ಅಮೃತಸರ- ದೆಹಲಿ ರೈಲು ಮಾರ್ಗದಲ್ಲಿ ಸ್ಫೋಟ
ಪಂಜಾಬ್ನ ಫತೇಘರ್ ಸಾಹಿಬ್ ಜಿಲ್ಲೆಯ ಖಾನ್ಪುರ್ ಗ್ರಾಮದ ಸಿರ್ಹಿಂದ್ ಬಳಿ ಅಮೃತಸರ- ದೆಹಲಿ ರೈಲು ಮಾರ್ಗದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಸರಕು ರೈಲು ಹಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಲೋಕೋ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.