ಕಾರುಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಬೇಕಿದ್ದರೆ ಹೀಗೆ ಮಾಡಿ
ಹರಿಯಾಣದ ರೋಡ್ಟ್ರಾನ್ನಲ್ಲಿ ನಡೆದ ಇತ್ತೀಚಿನ ಆನ್ಲೈನ್ ಹರಾಜು ಭಾರೀ ಸದ್ದು ಮಾಡುತ್ತಿದ್ದು, ‘HR88B8888’ ಎಂಬ ಫ್ಯಾನ್ಸಿ ನಂಬರ್ಪ್ಲೇಟ್ಗೆ ನಡೆದ ಬಿರುಸಿನ ಪೈಪೋಟಿ ನಡೆದು 1.17 ಕೋಟಿಗೆ ಮಾರಾಟಾವಾಗಿದೆ. ದೇಶದ ಅತ್ಯಂತ ದುಬಾರಿ ನೋಂದಣಿ ಸಂಖ್ಯೆ ಎಂಬ ಬಿರುದನ್ನು ಪಡೆದುಕೊಂಡಿದ್ದು, ಈ ಮೊದಲು ಕೇರಳದ ‘KL 07 DG 0007’ ಎಂಬ ನಂಬರ್ ₹46 ಲಕ್ಷಕ್ಕೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದ್ದರೂ,ಇದೀಗ ಹರಿಯಾಣದ ಈ ನಂಬರ್ ಆ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದೆ. ನಿಮ್ಗೂ ಇದೇ ರೀತಿಯ ಫ್ಯಾನ್ಸಿ ನಂಬರ್ ಬೇಕಿದ್ದರೆ ಈ ರೀತಿ ಮಾಡಿ.