'ನೋವಾ'ದ ಆ ಗಾಯವನ್ನು ಇಸ್ರೇಲ್ ದಶಕಗಳ ಕಾಲ ಹಸಿಯಾಗಿರಿಸಲಿದೆ!
ಇಸ್ರೇಲ್ನ ನೋವಾ ಸೈಟ್ 2023ರ ಅಕ್ಟೋಬರ್ನಲ್ಲಿ 7ರಂದು ಅಕ್ಷರಶಃ ರುದ್ರಭೂಮಿಯಾಗಿತ್ತು. ವಾರಕ್ಕೊಮ್ಮೆ ಇಸ್ರೇಲಿ ಯುವ ಜನ ಚಿಟ್ಟೆಗಳಂತೆ ಸಂಭ್ರಮಿಸುವ ಸ್ಥಳ ಅಂದು ಮಸಣ ಭೂಮಿಯಂತಾಗಿತ್ತು. ಅಕ್ಟೋಬರ್ 6ರ ಇಳಿ ಸಂಜೆ ಸೂಪರ್ ನೋವಾ ಮ್ಯೂಸಿಕಲ್ ಫೆಸ್ಟಿವಲ್ ಆಯೋಜಿಸಲಾಗಿತ್ತು. ಸುಮಾರು 4,000 ಇಸ್ರೇಲಿ ಯುವ ಜನ ಅಲ್ಲಿ ಸೇರಿದ್ದರು. ರಾತ್ರಿಯಿಡೀ ಹಾಡಿ, ಕುಣಿದು ಇನ್ನೇನು ಮನೆಗೆ ಮರಳುವ ಹೊತ್ತು. ಈ ವೇಳೆ ಹಮಾಸ್ ಉಗ್ರರ ಭೀಕರ ದಾಳಿ ನಡೆಸಿದ್ದರು. ಈ ವೇಳೆ 378 ಮಂದಿ ಮೃತಪಟ್ಟಿದ್ದರು. ಈ ಘಟನೆಯನ್ನು ನೆನೆದು ಅಲ್ಲಿನ ಜನ ಈಗಲೂ ದುಃಖಿತರಾಗುತ್ತಾರೆ.