ʻಅಮೃತ ಅಂಜನ್ʼ ಚಿತ್ರದ ಟ್ರೈಲರ್ ಬಿಡುಗಡೆ ; ಸಿನಿಮಾ ರಿಲೀಸ್ ಯಾವಾಗ?
Kannada Movie: ಈಗಾಗಲೇ ಕಿರು ಚಿತ್ರದ ಮೂಲಕ ಸಂಪೂರ್ಣ ಮನೋರಂಜನೆ ನೀಡಿದಂತಹ "ಅಮೃತಾಂಜನ್" ಪ್ರೇಕ್ಷಕರ ಮನಸನ್ನ ಗೆದ್ದು ಮಿಲಿಯನ್ಸ್ ಗಟ್ಟಲೆ ವ್ಯೂಸನ್ನು ಪಡೆದುಕೊಂಡಿತ್ತು. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ತಂಡ ಸೇರಿಕೊಂಡು "ಅಮೃತ ಅಂಜನ್" ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಜಿ ಟಿ ಮಾಲ್ ನಲ್ಲಿರುವ ಉತ್ಸವ್ ಲಗಸಿಯಲ್ಲಿ ಆಯೋಜನೆ ಮಾಡಿದ್ದು , ವಿಶೇಷವಾಗಿ ಮಾಜಿ ಎಂಎಲ್ಸಿ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ , ಹಾಗೂ ಹಿರಿಯ ನಟಿ ಜಯಮಾಲಾ ರವರ ಮೂಲಕ ಟ್ರೈಲರ್ ಲೋಕಾರ್ಪಣೆ ಮಾಡಲಾಯಿತು.