನಿಗಳಿಗೆ ರಜತ್‌ ಪಾಟಿದಾರ್‌ ವಿಶೇಷ ಸಂದೇಶವನ್ನು ನೀಡಿದ್ದಾರೆ.

1/7

ನಾಲ್ಕನೇ ಬಾರಿ ಫೈನಲ್‌ಗೇರಿದ ಆರ್‌ಸಿಬಿ

ಪಂಜಾಬ್‌ ಕಿಂಗ್ಸ್‌ ವಿರುದ್ಧ ಮೊದಲನೇ ಕ್ವಾಲಿಫೈಯರ್‌ನಲ್ಲಿ 8 ವಿಕೆಟ್‌ ಗೆಲುವು ಪಡೆಯುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ. 2009, 2011 ಹಾಗೂ 2016ರ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದಂತಾಯಿತು.

2/7

101 ರನ್‌ಗಳಿಗೆ ಪಂಜಾಬ್‌ ಆಲ್‌ಔಟ್‌

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌, ಸುಯಶ್‌ ಶರ್ಮಾ ಹಾಗೂ ಜಾಶ್‌ ಹೇಝಲ್‌ವುಡ್‌ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ 14.1 ಓವರ್‌ಗಳಿಗೆ 101 ರನ್‌ಗಳಿಗೆ ಆಲ್‌ಔಟ್‌ ಆಯಿತು.

3/7

ಫಿಲ್‌ ಸಾಲ್ಟ್‌ ಸ್ಪೋಟಕ ಅರ್ಧಶತಕ

ಸಾಧಾರಣ ಗುರಿಯನ್ನು ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಫಿಲ್‌ ಸಾಲ್ಟ್‌ (56*) ಅವರ ಸ್ಪೋಟಕ ಅರ್ಧಶತಕದ ಬಲದಿಂದ 10 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ 8 ವಿಕೆಟ್‌ ಗೆಲುವು ಪಡೆಯಿತು. 17 ರನ್‌ ನೀಡಿ 3 ವಿಕೆಟ್‌ ಕಿತ್ತ ಸುಯಶ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

4/7

ನಾವು ಜೊತೆಯಾಗಿ ಸಂಭ್ರಮಿಸೋಣ

ಪಂದ್ಯದ ಬಳಿಕ ಮಾತನಾಡಿದ ರಜತ್‌ ಪಾಟಿದಾರ್‌,"ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರವಲ್ಲ, ನಾವು ಎಲ್ಲಿ ಹೋದರೂ ತವರು ಅಂಗಣದಲ್ಲಿ ಆಡುತ್ತಿದ್ದೇವೆಂದು ಅನಿಸುತ್ತದೆ, ಇದಕ್ಕಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕು. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಇನ್ನು ಕೇವಲ ಒಂದು ಪಂದ್ಯ ಮಾತ್ರ ಬಾಕಿ ಇದೆ ಹಾಗೂ ನಾವು ಜೊತೆಯಾಗಿ ಸಂಭ್ರಮಿಸೋಣ," ಎಂದು ಹೇಳಿದ್ದಾರೆ.

5/7

ಬೌಲರ್‌ಗಳನ್ನು ಶ್ಲಾಘಿಸಿದ ಪಾಟಿದಾರ್‌

"ಬೌಲಿಂಗ್‌ ಯೋಜನೆಗಳ ಬಗ್ಗೆ ನಾವು ಸ್ಪಷ್ಟವಾಗಿದ್ದೆವು. ಇಲ್ಲಿನ ಪಿಚ್‌ ಅನ್ನು ಫಾಸ್ಟ್‌ ಬೌಲರ್‌ಗಳು ಅದ್ಭುತವಾಗಿ ಬಳಿಸಿಕೊಂಡಿದ್ದಾರೆ. ಸುಯಶ್‌ ಶರ್ಮಾ ಅವರ ಬೌಲ್‌ ಮಾಡಿದ್ದ ಲೈನ್‌ ಅಂಡ್‌ ಲೆನ್ತ್‌ ಅಸಾಧಾರಣವಾಗಿತ್ತು," ಎಂದು ಆರ್‌ಸಿಬಿ ಕ್ಯಾಪ್ಟನ್‌ ಬೌಲರ್‌ಗಳನ್ನು ಗುಣಗಾನ ಮಾಡಿದ್ದಾರೆ.

6/7

ಸುಯಶ್‌ ಶರ್ಮಾಗೆ ಮೆಚ್ಚುಗೆ

"ಸುಯಶ್‌ ಶರ್ಮಾ ಅವರ ಬೌಲಿಂಗ್‌ ಸ್ಟ್ರೆನ್ತ್‌ ಸ್ಟಂಪ್‌ ಮೇಲೆ ಚೆಂಡನ್ನು ಹಾಕುವುದು. ಅವರ ಗೂಗ್ಲಿಯಲ್ಲಿ ಚೆಂಡನ್ನು ಹೊಡೆಯುವುದು ತುಂಬಾ ಕಷ್ಟ. ಅವರನ್ನು ನಾನು ಗಲಿಬಿಲಿಗೊಳಿಸುವುದಿಲ್ಲ. ಅವರು ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ," ಎಂದು

ಪಾಟಿದಾರ್‌ ತಿಳಿಸಿದ್ದಾರೆ.

7/7

ಜೂನ್‌ 3ರಂದು ಫೈನಲ್‌ ಪಂದ್ಯ

ಮೇ 30 ರಂದು ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಜೂನ್‌ ಒಂದರಂದು ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿವೆ. ಈ ಪಂದ್ಯವನ್ನು ಗೆದ್ದ ತಂಡದ ವಿರುದ್ಧ ಆರ್‌ಸಿಬಿ ಜೂನ್‌ 3 ರಂದು ಫೈನಲ್‌ನಲ್ಲಿ ಕಾದಾಟ ನಡೆಸಲಿದೆ.