ಟಾಮ್ ಬಾಯ್ ಹುಡುಗಿಯರಿಗಾಗಿ ಬಂತು ನಯಾ ವಿನ್ಯಾಸದ ಬೂಟ್ಸ್
Winter Fashion: ಟಾಮ್ ಬಾಯ್ ಇಮೇಜ್ ಬಯಸುವವರ ಪಾದಗಳನ್ನು ಅಲಂಕರಿಸಲು ಇದೀಗ ಈ ವಿಂಟರ್ ಸೀಸನ್ನಲ್ಲಿ ನಯಾ ಡಿಸೈನ್ನ ಬೂಟ್ಸ್ ಕಾಲಿಟ್ಟಿವೆ. ಅವು ಯಾವುವು? ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
Actress Raashi Khanna: ಬಾಲಿವುಡ್ ನಟಿ ರಾಶಿ ಖನ್ನಾ ಬಾಡಿಕಾನ್ ಕಾರ್ಸೆಟ್ ಡ್ರೇಪ್ಡ್ ಗೌನ್ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಲೀವೆಜ್ ಕಾಣಿಸುವಂತಹ ಡೀಪ್ ಡಿಸೈನ್ನ ಬಾಡಿಕಾನ್ ಕಾರ್ಸೆಟ್ ಡ್ರೇಪ್ಡ್ ಗೌನ್ನಲ್ಲಿ ರಾಶಿ ಖನ್ನಾ ಕಾಣಿಸಿಕೊಂಡಿದ್ದು, ಫ್ಯಾಷನ್ ಪ್ರಿಯರ ಹುಬ್ಬೇರಿದೆ. ಇದ್ಯಾವ ಬಗೆಯ ಡಿಸೈನರ್ವೇರ್? ವಿಶೇಷತೆಯೇನು? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
Scarf fashion : ಚಳಿಗಾಲದ ಫ್ಯಾಷನ್ನಲ್ಲಿ ಲೇಯರ್ ಲುಕ್ಗೆ ಸ್ಕಾರ್ಫ್ ಧರಿಸುವ ಟ್ರೆಂಡ್ ಮರಳಿದೆ. ಇದಕ್ಕೆ ಪೂರಕ ಎಂಬಂತೆ ನಾನಾ ಬಗೆಯ ಸ್ಕಾರ್ಫ್ಗಳು ಬಿಡುಗಡೆಗೊಂಡಿವೆ. ಅದರಲ್ಲೂ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರ ಚಳಿಗಾಲದ ಡ್ರೆಸ್ಕೋಡ್ ಲಿಸ್ಟ್ಗೆ ಸೇರಿದೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.
Sequins Dress: ನೋಡಲು ಅತ್ಯಾಕರ್ಷಕವಾಗಿ ಬಿಂಬಿಸುವ ಸೆಲೆಬ್ರೆಟಿ ಲುಕ್ ನೀಡುವ ಶೈನಿಂಗ್ ಸಿಕ್ವಿನ್ಸ್ ಡ್ರೆಸ್ಗಳು ಈ ವಿಂಟರ್ ಸೀಸನ್ ಪಾರ್ಟಿ ಪ್ರಿಯ ಯುವತಿಯರನ್ನು ಸವಾರಿ ಮಾಡುತ್ತಿವೆ. ನೋಡಲು ಮಿನುಗುವ ಈ ಡ್ರೆಸ್ನ ಪ್ರತಿ ಪದರವು ಮಿಂಚುವ ಚಿಕ್ಕ ಚಿಕ್ಕ ಪ್ಲೇಟ್ ರೂಪದ ಚಮಕಿ ಮೇಟಿರಿಯಲ್ನಿಂದ ಸಿದ್ಧಪಡಿಸಲಾಗಿರುತ್ತದೆ. ಮೊದಲೆಲ್ಲಾ ಈ ಫ್ಯಾಬ್ರಿಕ್ ಡಾನ್ಸ್ ಡಿಸೈನರ್ವೇರ್ಗಳಿಗೆ ಅತಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದೀಗ ಇದರ ರೂಪ ವಿನ್ಯಾಸ ಬದಲಾಗಿದ್ದು, ಪರಿವರ್ತನೆಗೊಂಡಿದೆ. ಬೆಳಕು ಬಿದ್ದರೇ ಸಾಕು, ಮಿನುಗುವ ಈ ಡ್ರೆಸ್, ನೂರು ಜನರ ಮಧ್ಯೆಯೂ ಎದ್ದು ಕಾಣಿಸುತ್ತದೆ. ಈ ಟ್ರೆಂಡಿ ಔಟ್ಫಿಟ್ಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್.
Crop Sweaters: ಚಳಿಗಾಲದಲ್ಲಿ ಹುಡುಗಿಯರಿಗೆ ಗ್ಲಾಮರಸ್ ಲುಕ್ ನೀಡಲು ನಾನಾ ಬಗೆಯ ಕ್ರಾಪ್ ಆದ ಸ್ವೆಟರ್ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಟೀನೇಜ್ ಹುಡುಗಿಯರನ್ನು ಬರಸೆಳೆದಿವೆ. ನಾರ್ಮಲ್ ಪ್ಯಾಂಟ್, ಪಲಾಜೊ, ಕೇಪ್ರಿಸ್ಗಳಿಗೂ ಕ್ರಾಪ್ ಆದ ಸ್ವೆಟರ್ ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಧರಿಸಿದಾಗ ಪ್ಯಾಂಟ್ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಕ್ರಾಪ್ ಟಾಪ್ಗಳಿಗೆ ಮ್ಯಾಚ್ ಆಗಬೇಕು. ಕ್ರಾಪ್ ಆದ ಸ್ವೆಟರ್ಗಳನ್ನು ಸೆಮಿ ಫಾರ್ಮಲ್ ಉಡುಪುಗಳಿಗೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಈ ಕುರಿತಂತೆ ಇಲ್ಲಿದೆ ವಿವರ.
Winter Fashion: ಈ ಮೊದಲು ವಿದೇಶಿ ಫ್ಯಾಷನ್ನಲ್ಲಿ ಸೀಮಿತವಾಗಿದ್ದ ವೈವಿಧ್ಯಮಯ ಟ್ರೆಂಚ್ ಕೋಟ್ಗಳು, ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ. ಟ್ರೆಂಚ್ ಕೋಟ್ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್ ಲುಕ್, ಫಾರ್ಮಲ್ ಬ್ಲೇಜರ್ ಸ್ಟೈಲ್ನಲ್ಲೂ ದೊರಕುತ್ತವೆ. ವಿಂಟರ್ಗೆ ಹೊಸ ಲುಕ್ ಮೂಡಿಸುತ್ತವೆ. ಸಿಂಪಲ್ ಟಾಪ್ ಧರಿಸಿದರೇ ಸಾಕು, ಇನ್ನು, ವಿಂಟೇಜ್ ಹಾಗೂ ರಾಯಲ್ ಕಲರ್ಗಳ ಟ್ರೆಂಚ್ ಕೋಟ್ಗಳು ಎಂತಹವರಿಗೂ ಕ್ಲಾಸಿ ಲುಕ್ ನೀಡುತ್ತವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ. ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.
Mehandi Awareness: ಇತ್ತೀಚೆಗೆ ಉದ್ಯಾನನಗರಿ ಮಾತ್ರವಲ್ಲ, ರಾಜ್ಯದ ನಾನಾ ಕಡೆಯ ಪ್ರಮುಖ ಬೀದಿ ಬದಿಗಳಲ್ಲಿಯೂ ಕೈಗಳಿಗೆ ಮದರಂಗಿ ಚಿತ್ತಾರ ಮೂಡಿಸುವ ಉತ್ತರ ಭಾರತದ ಕಲಾಕಾರರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ದೂರದ ಉತ್ತರ ಭಾರತದಿಂದ ಬಂದಂತಹ ಇಂತಹ ಸಾಕಷ್ಟು ಮಂದಿ ಮೆಹೆಂದಿ ಕಲಾಕಾರರು ಇದೀಗ ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದ ನಾನಾ ಕಡೆಗಳಲ್ಲಿ ಸ್ಟ್ರೀಟ್ ಶಾಪಿಂಗ್ ಪ್ರಿಯ ಮಹಿಳೆಯರನ್ನು ಸೆಳೆಯತೊಡಗಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.